Advertisement

ಮಠ ಮಾನ್ಯಗಳಿಂದ ಸದ್ಗತಿ: ಸಿದ್ಧರಾಮ ಶ್ರೀ

12:48 PM May 20, 2019 | Team Udayavani |

ಶಿರಹಟ್ಟಿ: ಸಮಾಜದ ಸ್ವಾಸ್ಥ್ಯ ಕಾಪಾಡಲು ಧರ್ಮ ಮತ್ತು ಮಠಮಾನ್ಯಗಳೇ ಕಾರಣವಾಗಿದ್ದು, ಸಮಾಜದ ಜನತೆ ಇದನ್ನೇ ನಂಬಿ ಮಠಗಳಿಗೆ ಗೌರವ ನೀಡುತ್ತಿವೆ. ಮಠಾಧಿಧೀಶರು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಮಾಜದ ಜನತೆಯ ಸುಂದರ ಬದುಕಿಗಾಗಿ ಪ್ರೋತ್ಸಾಹಿಸುವಂತಾಗಬೇಕು ಎಂದು ಶಿರಹಟ್ಟಿ ಜ| ಫ| ಸಿದ್ಧರಾಮ ಸ್ವಾಮಿಗಳು ಹೇಳಿದರು.

Advertisement

ಶಿರಹಟ್ಟಿ ಜ| ಫಕ್ಕೀರೇಶ್ವರರ ಜಾತ್ರಾ ಮಹೋತ್ಸವ ನಂತರ ಜರುಗಿದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಧರ್ಮ ಎಲ್ಲಿ ಜಾಗೃತವಾಗಿರುತ್ತದೆಯೋ ಅಲ್ಲಿ ನೆಮ್ಮದಿ ಇರುತ್ತದೆ. ಧರ್ಮದ ಮೂಲಕ ಜೀವನ ಸಾಕ್ಷರತೆ ಹೊಂದಲು ಸಾಧ್ಯವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಧರ್ಮ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಧರ್ಮ ಹೆಚ್ಚಾದಲ್ಲಿ ಪ್ರಕೃತಿ ಮುನಿಸಿಕೊಳ್ಳುವುದಿಲ್ಲ ಎಂದರು.

ಧರ್ಮ ಸಭೆಯಲ್ಲಿ ಕುಂದಗೋಳದ ಕಲ್ಯಾಣಪುರಮಠದ ಬಸವಣ್ಣಜ್ಜನವರ ಶ್ರೀಗಳು ಹಾಗೂ ಬನ್ನಿಕೊಪ್ಪದ ಡಾ| ಸುಜ್ಞಾನದೇವ ಶಿವಾಚಾರ್ಯ ಮಾತನಾಡಿ, ಯಾವ ವ್ಯಕ್ತಿ ಯಾವ ರೀತಿ ನಡೆದುಕೊಳ್ಳುತ್ತಾನೆಯೋ ಅದೇ ರೀತಿಯಲ್ಲಿ ಪಡೆದುಕೊಳ್ಳುತ್ತಾನೆ. ಅಧರ್ಮದಲ್ಲಿ ನಡೆದುಕೊಂಡವರು ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಾನೆ. ಯಾರೂ ಧರ್ಮದ ಹಾದಿಯಲ್ಲಿ ನಡೆಯುವರೋ ಅವರಿಗೆ ಧರ್ಮ ಕಾಪಾಡುತ್ತದೆ. ಇಂತಹ ಸಂಸ್ಕೃತಿ ಪ್ರತಿಯೊಬ್ಬರ ಮನೆಯಲ್ಲೂ ನಡೆಯಬೇಕು. ಮಕ್ಕಳಿಗೆ ಉತ್ತಮವಾದ ಸಂಸ್ಕಾರ ನೀಡಿದರೆ ಅದರಂತೆ ಸಮಾಜದಲ್ಲಿ ಬದಕುತ್ತಾನೆ ಎಂದು ಹೇಳಿದರು.

ಹಾವೇರಿ ಜಿಲ್ಲೆಯ ಅಗಡಿ ಮಠದ ಶ್ರೀಗಳು ಮಾತನಾಡಿದರು. ಡಿ.ಎನ್‌. ಡಬಾಲಿ, ಅಜ್ಜುಗೌಡ ಪಾಟೀಲ್, ಬಿ.ಎಸ್‌. ಹಿರೇಮಠ, ಎಚ್.ಎಂ. ದೇವಗೇರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next