Advertisement

ಸಾದರು ಎಂದರೆ ಮೊದಲಿಗೆ ನೆನಪಾಗುವುದು ಸರಳತೆ : Dr. G Parameshwara

07:53 PM Apr 08, 2023 | Team Udayavani |

ಕೊರಟಗೆರೆ: ಸಾದರು ಎಂದರೆ ಮೊದಲಿಗೆ ನೆನಪಾಗುವುದು ಅವರ ಸರಳತೆ,  ಉತ್ತಮ ನಡುವಳಿಕೆ, ಇವರು ಜೈನ್ ಸಮುದಾಯದಿಂದ ಹೊರ ಬಂದತಹವರು ಎಂದು ಶಾಸಕ ಡಾ.ಜಿ ಪರಮೇಶ್ವರ ಸಮುದಾಯದ ಹಿರಿಮೆಯ ಬಗ್ಗೆ ಕೊಂಡಾಡಿದರು.

Advertisement

ಪಟ್ಟಣದ ಹಿಂದೂ ಸಾದರ ಸಮುದಾಯ ಭವನದಲ್ಲಿ ಹಿಂದೂ ಸಾದರರ ನಡೆ ಅಭಿವೃದ್ಧಿ ಹರಿಕಾರರ ಕಡೆ ಎಂಬ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಾದರು ಹಿಂದೂ ಸಾದರು, ಲಿಂಗಾಯತ ಸಾದರು, ಜೈನ್ ಸಾದರು ಎಂಬ ಮೂರು ರೀತಿಯಲ್ಲಿ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ, ಬಹಳ ಉತ್ತಮ ಸಮುದಾಯ, ನಿಮ್ಮ ಸಮುದಾಯಕ್ಕೆ ಬೆಂಬಲ ಮತ್ತು ನಿಮ್ಮ ಕಷ್ಟಕ್ಕೆ ಸ್ಪಂದಿಸುವಂತಹ ಒಬ್ಬ ಉತ್ತಮ ಜನನಾಯಕನನ್ನು ಆಯ್ಕೆ ಮಾಡಿ ಎಂದು ಹೇಳಿದರು.

ಬಿಜೆಪಿ ಸರ್ಕಾರ ದುರಾಡಳಿತ ಬಗ್ಗೆ ರಾಜ್ಯದ ಪ್ರತಿಯೊಬ್ಬ ನಾಗರೀಕರಿಗೂ ತಿಳಿದಿದೆ, ಬಿಜೆಪಿ ಸರ್ಕಾರ  ಆಡಳಿತದಲ್ಲಿರುವ ಕಾರಣ ಒಬ್ಬ ಗುತ್ತಿಗೆದಾರ ಕೆಲಸ ಮಾಡಲು ,40% ಕಮಿಷನ್ ಕೇಳುತ್ತಾರೆ, ಕಾರಿಗೆ ಟೋಲ್ ಗಳಲ್ಲಿ 90 ರೂಗಳ ಕಟ್ಟಿಸಿಕೊಳ್ಳುತ್ತಾರೆ, 60 ಕಿಮೀ ನಂತರ ಟೋಲ್ ನಿರ್ಮಿಸಬೇಕು ಆದರೆ,60 ಕಿಮೀ ಒಳಗೆ 2 ಟೋಲ್ ನಿರ್ಮಾಣ ಮಾಡಿ  ಹಣ ವಸೂಲಿ ಮಾಡಿದೆ ಎಂದರು.

ಸರ್ಕಾರಿ ಶಾಲಾ  ಮಕ್ಕಳಿಗೆ ಸಮವಸ್ತ್ರ, ಸ್ಕಾಲರ್ ಶಿಪ್ ಕೂಡ ಸರಿಯಾಗಿ ನೀಡುತ್ತಿಲ್ಲ, ಸಿದ್ದರಾಮಯ್ಯನವರ ಮುಖ್ಯಮಂತ್ರಿಯಾಗಿದ್ದ ವೇಳೆ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ7 ಕೆಜಿ ಅಕ್ಕಿ ನೀಡಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದ ಏಕೈಕ ಪಕ್ಷ,  ಸರ್ಕಾರ ಬಂದ ಕೂಡಲೇ ರಾಜ್ಯದಲ್ಲಿ ಉಂಟಾಗಿರುವ ಮೀಸಲಾತಿ ಗೊಂದಲವನ್ನು ಬಗೆಹರಿಸುತ್ತೇವೆ,  ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸು ನನ್ನದು 2023 ಕ್ಕೆ ಮತ್ತೆ  ಶಾಸಕನಾಗುವಂತೆ  ಆಶೀರ್ವದಿಸಿ, ಜೊತೆಗೆ ಬೆಂಬಲಿಸಿ ಎಂದರು.

ರಾಜ್ಯಾಧ್ಯಕ್ಷ ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪರಮೇಶ್ವರರವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ಎಲ್ಲಾ ಸಮುದಾಯದವರಿಗೂ ಅನುಕೂಲ ಕಲ್ಪಿಸಿದ್ದಾರೆ, ಹಿಂದೆಯೂ ನಮ್ಮ ಹಿಂದೂ ಸಾದರ ಸಮುದಾಯವು ಬೆಂಬಲಿಸಿ 2018 ರಲ್ಲಿ ಗೆಲ್ಲಿಸಿಕೊಂಡೆವು, ಈ ಬಾರಿಯು ಕೂಡ ನಮ್ಮ ಸಮಾಜದ ಪ್ರತಿಯೊಬ್ಬ ವ್ಯಕ್ತಿ ಅವರಿಗೆ ಬೆಂಬಲ ಸೂಚಿಸಿ ಗೆಲುವಿಗೆ ಕಾರಣಿಭೂತರಾಗಬೇಕು ಎಂಸು ಹೇಳಿದರು.

Advertisement

ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿ, 2023 ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಪರಮೇಶ್ವರ ಅವರು ಮುಖ್ಯಮಂತ್ರಿಯಾಗುವುದು ಖಚಿತ, ಕ್ಷೇತ್ರದಲ್ಲಿ 2 ಬಾರಿ ಶಾಸಕನಾಗಿ ಶಿಕ್ಷಣಕ್ಕಾಗಿ 7 ವಸತಿ ಶಾಲೆಯನ್ನು ಡಾ.ಜಿ ಪರಮೇಶ್ವರ ನಿರ್ಮಿಸಿದ್ದು,  ರೈತರಿಗೆ ನೀರಾವರಿ ಯೋಜನೆ, ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕ, ತುಮಕೂರು ಜಿಲ್ಲೆಗೆ ವಿಶ್ವವಿದ್ಯಾಲಯವನ್ನು ತಂದ ವಿಶೇಷ ಜನನಾಯಕ ಎಂದು ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಜಾಗೃತಿ ಸಮಾವೇಶದಲ್ಲಿ ವಿಧಾನ ಪರಿಷತ್ ಮಾಜಿ ಶಾಸಕ ವೇಣು ಗೋಪಾಲ್, ತಾ.ಅಧ್ಯಕ್ಷ ಮಲ್ಲಪ್ಪ, ಪಪಂ ಸದಸ್ಯ ಎಡಿ ಬಲರಾಮಯ್ಯ, ಜಿಲ್ಲಾ ನಿರ್ದೇಶಕ ಹನುಮಾನ್, ಶ್ರೀನಿವಾಸ್ ಮೂರ್ತಿ, ಶ್ರೀಧರ್ ಜೂಜುವಾಡಿ, ಶಶಿಧರ್ ಗಂಕರನಹಳ್ಳಿ, ಅತ್ತಿಬೆಲೆ ಮಂಜುನಾಥ್, ಪ್ರಭಾಕರ್, ಬೆಂಗಳೂರು ಶಿವಶಂಕರ್,   ಡೈರಿ ಅಧ್ಯಕ್ಷ ನಂಜೇಗೌಡ್ರು, ಕಾಕಿ ಶಿವಣ್ಣ, ಜಯರಾಮ್, ಆಟೋಕುಮಾರ್, ಪ್ರಕಾಶ್, ಲಾರಿ ಗೌಡ, ಲಕ್ಷ್ಮೀಕಾಂತ, ಹರೀಶ್  ಸೇರಿದಂತೆ ಸಮದಾಯದ ಮಹಿಳೆಯರು, ಯುವಕರು ಇದ್ದರು.

ಸಮುದಾಯದ ಮನವಿ
ಸಾದರ ಸಮುದಾಯದ ಕಟ್ಟಡಕ್ಕೆ ಸರ್ಕಾರದ ಮಟ್ಟದಲ್ಲಿ ವಿಶೇಷ ಅನುದಾನ ಜಾರಿಗೊಳಿಸಿ ಸಮುದಾಯ ಭವನ ನಿರ್ಮಾಣಕ್ಕೆ ಸಹಕರಿಸಿದರು, ಸಮುದಾಯಕ್ಕೆ  ಒಳಮೀಸಲಾತಿ ಮತ್ತು  ಅಭಿವೃದ್ಧಿ ನಿಗಮವನ್ನು ಕೊಡುಗೆಯಾಗಿ ನೀಡಬೇಕೆಂದು  ಸಮದಾಯದ ಪ್ರಮುಖ ಮುಖಂಡರು ಮನವಿ ಪತ್ರದ ಮುಖಾಂತರ ಮನವಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next