Advertisement
ಗುರುವಾರ ರಾತ್ರಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾ, “ಉಗ್ರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ನನಗೆ ಜೈಲಿನಲ್ಲಿ ಸಹಿಸಿಕೊಳ್ಳಲಾಗದಷ್ಟು ಹಿಂಸೆ ನೀಡಿದ್ದರು. ನಾನು ಮುಂಬಯಿ ಜೈಲಿನಲ್ಲಿದ್ದಾಗ, ತನಿಖಾ ಸಮಿತಿಯ ಸದಸ್ಯ ರೊಬ್ಬರು ಕರ್ಕರೆ ಅವರನ್ನು ಮುಂಬಯಿಗೆ ಕರೆಸಿ ಕೊಂಡಿದ್ದರು. ಸಾಧ್ವಿ ವಿರುದ್ಧ ಸಾಕ್ಷ್ಯ ಸಿಗದಿದ್ದರೆ ಅವರನ್ನು ಬಿಡುಗಡೆ ಮಾಡಿ ಎಂದು ಹೇಳಿದ್ದರು. ಆದರೆ, ಅದಕ್ಕೆ ಒಪ್ಪದ ಕರ್ಕರೆ, ಅವರ ವಿರುದ್ಧ ಸಾಕ್ಷ್ಯವನ್ನು ನಾನು ಸಂಗ್ರಹಿಸುತ್ತೇನೆಯೇ ಹೊರತು ಬಿಡುಗಡೆ ಮಾಡುವು ದಿಲ್ಲ ಎಂದಿದ್ದರು. ಅವತ್ತೇ ನಾನು “ನೀನು ಸರ್ವನಾಶ ಆಗುತ್ತಿ’ ಎಂದು ಶಾಪ ಹಾಕಿದ್ದೆ. ಅದಾದ 2 ತಿಂಗಳೊ ಳಗಾಗಿ, 26/11ರ ದಾಳಿಯಲ್ಲಿ ಕರ್ಕರೆ ಕೊಲೆಯಾದರು. ಅವತ್ತಿಗೆ ಸೂತಕವೂ ಮುಗಿಯಿತು’ ಎಂದು ಹೇಳಿದ್ದರು.
Related Articles
ಮುಂಬಯಿ ದಾಳಿ ನಡೆದ 2008ರ ನವೆಂಬರ್ 26ರಂದು ರಾತ್ರಿ 9.45ಕ್ಕೆ ಮನೆಯಲ್ಲಿ ಆಹಾರ ಸೇವಿಸುತ್ತಿದ್ದ ಹೇಮಂತ್ ಕರ್ಕರೆ ಅವರಿಗೆ ದೂರವಾಣಿ ಕರೆಯೊಂದು ಬರುತ್ತದೆ. ಕರೆ ಮಾಡಿದವರು, ತಾಜ್ ಹೋಟೆಲ್ ಮತ್ತು ಸಿಎಸ್‌ಟಿ ರೈಲು ನಿಲ್ದಾಣದ ಮೇಲೆ ಉಗ್ರರು ದಾಳಿ ಮಾಡಿರುವುದಾಗಿ ಮಾಹಿತಿ ನೀಡುತ್ತಾರೆ. ಕೂಡಲೇ ಮನೆಯಿಂದ ಹೊರಡುವ ಕರ್ಕರೆ, ನೇರವಾಗಿ ಸಿಎಸ್‌ಟಿಗೆ ತೆರಳುತ್ತಾರೆ. ಆದರೆ, ಅಲ್ಲಿ ಯಾರೂ ಇರುವುದಿಲ್ಲ. ಅಷ್ಟರಲ್ಲಿ ಅವರಿಗೆ ಮತ್ತೂಂದು ಕರೆ ಬರುತ್ತದೆ. ಉಗ್ರರು ಕಾಮಾ ಮತ್ತು ಅಲೆºಸ್ ಆಸ್ಪತ್ರೆಯತ್ತ ಹೋಗಿದ್ದು, ಆ ಕಡೆ ತೆರಳುವಂತೆ ಸೂಚನೆ ಬರುತ್ತದೆ. ತತ್‌ಕ್ಷಣ ಎಟಿಎಸ್ ಮುಖ್ಯಸ್ಥ ಕರ್ಕರೆ, ಎಸಿಪಿ ಅಶೋಕ್ ಕಾಮ್ಟೆ, ಹಿರಿಯ ಪೊಲೀಸ್ ಅಧಿಕಾರಿ ವಿಜಯ ಸಾಲಸ್ಕರ್ ಹಾಗೂ ಇತರೆ ಕೆಲವು ಕಾನ್‌ಸ್ಟೆಬಲ್‌ಗಳು ಕ್ವಾಲಿಸ್ ಜೀಪಿನಲ್ಲಿ ಕಾಮಾ ಆಸ್ಪತ್ರೆಯತ್ತ ತೆರಳುತ್ತಾರೆ. ಆಸ್ಪತ್ರೆ ಬಳಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಅಧಿಕಾರಿಗಳೂ ಸಾವಿಗೀಡಾಗುತ್ತಾರೆ. ಕರ್ಕರೆ ಅವರ ಎದೆಗೆ ಮೂರು ಗುಂಡುಗಳು ತಗುಲುವ ಕಾರಣ ಅವರು ಸ್ಥಳದಲ್ಲೇ ಅಸುನೀಗುತ್ತಾರೆ.
Advertisement
ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಕರ್ಕರೆ ಹುತಾತ್ಮರಾಗಿದ್ದಾರೆ ಎಂದೇ ಬಿಜೆಪಿ ನಂಬುತ್ತದೆ. ನಾವು ಯಾವತ್ತೂ ಅವರನ್ನು ಹುತಾತ್ಮ ಎಂದೇ ಪರಿಗಣಿಸುತ್ತೇವೆ. ಸಾಧ್ವಿಯವರದ್ದು ಅವರ ವೈಯಕ್ತಿಕ ಹೇಳಿಕೆ.ಬಿಜೆಪಿ 26/11ರ ಹುತಾತ್ಮ ಕರ್ಕರೆ ಅವರನ್ನು ದೇಶ ದ್ರೋಹಿ ಎಂದು ಘೋಷಿಸು ವಂಥ ಅಪರಾಧ ವನ್ನು ಬಿಜೆಪಿ ಮಾತ್ರವೇ ಮಾಡಲು ಸಾಧ್ಯ. ಸಾಧ್ವಿ ವಿರುದ್ಧ ಬಿಜೆಪಿ ಕೂಡಲೇ ಕ್ರಮ ಕೈಗೊಳ್ಳಬೇಕು. ಪ್ರಧಾನಿ ಮೋದಿ ದೇಶದ ಕ್ಷಮೆ ಕೇಳಬೇಕು.
ಕಾಂಗ್ರೆಸ್ ನಾವು ಮೌಡ್ಯ ವಿರೋಧಿ ವಿಧೇಯಕದ ಮೂಲಕ ಮೂಢನಂಬಿಕೆಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿ ಸಲು ಯತ್ನಿಸುತ್ತಿದ್ದೇವೆ. ಆದರೆ ಬಿಜೆಪಿ ಅಭ್ಯರ್ಥಿಯು ಎಟಿಎಸ್ ಮುಖ್ಯಸ್ಥರ ಜೀವಕ್ಕೆ ಹಾನಿಯುಂಟುಮಾಡಲು ಅತೀಂದ್ರಿಯ ಶಕ್ತಿಯನ್ನು ಬಳಸಿದ್ದೇವೆ ಎಂದು ಹೇಳುತ್ತಿದ್ದಾರೆ. ನೆನಪಿಡಿ, ನೀವು ಬಿಜೆಪಿಗೆ ಮತ ಹಾಕಿದರೆ, ಮೂರ್ಖರಾಗುತ್ತೀರಿ.
ಸಿದ್ದರಾಮಯ್ಯ, ಮಾಜಿ ಮುಖ್ಯ ಮಂತ್ರಿ