Advertisement
ನಿತ್ಯಅನ್ನಸಂತರ್ಪಣೆಮಲೆನಾಡು ಶೈಲಿಯ ಮತ್ತು ಸಾತ್ವಿಕ ಭೋಜನದ ರುಚಿ ಇಲ್ಲಿನ ವಿಶೇಷತೆ. ಪ್ರತಿನಿತ್ಯ ಕನಿಷ್ಠ 3 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತದೆ. ಗುರುವಾರದಂದು ಭಕ್ತಾದಿಗಳ ಸಂಖ್ಯೆ ತುಸು ಹೆಚ್ಚಿರುತ್ತದೆ. ವಿಶೇಷ ದಿನಗಳಂದು 6 ಸಾವಿರ ದಾಟುವುದೂ ಉಂಟು.
ಸುಮಾರು ಅರ್ಧ ಶತಮಾನದ ಹಿಂದೆ ಶ್ರೀಧರ ಸ್ವಾಮಿಗಳ ಸಮ್ಮುಖದಲ್ಲಿ ಮೊದಲ ಅನ್ನದಾನ ನಡೆದಿತ್ತು. ಅಂದಿನಿಂದ ಇಂದಿನವರೆಗೆ ನಿತ್ಯವೂ ಅನ್ನಸಂತರ್ಪಣೆ ಸುಲಲಿತವಾಗಿ ನಡೆದುಕೊಂಡು ಬಂದಿದೆ. ಘಟ್ಟದ ಮೇಲಿನ ಪುಣ್ಯ ಕ್ಷೇತ್ರಗಳಲ್ಲಿ ಭಕ್ತರಿಗೆ ಪ್ರಸಾದ ಭೋಜನ ಒದಗಿಸಿದ ಪ್ರಪ್ರಥಮ ಕ್ಷೇತ್ರ ಇದಾಗಿದೆ. ಪ್ರತಿ ಏಕಾದಶಿಯ ದಿನ ಅನ್ನ ದಾಸೋಹ ಇಲ್ಲ. ಆ ದಿನ ಉಪ್ಪಿಟ್ಟು, ಅವಲಕ್ಕಿ ಕೊಡಲಾಗುತ್ತದೆ. ಗ್ರಹಣಗಳ ಆಚರಣೆಯ ಸಂದರ್ಭದಲ್ಲಿ ಪಂಚಾಂಗ ಆಧಾರಿತವಾಗಿ ಭೋಜನ ವಿನ್ಯಾಸ.
– ಬೆಳಗ್ಗೆ: 8- 11ರ ವರೆಗೆ ಉಪಾಹಾರ
– ಮಧ್ಯಾಹ್ನ: 12.45 - 2.30ರವರೆಗೆ ಭೋಜನ
– ರಾತ್ರಿ: 8 - 9.30ರವರೆಗೆ ಭೋಜನ
Related Articles
8- ಬಾಣಸಿಗರಿಂದ ಅಡುಗೆ
3- ಕ್ವಿಂಟಲ್ ಅಕ್ಕಿಯಿಂದ ಅನ್ನ
18- ಸಿಬ್ಬಂದಿಯಿಂದ ಪಾಕಶಾಲೆಯ ಸ್ವಚ್ಛತೆ
150- ಕಿಲೋ ತರಕಾರಿ ನಿತ್ಯ ಬಳಕೆ
1500- ಮಂದಿಗೆ ಏಕಕಾಲದಲ್ಲಿ ಭೋಜನ
3000- ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ
10,00,000 - ಕ್ಕೂ ಅಧಿಕ ಜನ, ಈ ವರ್ಷ ಭೋಜನ ಸ್ವೀಕರಿಸಿದವರು
Advertisement
ಭಕ್ಷ್ಯ ಸಮಾಚಾರ– ನಿತ್ಯ ಭೋಜನದಲ್ಲಿ ಅನ್ನ, ಸಾರು, ಚಿತ್ರಾನ್ನ, ಪಾಯಸ, ಮಜ್ಜಿಗೆ ಇರುತ್ತದೆ.
– ಅನ್ನ ಸಂತರ್ಪಣೆಯನ್ನು ನಡೆಸಿಕೊಡುವ ಭಕ್ತರು ಇಚ್ಛಿಸಿ ವೆಚ್ಚ ಭರಿಸುವ ಸಿಹಿ ಭಕ್ಷ್ಯಕ್ಕೂ ಅವಕಾಶ.
– ಭಕ್ತರಿಂದ ಅಕ್ಕಿ, ಬೆಲ್ಲ, ಕಾಯಿ, ತರಕಾರಿ, ಹಾಲು, ಕಾಳು ಬೇಳೆಗಳು ಸೇವಾರ್ಥವಾಗಿ ಭೋಜನ ಶಾಲೆ ಸೇರುತ್ತವೆ.
– ಉಪಾಹಾರದ ಜೊತೆ ಕಾಫಿ, ಟೀ, ಕಷಾಯ ಹಾಗೂ ಮಧ್ಯಾಹ್ನ 4.30ಕ್ಕೂ ಕಾಫಿ, ಟೀ, ಕಷಾಯವಿರುತ್ತದೆ.
ಶಿಸ್ತು- ಸ್ವತ್ಛತೆಗೆ ಆದ್ಯತೆ
– ವರದಪುರದ ಕೆಲವು ನಿಯಮಗಳನ್ನು ಭಕ್ತರು ಪಾಲಿಸಿ ಭೋಜನ ಸ್ವೀಕರಿಸಬೇಕು. ಪುರುಷರು ಅಂಗಿ ಕಳಚಿ ಭೋಜನ; ಊಟ ಮಾಡಿದ ತಟ್ಟೆ, ಲೋಟಗಳನ್ನು ತೊಳೆದಿಡುವುದು… ಇತ್ಯಾದಿ.
– ಸ್ವಚ್ಛತೆಗೆ ಹೆಚ್ಚು ಆದ್ಯತೆ. ತಟ್ಟೆ- ಲೋಟ 3 ಬಾರಿ ಸ್ವತ್ಛಗೊಂಡು ಮರುಬಳಕೆ.
– ಗೊಂದಲಗಳಿಗೆ ಅವಕಾಶವಿಲ್ಲದಂತೆ, ಕ್ಯೂ ನಿಲ್ಲುವವರಿಗೂ ತಲೆ ಮೇಲೆ ಸೂರಿನ ವ್ಯವಸ್ಥೆ. ಶ್ರೀಧರ ಸ್ವಾಮಿಗಳ ಅನುಗ್ರಹದಿಂದ ನಿರಂತರವಾಗಿ ಇಲ್ಲಿ ಅನ್ನ ದಾಸೋಹ ನಡೆಯುತ್ತಿದೆ. ಕೇವಲ ಭಕ್ತರಲ್ಲದೆ, ಊಟದ ಸಮಯದಲ್ಲಿ ಆಗಮಿಸುವ ಪ್ರವಾಸಿಗರಿಗೆ ಕೂಡ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಮಧ್ಯಾಹ್ನ 2.30ರ ಸಮಯ ನಿಗದಿಯಾಗಿದ್ದರೂ ಕೆಲವೊಮ್ಮೆ 3.30ರವರೆಗೂ ಪ್ರಸಾದ ಭೋಜನ ನೀಡಲಾಗುತ್ತದೆ.
– ಮಹಾಬಲೇಶ್ವರ್, ಮುಖ್ಯ ಬಾಣಸಿ