Advertisement

ಯಂತ್ರಗಳ ಕೈಗೆ ಬುದ್ಧಿ ಕೊಡಬೇಡಿ: ಸದ್ಗುರು

09:56 AM Jan 26, 2019 | |

ಮೈಸೂರು: ಇಂದಿನ ಯಾತ್ರಿಕ ಯುಗದಲ್ಲಿ ನಾವು ಯಂತ್ರಗಳಿಗೆ ದಾಸರಾಗದೆ, ನಮ್ಮ ಜ್ಞಾಪಕಶಕ್ತಿ ಮತ್ತು ಆಲೋಚನಾ ಶಕ್ತಿಯಿಂದ ಉತ್ತಮ ಕೆಲಸ ಮಾಡಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್‌ ಹೇಳಿದರು.

Advertisement

ನಗರದ ಮಹಾಜನ ವಿದ್ಯಾಸಂಸ್ಥೆ ಸ್ಥಾಪಿಸಿರುವ ಸಂಸ್ಥಾಪಕರಾದ ಅಂಬಳೆ ಸುಬ್ರಹ್ಮಣ್ಯ ಅಯ್ಯರ್‌ ಹಾಗೂ ವಿದ್ಯಾದಾನಿ ರಟ್ಟೆಹಳ್ಳಿ ರಾಮಪ್ಪ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಮನುಷ್ಯನಿಗಿಂತಲು ಯಂತ್ರಗಳು ವೇಗವಾಗಿ ಕೆಲಸ ಮಾಡುತ್ತವೆ. ಈ ಕಾರಣದಿಂದಾಗಿಯೇ ಇಂದು ಎಲ್ಲರ ಕೈಯಲ್ಲೂ ಸ್ಮಾರ್ಟ್‌ ಮೊಬೈಲ್‌ಗ‌ಳು ಬಂದಿವೆ. ಗೂಗಲ್‌ನಲ್ಲಿ ಹುಡುಕಿದರೆ ಎಲ್ಲಾ ವಿಷಯವೂ ತಿಳಿಯುತ್ತದೆ. ಹೀಗಾಗಿ ಜನರು ಮಾಹಿತಿಗಳನ್ನು ತಲೆಯಲ್ಲಿರಿಸಿಕೊಳ್ಳದೆ, ಯಂತ್ರಗಳಲ್ಲಿ ಇರಿಸುತ್ತಿದ್ದಾರೆ. ಆದರೆ, ಮಾಹಿತಿಯೇ ನಿಜವಾದ ಬುದ್ಧಿಮತ್ತೆಯಲ್ಲ. ಅದು ಕೇವಲ ದತ್ತಾಂಶವಷ್ಟೇ. ನಮ್ಮಲ್ಲಿರುವ ಜ್ಞಾಪಕ ಶಕ್ತಿ ಮತ್ತು ಆಲೋಚನಾ ಶಕ್ತಿಯನ್ನು ಬಳಸಿದರೆ ಉತ್ತಮ ಎಂದರು. ತಮ್ಮ ಶಾಲಾ ದಿನಗಳಲ್ಲಿ ಆಗ ತಾನೇ ಪರಿಚಯವಾಗಿದ್ದ ಕ್ಯಾಲ್ಕಲೇಟರ್‌ನ ಕಾರ್ಯವೈಖರಿಯನ್ನು ಕಂಡು ಶಾಲೆಯಲ್ಲಿ ಗಣಿತವನ್ನು ಕಷ್ಟಪಟ್ಟು ಏಕೆ ಕಲಿಯಬೇಕು ಎನಿಸಿತ್ತು ಎಂದರು.

ಅಮೆರಿಕದಲ್ಲಿ ತಂತ್ರಜ್ಞಾನದ ದಾಸರಾಗಿರುವವರನ್ನು ಸರಿಪಡಿಸಲು ಕೆಲವು ಕೇಂದ್ರ ಸ್ಥಾಪಿಸಲಾಗಿದೆ. ಭಾರತದ‌ಲ್ಲಿ ಆ ರೀತಿ ಆಗುವುದು ಬೇಡ. ನಾವು ಮೊದಲು ನಮ್ಮನ್ನು ನಮಗೆ ಬೇಕಾದಂತೆ ನಡೆಸಿಕೊಳ್ಳುವಂತೆ ಮಾಡಿಕೊಳ್ಳಬೇಕು. ಏಕೆಂದರೆ, ನಮ್ಮ ಮನೆಯಲ್ಲಿಯೇ ನೂರು ಭಾಗ ನಮ್ಮಂತೆಯೇ ನಡೆಯುವುದಿಲ್ಲ ಎಂದು ಹೇಳಿದರು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಬಿ.ಎಸ್‌.ರವಿಕುಮಾರ್‌, ರಟ್ಟೆಹಳ್ಳಿ ರಾಮಪ್ಪ ಅವರ ಮೊಮ್ಮಗ ಡಾ.ಆರ್‌.ಎನ್‌.ಅಶೋಕ್‌, ಮಹಾಜನ ವಿದ್ಯಾಸಂಸ್ಥೆ ಅಧ್ಯಕ್ಷ ಆರ್‌. ವಾಸುದೇವಮೂರ್ತಿ, ಗೌರವ ಕಾರ್ಯದರ್ಶಿ ಡಾ.ಟಿ.ಜಯಲಕ್ಷ್ಮೀ ಮುರಳೀಧರ್‌, ಉಪಾಧ್ಯಕ್ಷ ಟಿ.ಮುರಳೀಧರ ಭಾಗವತ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next