Advertisement
ಮಂಜೇಶ್ವರದ ಹೊಸಂಗಡಿಯಲ್ಲಿ ಡಾ| ಮುರಲೀ ಮೋಹನ ಚೂಂತಾರು ಅವರು ಆರಂಭಿಸಿದ ದಂತ ಚಿಕಿತ್ಸಾಲಯವೇ “ಸುರûಾ’. ಅವರಿಗೆ ಹೆಗಲೆಣೆಯಾಗಿ ಸಾಥ್ ನೀಡಿದವರು ಪತ್ನಿ ಡಾ| ರಾಜಶ್ರೀ ಮೋಹನ್‌ಅವರು. ಕೇವಲ ಹಣ ಗಳಿಕೆಯ ದೃಷ್ಟಿಕೋನವಿರುತ್ತಿದ್ದರೆ ಊರಿಗೆ, ವೃತ್ತಿಗೆ ಜತೆಗೆ ತಮ್ಮ ವ್ಯಕ್ತಿತ್ವಕ್ಕೆ ಹೊಸ ರೂಪ ನೀಡಲು ಸಾಧ್ಯವಿರುತ್ತಿರಲಿಲ್ಲ. ಸೇವೆಯ ವಿಶಾಲಾರ್ಥದಲ್ಲಿ ಡಾ| ಮುರಲೀ ಮೋಹನರವರು ತನ್ನ ದಂತ ಚಿಕಿತ್ಸಾಲಯಕ್ಕೆ ಸಾಂಸ್ಥಿಕ ರೂಪ ನೀಡಿ ಹೊಸಂಗಡಿಯ ಅಭಿವೃದ್ಧಿಗೆ ತನ್ನದೇ ರೀತಿಯಲ್ಲಿ ಹೊಸ ಬೆಳಕು ನೀಡಿದವರು. ದಂತ ಚಿಕಿತ್ಸೆ ಗೆಂದು ಬರುವ ಜನರಲ್ಲಿ ಸುರಕ್ಷತೆಯ ಭಾವ ಭದ್ರವಾಗಿ ಬೇರೂರುವಂತೆ ಮಾಡಿ ಸುರûಾ ಎಂಬ ಹೆಸರನ್ನು ಅನ್ವರ್ಥವಾಗಿಸಿದ್ದಾರೆ.
Related Articles
Advertisement
ಸಾಹಿತಿಯೂ ಹೌದು“ಸುರûಾ ದಂತ ಆರೋಗ್ಯ ಮಾರ್ಗದರ್ಶಿ’ ಎಂಬ ದಂತ ರೋಗಗಳಿಗೆ ಸಂಬಂಧಿಸಿದ ಪುಸ್ತಕವನ್ನು ಮತ್ತು “ಕಚಗುಳಿ’ ದಂತ ಹನಿಗವನ ಪುಸ್ತಕವನ್ನು ಪ್ರಕಟಿಸಿರುತ್ತಾರೆ. ರಕ್ತದಾನದ ಬಗ್ಗೆಯೂ “ರಕ್ತದಾನ- ಜೀವದಾನ’ ಎಂಬ ಪುಸ್ತಕವನ್ನು ಮುದ್ರಿಸಿ ಈ ವರೆಗೆ ಹದಿನೈದು ಸಾವಿರ ಪ್ರತಿಗಳನ್ನು ಉಚಿತವಾಗಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹಂಚಿ ರಕ್ತದಾನದ ಬಗ್ಗೆ ಬೃಹತ್ ಜಾಗೃತಿ ಮೂಡುವಂತೆ ಸಮಾಜಮುಖೀ ಸೇವೆಯನ್ನು ಮಾಡಿರುತ್ತಾರೆ. ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಎಂಬ ವೈದ್ಯಕೀಯ ಜಾಗೃತಿ ಲೇಖನಗಳ ಪುಸ್ತಕ 2016ರಲ್ಲಿ ಬಿಡುಗಡೆಗೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇತ್ತೀಚಿಗೆ “ಚಿತ್ರಾನ್ನ’ ಎಂಬ 32 ನೈಜ ದಂತಕತೆಗಳ ಸಂಗ್ರಹ ಡಾ| ಮುರಲೀಮೋಹನ್ ಚೂಂತಾರು ಇವರ ಸಂಪಾದಕತ್ವದಲ್ಲಿ 2016ರಲ್ಲಿ ಬಿಡುಗಡೆಗೊಂಡು ಓದುಗರಿಂದ ಬಹಳ ಪ್ರಶಂಸೆಗೊಳಗಾಗಿದೆ. “ಸಂಜೀವಿನಿ’ ಭಾಗ ಎರಡು ಡಾ| ಚೂಂತಾರು ಇವರ 6ನೇ ಕೃತಿಯಾಗಿದ್ದು ಇದೇ ಜುಲೈ 3ರಂದು ಸುರಕ್ಷ ದಂತ ಚಿಕಿತ್ಸಾಲಯದ ವಿಂಶತಿ ಸಂಭ್ರಮದೊಂದಿಗೆ ಲೋಕಾ ರ್ಪಣೆಗೊಳ್ಳಲಿದೆ. ಎ.ಬಿ. ಶೆಟ್ಟಿ ದಂತಕಾಲೇಜಿನಲ್ಲಿ 16 ವರ್ಷಗಳ ಕಾಲ ಹಿರಿಯ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಸಂಘಟನೆಯ ಸಭಾ ಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಗ್ರಹರಕ್ಷಕ ದಳದ ಸಮಾಧೇಷ್ಠರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿ, ಪ್ರವೃತ್ತಿಯ ಜತೆಗೆ ದಂತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿಕೊಂಡಿರುವ ಡಾ| ಮುರಲೀ ಮೋಹನರು ದಂತ ವಿಜ್ಞಾನಕ್ಕೆ ಸಂಬಂಧಿಸಿದಂತೆ ದೇಶ- ವಿದೇಶಗಳಲ್ಲಿ ಜರಗಿದ ಹಲವು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿಚಾರ ಮಂಡಿಸಿ ದಂತ ವೈದ್ಯಕೀಯ ಲೋಕದ ಸಂಗತಿಗಳಲ್ಲಿ ತನ್ನ ಪ್ರೌಢಿಮೆಯನ್ನೂ ಮೆರೆ ದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.