Advertisement

Today Kuwait ವಿರುದ್ಧ ಸ್ಯಾಫ್ ಫೈನಲ್‌: 9ನೇ ಪ್ರಶಸ್ತಿಗೆ ಕಾದಿದೆ ಭಾರತ

11:36 PM Jul 03, 2023 | Team Udayavani |

ಬೆಂಗಳೂರು: ಹಾಲಿ ಚಾಂಪಿಯನ್‌ ಭಾರತ 9ನೇ ಸ್ಯಾಫ್ ಚಾಂಪಿಯನ್‌ಶಿಪ್‌ ಪ್ರಶಸ್ತಿಯನ್ನೆತ್ತುವ ಹಾದಿಯಲ್ಲಿದೆ. ಆದರೆ ಸವಾಲು ಸುಲಭದ್ದಲ್ಲ. ಮಂಗಳವಾರ ಬೆಂಗಳೂ ರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿ ಬಲಿಷ್ಠ ಕುವೈತ್‌ ತಂಡ ಭಾರತಕ್ಕೆ ಎದುರಾಗಲಿದೆ.

Advertisement

ಕೂಟದ ಮತ್ತೊಂದು ಬಲಿಷ್ಠ ತಂಡ ವಾದ ಲೆಬನಾನ್‌ ವಿರುದ್ಧ ಸೆಮಿಫೈನಲ್‌ ಆಡಿದ್ದ ಭಾರತ ಶೂಟೌಟ್‌ನಲ್ಲಿ 4-2 ಗೆಲುವು ಸಾಧಿಸಿತ್ತು. ಇನ್ನೊಂದು ಉಪಾಂತ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಲು ಕುವೈತ್‌ ಹೆಚ್ಚುವರಿ ಅವಧಿಯನ್ನು ತೆಗೆದುಕೊಂಡಿತ್ತು.

ಈ ಕೂಟದಲ್ಲಿ ಭಾರತ-ಕುವೈತ್‌ ನಡು ವಿನ ದ್ವಿತೀಯ ಪಂದ್ಯ ಇದಾಗಿದೆ. “ಎ’ ವಿಭಾಗದ ಲೀಗ್‌ ಮುಖಾಮುಖೀಯಲ್ಲಿ 1-1 ಡ್ರಾ ಫ‌ಲಿತಾಂಶ ದಾಖಲಾಗಿತ್ತು. ಟ್ರೋಫಿ ಎತ್ತಬೇಕಾದರೆ ಭಾರತ ಲೀಗ್‌ಗಿಂತಲೂ ಮೇಲ್ಮಟ್ಟದ ಪ್ರದರ್ಶನ ನೀಡಬೇಕಿದೆ.

ಸಂದೇಶ್‌ ಆಗಮನ
ಸೆಮಿಫೈನಲ್‌ ಪಂದ್ಯದಿಂದ ಹೊರಗು ಳಿದಿದ್ದ ಸ್ಟಾರ್‌ ಡಿಫೆಂಡರ್‌ ಸಂದೇಶ್‌ ಜಿಂಗಾನ್‌ ಫೈನಲ್‌ಗೆ ಮರಳುವುದು ಭಾರತದ ಪಾಲಿಗೊಂದು ಸಿಹಿ ಸುದ್ದಿ. ಪಾಕಿಸ್ಥಾನ ಮತ್ತು ಕುವೈತ್‌ ವಿರುದ್ಧ, ಸತತ 2 ಪಂದ್ಯಗಳಲ್ಲಿ ಹಳದಿ ಕಾರ್ಡ್‌ ಪಡೆದ ಕಾರಣ ಸಂದೇಶ್‌ ಲೆಬನಾನ್‌ ವಿರುದ್ಧ ಹೊರಗುಳಿಯಬೇಕಾಯಿತು. ಇವರ ಸ್ಥಾನಕ್ಕೆ ಬಂದ ಅನ್ವರ್‌ ಅಲಿ ಕೂಡ ಅಮೋಘ ಪ್ರದರ್ಶನ ನೀಡಿದ್ದರು.

ನಾಯಕ ಸುನೀಲ್‌ ಚೆಟ್ರಿ ಉತ್ತಮ ಲಯದಲ್ಲಿದ್ದಾರೆ. ಗ್ರೂಪ್‌ ಹಂತದ ಸತತ 3 ಪಂದ್ಯಗಳಲ್ಲಿ ಗೋಲು ಸಿಡಿಸಿದ ಹೆಮ್ಮೆ ಚೆಟ್ರಿ ಅವರದು. ಫೈನಲ್‌ನಲ್ಲಿ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳಬೇಕಿದೆ.

Advertisement

ಸಾಹಲ್‌ ಅಬ್ದುಲ್‌ ಸಮದ್‌, ಮಹೇಶ್‌ ಸಿಂಗ್‌, ಉದಾಂತ ಸಿಂಗ್‌ ತಂಡದ ಯಶಸ್ಸಿನ ದೊಡ್ಡ ಪಾಲುದಾರ ರಾಗಿದ್ದಾರೆ. ಫೈನಲ್‌ನಲ್ಲಿ ಭಾರತ ಈ ತ್ರಿವಳಿಗಳಿಂದ ಇನ್ನೂ ಉತ್ತಮ ಆಟವನ್ನು ನಿರೀಕ್ಷಿಸುತ್ತಿದೆ. ಆಗ ಸುನೀಲ್‌ ಚೆಟ್ರಿ ಮೇಲಿನ ಭಾರ ಕಡಿಮೆ ಆಗುವುದರಲ್ಲಿ ಅನುಮಾನವಿಲ್ಲ.

ಕುವೈತ್‌ ದಿಟ್ಟ ಹೋರಾಟಕ್ಕೆ ಹೆಸರು ವಾಸಿಯಾದ ತಂಡ. ಕೊನೆಯ ಕ್ಷಣದ ವರೆಗೂ ಪಟ್ಟು ಸಡಿಲಿಸದೆ ಮುನ್ನುಗ್ಗುವ ಛಾತಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next