Advertisement

Bangalore City Police: ಅಪಾಯದಲ್ಲಿದ್ದೀರಾ? ಸೇಫ್ ಕನೆಕ್ಟ್ ಬಟನ್‌ ಒತ್ತಿ 

11:55 AM Jul 11, 2024 | Team Udayavani |

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸ್‌ ವಿಭಾಗದಲ್ಲಿ ಅಪತ್ಭಾಂಧವ(ಸೇಫ್ ಕನೆಕ್ಟ್) ಮತ್ತು ಹೊಯ್ಸಳ ಟ್ರ್ಯಾಕಿಂಗ್‌ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಸಾರ್ವಜನಿಕರು 112ಗೆ ಕರೆ ಮಾಡಿದಾಗ, ಹೊಯ್ಸಳ ಗಸ್ತು ವಾಹನ ಸಂಖ್ಯೆ ಹಾಗೂ ಸಿಎಫ್ಎಸ್‌ ಸಂಖ್ಯೆಯ ಸಂದೇಶ ಹೋಗುತ್ತಿತ್ತು. ಇದೀಗ ಅದನ್ನು ಅಪ್‌ಗ್ರೇಡ್ ಮಾಡಿದ್ದು, ಕರೆ ಮಾಡಿದ ಸಾರ್ವಜನಿಕರಿಗೆ ಹೊಯ್ಸಳದ ಲೈವ್‌ ಲೋಕೇಷನ್‌ ಲಿಂಕ್‌ ಕಳುಹಿಸಲಾಗುತ್ತದೆ. ಅದರಿಂದ ಹೊಯ್ಸಳ ವಾಹನ ಸಂಚರಿಸುವ ಮಾರ್ಗ,ಅದು ಎಷ್ಟು ದೂರದಲ್ಲಿದೆ. ಸ್ಥಳಕ್ಕೆ ಬರಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ತಿಳಿಯಬಹುದಾಗಿದೆ. ಓಲಾ, ಊಬರ್‌ ಅಥವಾ ಫ‌ುಡ್‌ ಡೆಲಿವರಿ ಆ್ಯಪ್‌ಗ್ಳ ಮಾದರಿಯಲ್ಲಿ ಸಮಯವನ್ನು ಟ್ರ್ಯಾಕಿಂಗ್‌ ಮಾಡಬಹುದಾಗಿದೆ ಎಂದು ತಿಳಿಸಿದರು.

ಕೆಎಸ್‌ಪಿ ಆ್ಯಪ್‌ನಲ್ಲಿ ಸೇಫ್ ಕನೆಕ್ಟ್: ಈ ಮೊದಲು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೇಫ್ಟಿ ಐಲ್ಯಾಂಡ್‌ಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿದ್ದು, ಇದೀಗ ರಾಜ್ಯ ಪೊಲೀಸ್‌ ಇಲಾಖೆಯ ಕೆಎಸ್‌ಪಿ ಆ್ಯಪ್‌ನಲ್ಲೇ ಸೇಫ್ ಕನೆಕ್ಟ್ ಎಂದು ಪರಿಚಯಿಸಲಾಗಿದೆ. ಈ ಮೂಲಕ ತುರ್ತು ಸಂದರ್ಭಗಳಲ್ಲಿ ನೆರವಾಗಲು ಹಾಗೂ ಜನಸ್ನೇಹಿ ಪೊಲೀಸ್‌ ವಾತಾವರಣ ನಿರ್ಮಿಸಲು ಸಾರ್ವಜನಿಕರ ಮೊಬೈಲ್‌ ಮೂಲಕವೇ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ. ಅದರಿಂದ ಅಪಾಯದ ಸಂದರ್ಭಗಳಲ್ಲಿ ಜನರು ಆ್ಯಪ್‌ನಲ್ಲಿರುವ ಸುರಕ್ಷಿತ ಬಟನ್‌ ಒತ್ತಿ ಕರೆ ಮಾಡಿದರೆ ತಕ್ಷಣವೇ ಕರೆ ಮಾಡಿದ ಸ್ಥಳದ ಲೈವ್‌ಲೊಕೇಷನ್‌ ಕಮಾಂಡ್‌ ಸೆಂಟರ್‌ಗೆ ರವಾನೆಯಾಗುವ ವ್ಯವಸ್ಥೆ ಇದಾಗಿದೆ ಎಂದು ತಿಳಿಸಿದರು.

ಈ ಹಿಂದೆ ನಗರದ ಹಲವಡೆ ನಿರ್ಮಿಸಲಾಗಿದ್ದ ಸೇಫ್ಟಿ ಐಲ್ಯಾಂಡ್‌ನ‌ಲ್ಲಿ ಸೇಫ್ಟಿ ಬಟನ್‌ ಒತ್ತಿದ ತಕ್ಷಣ ನೇರವಾಗಿ ಕಮಾಂಡ್‌ ಸೆಂಟರ್‌ಗೆ ಸಂಪರ್ಕಿಸುತಿತ್ತು. ಲೊಕೇಷನ್‌ ಆಧರಿಸಿ ಕೆಲವೇ ಕ್ಷಣಗಳಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋಗಿ ಜನರ ದೂರುಗಳನ್ನು ಆಲಿಸುತ್ತಿದ್ದರು. ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ನಗರ ಪೊಲೀಸರು, ಪ್ರಚಲಿತದಲ್ಲಿರುವ ಕೆಎಸ್‌ಪಿ ಆ್ಯಪ್‌ಗೆ ಸೇಫ್ ಕನೆಕ್ಟ್ ಹೆಸರಿನ ಬಟನ್‌ ಸೌಲಭ್ಯ ಕಲ್ಪಿಸಿದ್ದಾರೆ. ಸಂಕಷ್ಟ ಸಂದರ್ಭಗಳಲ್ಲಿ ಆ್ಯಪ್‌ನಲ್ಲಿ ಸೇಫ್ ಕನೆಕ್ಟ್ ಬಟನ್‌ ಒತ್ತಿದರೆ ನೇರವಾಗಿ ಪೊಲೀಸ್‌ ನಿಯಂತ್ರಣ ಕೊಠಡಿಗೆ ವಿಡಿಯೋ ಅಥವಾ ಆಡಿಯೋ ಕರೆ ಮಾಡಬಹುದಾಗಿದೆ. ಈ ಮೂಲಕ ಸ್ವಯಂಚಾಲಿತವಾಗಿ ನೀವಿರುವ ಸ್ಥಳವನ್ನು ಪತ್ತೆಹಚ್ಚಿ ಕೆಲವೇ ಕ್ಷಣಗಳಲ್ಲಿ ನಿಮ್ಮ ಸಹಾಯಕ್ಕೆ ಹೊಯ್ಸಳ ಸಿಬ್ಬಂದಿ ಧಾವಿಸಲಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ವಿವರಿಸಿದರು.

ಮತ್ತಷ್ಟು ಸೇಫ್ಟಿ ಐಲ್ಯಾಂಡ್‌ ಸ್ಥಾಪನೆ:

Advertisement

ಸೇಫ್ ಸಿಟಿ ಯೋಜನೆಯಡಿ ನಗರದೆಲ್ಲೆಡೆ ಈಗಾಗಲೇ ಸುಮಾರು 50 ಕಡೆಗಳಲ್ಲಿ ಸೆμr ಐಲ್ಯಾಂಡ್‌ ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸಲಾಗುವುದು. ಗರಿಷ್ಟ ಮಟ್ಟದಲ್ಲಿ ಜನರಿಗೆ ನೆರವಾಗುವ ಸಲುವಾಗಿ ಕೆಎಸ್‌ಪಿ ಆ್ಯಪ್‌ ನಲ್ಲಿ ಸೇಫ್ ಕನೆಕ್ಟ್ ಬಟನ್‌ ಲಿಂಕ್‌ ಕೊಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಈ ಸೇವೆಯನ್ನು ನಗರ ಪೊಲೀಸ್‌ ವಿಭಾಗದಲ್ಲಿ ಜಾರಿಗೆ ತರಲಾಗಿದೆ. ಸಾರ್ವಜನಿಕರು ತಮ್ಮ ಆ್ಯಂಡ್ರೈಡ್‌ ಮೊಬೈಲ್‌ನ ಪ್ಲೇಸ್ಟೋರ್‌ನಲ್ಲಿ ಕೆಎಸ್‌ಪಿ ಆ್ಯಪ್‌ ಲಭ್ಯವಿದ್ದು, ಅದನ್ನು ಬಳಕೆ ಮಾಡಿಕೊಳ್ಳಬೇಕು ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next