Advertisement

ಸ್ಯಾಫ್ ಕಪ್‌ ಫ‌ುಟ್‌ಬಾಲ್‌: ಅಜೇಯ ಭಾರತ-ಮಾಲ್ಡೀವ್ಸ್‌ ಸ್ಪರ್ಧೆ

06:35 AM Sep 15, 2018 | Team Udayavani |

ಢಾಕಾ: ಸೌತ್‌ ಏಶ್ಯನ್‌ ಫ‌ುಟ್‌ಬಾಲ್‌ ಫೆಡರೇಶನ್‌ (ಸ್ಯಾಫ್) ಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಅಜೇಯ ಓಟ ಬೆಳೆಸಿರುವ 7 ಬಾರಿಯ ಚಾಂಪಿಯನ್‌ ಭಾರತ, ಶನಿವಾರದ ಪ್ರಶಸ್ತಿ ಹಣಾಹಣಿಯಲ್ಲಿ ಮಾಲ್ಡೀವ್ಸ್‌ ವಿರುದ್ಧ ಸೆಣಸಲಿದೆ.

Advertisement

ಬಹುತೇಕ ಅಂಡರ್‌-23 ತಂಡದ ಆಟಗಾರರನ್ನೇ ಹೊಂದಿರುವ ಭಾರತ ಈ ಕೂಟದ ಏಕೈಕ ಅಜೇಯ ತಂಡವಾಗಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೂ ಆಗಿದೆ. ಲೀಗ್‌ ಹಂತದಲ್ಲಿ ಭಾರತ ತಂಡ ಮಾಲ್ಡೀವ್ಸ್‌ಗೆ 2-0 ಅಂತರದ ಸೋಲುಣಿಸಿತ್ತು. ಶ್ರೀಲಂಕಾವನ್ನು 2-0 ಅಂತರದಿಂದ, ಸೆಮಿಫೈನಲ್‌ನಲ್ಲಿ ಪಾಕಿಸ್ಥಾನವನ್ನು 3-1 ಗೋಲುಗಳಿಂದ ಪರಾಭವಗೊಳಿಸಿತ್ತು.ಕಳೆದ 12 ಸ್ಯಾಫ್ ಫ‌ುಟ್‌ಬಾಲ್‌ ಚಾಂಪಿಯನ್‌ಶಿಪ್‌ಗ್ಳಲ್ಲಿ ಭಾರತ 7 ಸಲ ಪ್ರಶಸ್ತಿ ಜಯಿಸಿ ಮೆರೆದಿದೆ. ಹಾಲಿ ಚಾಂಪಿಯನ್‌ ಕೂಡ ಆಗಿದೆ. 

ಮಾಲ್ಡೀವ್ಸ್‌ ಕಳೆದ 3 ಆವೃತ್ತಿಗಳಲ್ಲಿ ಸೆಮಿಫೈನಲ್‌ನಲ್ಲೇ ಸೋಲನುಭವಿಸಿತ್ತು. ಭಾರತ 2003ರ ಆವೃತ್ತಿ ಹೊರತುಪಡಿಸಿ ಉಳಿದೆಲ್ಲ ಕೂಟಗಳ ಫೈನಲ್‌ನಲ್ಲೂ ಆಡಿತ್ತು.

ಸವಾಲು ಸುಲಭದ್ದಲ್ಲ
2009ರಷ್ಟು ಹಿಂದೆ ಇದೇ “ಬಂಗಬಂಧು ಸ್ಟೇಡಿಯಂ’ನಲ್ಲಿ ನಡೆದ ಫೈನಲ್‌ನಲ್ಲಿ ಭಾರತ-ಮಾಲ್ಡೀವ್ಸ್‌ ಎದುರಾಗಿದ್ದವು. ಅಂದು ಹೆಚ್ಚುವರಿ ಅವಧಿಯಲ್ಲೂ ಗೋಲು ದಾಖಲಾಗಿರಲಿಲ್ಲ. ಆಗ ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ಸಾಧಿಸಿತ್ತು. ಆದರೆ ಶನಿವಾರದ ಪಂದ್ಯ ಯಾವ ಕಾರಣಕ್ಕೂ ಶೂಟೌಟ್‌ ಹಂತಕ್ಕೆ ಹೋಗಬಾರದು ಎಂದು ಭಾರತದ ಕೋಚ್‌ ಸ್ಟೀಫ‌ನ್‌ ಕಾನ್‌ಸ್ಟಂಟೀನ್‌ ಹೇಳಿದ್ದಾರೆ.

“ಮಾಲ್ಡೀವ್ಸ್‌ ಸೆಮಿಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ನೇಪಾಲವನ್ನು 3-0 ಗೋಲುಗಳಿಂದ ಮಣಿಸಿತ್ತು. ಹೀಗಾಗಿ ಭಾರತದ ಮುಂದಿನ ಸವಾಲು ಸುಲಭದ್ದಲ್ಲ. ಇದು ಖಂಡಿತವಾಗಿಯೂ ಕಠಿನ ಪಂದ್ಯವಾಗಲಿದೆ’ ಎಂದು ಕಾನ್‌ಸ್ಟಂಟೀನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಏಶ್ಯ ಕಪ್‌ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next