Advertisement

ಜಾಲಿ ಬಾರಲ್ಲಿ ಸದ್ದಾಂ, ಹಿಟ್ಲರ್‌

09:58 AM Nov 04, 2017 | |

ಹೆಬ್ರೂನ್‌ (ಪ್ಯಾಲೆಸ್ತೀನ್‌): ನಿಮಗ್ಗೊತ್ತಾ? ಜಗತ್ತನ್ನೇ ಅಲ್ಲಾಡಿಸಿದ ಅಡಾಲ್ಫ್ ಹಿಟ್ಲರ್‌, ಫಿಡೆಲ್‌ ಕ್ಯಾಸ್ಟ್ರೋ ಹಾಗೂ ಸದ್ದಾಂ ಹುಸೇನ್‌ ಇವರೆಲ್ಲರೂ ಪ್ಯಾಲೆಸ್ತೀನಿನ ಬಾರ್‌ಗಳಲ್ಲಿ ಒಟ್ಟಿಗೆ ಕೂತು ಬಿಯರ್‌ ಹೀರುತ್ತಾರೆ! ಹರಟೆ ಹೊಡೆಯುತ್ತಾರೆ!

Advertisement

ಇದೇನಿದು… ಇಹಲೋಕ ತ್ಯಜಿಸಿರುವ ಆ ನಾಯಕರೆಲ್ಲಾ ಮತ್ತೆ ಅಲ್ಲಿ ಹುಟ್ಟಿದ್ದಾರಾ ಎಂಬ ಗೊಂದಲ ಬೇಡ. ವಿಚಾರ ಇಷ್ಟೇ. ಸದಾ ವಿಶ್ವ ನಾಯಕರ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಡುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿರುವ ಪ್ಯಾಲೆಸ್ತೀನಿಯನ್ನರು, ತಮ್ಮ ಮಕ್ಕಳಿಗೆ ಹಿಟ್ಲರ್‌, ಕ್ಯಾಸ್ಟ್ರೋ, ಸದ್ದಾಂನ‌ಂಥ ವಿವಾದಾತ್ಮಕ ನಾಯಕರ ಹೆಸರುಗಳನ್ನೂ ಇಡಲಾರಂಭಿಸಿರುವುದು ಗಮನ ಸೆಳೆದಿದೆ. 

ಅಂದಹಾಗೆ, ಈ ಹೆಸರು ಇಟ್ಟುಕೊಂಡವರ ಪರಿಸ್ಥಿತಿ ಹೇಗಿದೆ ಎಂದರೆ ಅದಕ್ಕುತ್ತರ ಇಲ್ಲಿದೆ. ಹಿಟ್ಲರ್‌ ಅಬುಹಮಾದ್‌ ಎಂಬ ಹೆಸರಿನ ಯುವಕ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದು, ಶಾಂತಿಪ್ರಿಯರಾದ ಇವರ ಹೆಸರಿನ ಜತೆ ಹಿಟ್ಲರ್‌ ಹೆಸರು ಇರುವುದು ಇವರಿಗೆ ಕಸಿವಿಸಿಯಾಗುತ್ತದಂತೆ.  

ಇದು ಇವರೊಬ್ಬರ ಸಮಸ್ಯೆಯಲ್ಲ, 1976ರಲ್ಲಿ ಹುಟ್ಟಿದ್ದ ಖೈಸಿ ಸದ್ದಾಂ ಹುಸೇನ್‌ ಒಮರ್‌ ಎಂಬವರು ಸದ್ದಾಂ ಹುಸೇನ್‌ ಎಂಬ ಹೆಸರನ್ನು ಹೊಂದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ. ಆದರೆ, ಇನ್ನೂ ಕೆಲವರು ವಿಶ್ವ ನಾಯಕರೊಬ್ಬರ ಹೆಸರನ್ನು ಇಟ್ಟು ಕೊಂಡಿರುವುದು ಖುಷಿ ಕೊಡುತ್ತದೆ ಎನ್ನುತ್ತಾರೆ. ಇವರ ಸಂಖ್ಯೆಯೂ ಗಣನೀಯವಾಗೇ ಇದೆ. ಅದೇನೇ ಇರಲಿ, ಇತಿಹಾಸ ಕಂಡ ವಿವಾದಾತ್ಮಕ ವ್ಯಕ್ತಿಗಳ ಹೆಸರು ಇಲ್ಲಿ ಮುಂದುವರಿದಿದ್ದು, ಹಿಟ್ಲರ್‌, ಕ್ಯಾಸ್ಟ್ರೋ ಮುಂತಾದವರಿಗಿಲ್ಲಿ “ಪುನರಪಿ ಜನನಂ’ ಎಂಬ ಮಾತು ಅಕ್ಷರಶಃ ಸತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next