Advertisement

ಈ ತರಕಾರಿಗಳನ್ನು ಬೇರೆ ಬೇರೆ ಇಟ್ಟರೆ ಸೇಫ್!

07:39 PM Aug 25, 2019 | Team Udayavani |

ತರಕಾರಿಗಳ ಶಾಪಿಂಗ್‌ ತೆರಳುವಾಗ ಎಲ್ಲರ ಮಾಡುವ ಮೊದಲ ತಪ್ಪು ಒಂದೇ ಚೀಲದಲ್ಲಿ ಹಣ್ಣುಗಳು ಹಾಗೂ ತರಕಾರಿಗಳನ್ನು ಹಾಕುವುದು. ಹಾಗೆಯೇ ಮನೆಯಲ್ಲಿ ರೆಫ್ರಿಜರೇಟ್‌ನಲ್ಲಿಯೂ ಎಲ್ಲ ತರಕಾರಿಗಳನ್ನು, ಹಣ್ಣು ಹಂಪಲುಗಳನ್ನು ಜತೆಯಲ್ಲಿ ಇರಿಸುವುದು. ನಿಜವಾಗಿಯೂ ಎಲ್ಲ ತರಕಾರಿಗಳನ್ನು ಜತೆಗಿಡಬಾರದು.

Advertisement

ಮುಳ್ಳುಸೌತೆ
ಮುಳ್ಳುಸೌತೆಯೊಂದಿಗೆ ಯಾವುದೇ ತರಕಾರಿಗಳನ್ನು ಸ್ಟೋರ್‌ ಮಾಡಬೇಡಿ. ಅವುಗಳನ್ನು ಪ್ರತ್ಯೇಕವಾಗಿ ಸ್ಟೋರ್‌ ಮಾಡಬೇಕು. ಒಂದು ವೇಳೆ ಮುಳ್ಳುಸೌತೆಯನ್ನು ನಿಂಬೆ, ಬಾಳೆಹಣ್ಣು ಅಥವಾ ಟೊಮೋಟೊದೊಂದಿಗೆ ಇರಿಸಿದರೆ ಅದು ಎಥಿಲೀನ್‌ ಅನಿಲ ಅನ್ನು ಉತ್ಪತ್ತಿ ಮಾಡುತ್ತದೆ. ಇದು ಮುಳ್ಳು ಸೌತೆಯನ್ನು ಬೇಗ ಕೆಡುವಂತೆ ಮಾಡುತ್ತದೆ. ಫ್ರಿಜ್‌xನಲ್ಲಿ ಮುಳ್ಳುಸೌತೆಯನ್ನು ಪ್ರತ್ಯೇಕೆವಾಗಿಸಿ ಹಾಗೂ ಯಾವುದೇ ಹಣ್ಣುಗಳನ್ನು ಅದರ ಜತೆ ಇರಿಸಬೇಡಿ.

ಕುಂಬಳಕಾಯಿ ಹಾಗೂ ಸೇಬು
ಕುಂಬಳಕಾಯಿ ಎಲ್ಲರಿಗೂ ಇಷ್ಟ. ಆದರೆ ಇದನ್ನು ಸೇಬು ಹಾಗೂ ಪಿಯರ್ನಿಂದ ದೂರವಿರಿಸಿದರೆ ಅದಷ್ಟು ಒಳ್ಳೆಯದು. ಯಾಕೆಂದರೆ ಈ ಎರಡು ಹಣ್ಣುಗಳು ಕುಂಬಳಕಾಯಿಗೆ ಉತ್ತಮವಲ್ಲ. ಅದನ್ನು ತುಸು ಬೆಚ್ಚನೆ ಜಾಗದಲ್ಲಿ ಸ್ಟೋರ್‌ ಮಾಡುವುದು ಉತ್ತಮ. ಇದು ಕುಂಬಳಕಾಯಿಗಳನ್ನು 6 ತಿಂಗಳು ಕೆಡದಂತೆ ಇಡಲು ಸಹಕರಿಯಾಗುತ್ತದೆ

ಸಿಹಿಗೆಣಸು ಹಾಗೂ ಆಲೂಗೆಡ್ಡೆ
ಇವುಗಳನ್ನು ಪೇಪರ್‌ ಬ್ಯಾಗ್‌ನಲ್ಲಿ ಸ್ಟೋರ್‌ ಮಾಡುವುದು ಉತ್ತಮ. ಈ ತರಕಾರಿಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ ಹಾಗೂ ಪ್ರತ್ಯೇಕವಾಗಿ ತೆಗೆದಿಡುವುದು ಒಳ್ಳೆಯದು. ಮಾತ್ರವಲ್ಲದೇ ಇವುಗಳನ್ನು ಫ್ರಿಡ್ಜ್ನಲ್ಲಿಡಬೇಡಿ. ಇದರಿಂದ ಇವುಗಳು ಬಹುಬೇಗನೆ ಕೊಳೆಯುತ್ತವೆ.

ಸೇಬು ಹಾಗೂ ಕಿತ್ತಳೆ
ಹಣ್ಣುಗಳನ್ನು ಜತೆಯಾಗಿ ಶೇಖರಿಸಿಡಲು ನೀವು ಬಯಸಿದರೆ ಸೇಬು ಮತ್ತು ಕಿತ್ತಳೆ ಹಣ್ಣನ್ನು ಮಾತ್ರ ಜತೆಯಲ್ಲಿರಿಸಬೇಡಿ. ಈ ಹಣ್ಣುಗಳು ಕೂಡ ಎಥಿಲೀನ್‌ ಗ್ಯಾಸ್‌ ಅನ್ನು ಉತ್ಪತ್ತಿ ಮಾಡುತ್ತವೆ. ಸೇಬನ್ನು ಫ್ರಿಡ್ಜ್ ನಲ್ಲಿರಿಸಿದರೆ ಕಿತ್ತಳೆ ಹಣ್ಣನ್ನು ಮಾತ್ರ ಅದರೊಂದಿಗೆ ಇರಿಸಬೇಡಿ. ಜಾಲರಿ ಚೀಲದಲ್ಲಿ ಕಿತ್ತಳೆ ಹಣ್ಣುಗಳನ್ನು ಇಡುವುದು ಸೂಕ್ತ. ಆ ಚೀಲ ಹಣ್ಣಿನ ಸುತ್ತ ಗಾಳಿಯಾಡುವಂತೆ ಮಾಡುತ್ತದೆ.

Advertisement

ಈರುಳ್ಳಿ ಹಾಗೂ ಆಲೂಗಡ್ಡೆ
ಭಾರತೀಯರು ಒಂದೇ ಬುಟ್ಟಿಯಲ್ಲಿ ಈರುಳ್ಳಿ ಹಾಗೂ ಆಲೂಗಡ್ಡೆಯನ್ನು ಶೇಖರಿಸಿಡುವುದು ಸಾಮಾನ್ಯ. ಈರುಳ್ಳಿಗಳು ಆಲೂಗಡ್ಡೆಯನ್ನು ಕೆಡಿಸುತ್ತದೆ. ಅವುಗಳನ್ನು ಪ್ರತ್ಯೇಕವಾಗಿ ತೆರೆದ ಬುಟ್ಟಿಗಳಲ್ಲಿ ಶೇಖರಿಸಿಡಿ. ಪೇಪರ್‌ ಚೀಲಗಳಲ್ಲಿ ಶೇಖರಿಸುವುದು ಕೂಡ ಅವುಗಳನ್ನು ಕೆಡದಂತೆ ಕಾಪಾಡಲು ಸಹಕಾರಿ. ಈರುಳ್ಳಿಯನ್ನು ಬೆಳ್ಳುಳ್ಳಿಯೊಂದಿಗೆ ಸ್ಟೋರ್‌ ಮಾಡಬಹುದು.

ರಮ್ಯಾ. ಎಂ.ಕೆ.

Advertisement

Udayavani is now on Telegram. Click here to join our channel and stay updated with the latest news.

Next