Advertisement

ಸದಾನಂದಗೌಡರಿಂದ ಯಶವಂತಪುರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ

11:47 AM Mar 29, 2019 | Team Udayavani |

ಕೆಂಗೇರಿ: ಬೆಂಗಳೂರು ಉತ್ತರ ಲೋಕಸಬಾ ಕೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಯಶವಂತಪುರ ವಿದಾನಸಬಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ಕಾರ್ಯಕರ್ತರೊಂದಿಗೆ ಕೂಡಿ ನಡೆಸಿದರು.

Advertisement

ಕ್ಷೇತ್ರದ ಬಿಬಿಎಂಪಿ ವಾರ್ಡಿನ ಹೇರೋಹಳ್ಳಿ ಯಲ್ಲಿ ಬೆಳಿಗ್ಗೆ 6-00 ರಿಂದ ಪ್ರಾರಂಬಿಸಿ ಸಂಜೆ 4-00 ಕ್ಕೆ ದೊಡ್ಡಿಬಿದರಕಲ್ಲಿನಲ್ಲಿ ಅಂತ್ಯಗೊಳಿಸಿದರು, ಈ ಸಂದರ್ಭದಲ್ಲಿ ಅವರು ಪ್ರಮುಖ ಉದ್ಯಾನವನ ಹಾಗು ಕಾರ್ಯಕರ್ತರ ಮನೆಗಳಲ್ಲಿ ಸಭೆಗಳನ್ನು ನಡೆಸಿದರು ಜತೆಗೆ ಕೂಡಿಗೆಹಳ್ಳಿ ಗ್ರಾಮ ಪಂಚಾಯಿತಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತಯಾಚನೆಯನ್ನು ಮಾಡಿದರು.

ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಅನಂತರಾಜು ಮನೆಯಲ್ಲಿ ಸಭೆ ಸೇರಿ ಪತ್ರಕರ್ತರೂಂದಿಗೆ ಮಾತನಾಡುತ್ತ, ಕಳೆದ ಫೆಬ್ರವರಿಯಿಂದಲೆ ಚುನಾವಣಾ ಸಿದ್ದತೆಯನ್ನು ಮಾಡಿದ್ದು ಬೂತ್‌ ಹಾಗು ವಾರ್ಡ್‌ ಮಟ್ಟದಲ್ಲಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ 64ಕ್ಕೂ ಹೆಚ್ಚು ಸಭೆಗಳನ್ನು ಮಾಡಿದ್ದು ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮುಖಂಡರನ್ನು ಬೇಟಿ ಮಾಡಿರುವೆ ಎಂದು ಸದಾನಂದಗೌಡ ಹೇಳಿದರು.

ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈಬಾರಿಯದು ವಿಬಿನ್ನವಾದ ಚುನಾವಣೆಯಾಗಿದೆ, ಇತರ ಪಕ್ಷದ ಮುಖಂಡರು ಸಹ ನನಗೆ ಬೆಂಬಲವಾಗಿ ನಿಂತು ಸಹಕರಿಸುತ್ತಿದ್ದಾರೆ, ರಾಜ್ಯದಲ್ಲಿ ಯಾವುದೇ ಸರಕಾರವಿದ್ದರು ಕೇಂದ್ರದಲ್ಲಿ ಮೋದಿಜಿಯವರ ದೃಡವಾದ ಸರಕಾರವೇ ಇರಬೇಕು ಎಂಬ ಬಾವನೆ ಎಲ್ಲೆಡೆ ಇದೆ ಎಂದರು.

ಕಳೆದ ಐದು ವರ್ಷದಲ್ಲಿ ಕೇಂದ್ರವು ನಮ್ಮರಾಜ್ಯಕ್ಕೆ ಅತಿ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿದೆ, ಇದು ದೇಶದ ಅತಿ ಪ್ರಮುಖ ರಾಜ್ಯವಾದ್ದರಿಂದ ಅಭಿವೃದ್ದಿಗಾಗಿ ಹಿಂದಿನ ಯುಪಿಎ ಸರಕಾರ ನೀಡಿದ ಅನುದಾನಕ್ಕಿಂತ ನಾಲ್ಕು ಪಟ್ಟು ಹೆಚ್ಚು ಅನುದಾನವನ್ನು ನಮ್ಮ ಎನ್‌ಡಿಎ ಸರಕಾರ ನೀಡಿದೆ ಎಂದರು. ಉತ್ತರ ಲೋಕಸಭಾ ಕ್ಷೇತ್ರಕ್ಕಾಗಿ ಪ್ರತ್ಯೇಕ ಪಾಸ್‌ಪೋರ್ಟ್‌ ಕಚೇರಿಯನ್ನು ಯಶವಂತಪುರದಲ್ಲಿ ತೆರೆಯಲಾಗಿದೆ,

Advertisement

ಮೆಟ್ರೋ ಮೂರನೇ ಹಂತಕ್ಕೆ ಕೇಂದ್ರದ ಪಾಲನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಬೆಂಗಳೂರಿನ ಸಮಗ್ರ ಅಭಿವೃದ್ದಿಗೆ ಒತ್ತು ನೀಡಿದೆ ಎಂದರು.ಕ್ಷೇತ್ರದಾದ್ಯಂತ ಜನರ ಸ್ಫಂದನೆ ಉತ್ತಮವಾಗಿದ್ದು ಮುಂದಿನ 5 ವರ್ಷನರೇಂದ್ರ ಮೋದಿಜೀಯವರ ಸರ್ಕಾರಕ್ಕಾಗಿ ನನ್ನನ್ನು ಅತಿ ಹೆಚ್ಚು ಮತಗಳ ಅಂತರದಿಂದ ಜಯಶೀಲರನ್ನಾಗಿಸುತ್ತಾರೆ ಎಂಬ ಭರವಸೆ ಇದೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಮಂಡಲಾದ್ಯಕ್ಷ ಸಿ.ಎಂ.ಮಾರೇಗೌಡ, ಪ್ರದಾನ ಕಾರ್ಯದರ್ಶಿ ಅನಂತರಾಜು,ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶೀ ರಘು, ಒಬಿಸಿ ಉಪಾಧ್ಯಕ್ಷ ರಘನಂದನ್‌, ಮಾಜಿ ಪಾಲಿಕೆ ಸದಸ್ಯ ರ.ಅಂಜಿನಪ್ಪ, ಹಿಂದುಳಿದ ವರ್ಗದ ಪ್ರದಾನ ಕಾರ್ಯದರ್ಶಿ ಜೆ.ರಮೇಶ್‌,

-ಯುವ ಮೋರ್ಚಾದ ಮನು, ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯಿತ್ರಿಗೌಡ,ಸೌಮ್ಯ ಬಾರ್ಗವ,ನವೀಗೌಡ, ಕಾರ್ಮಿಕ ಪ್ರಕೋಷ್ಟ ಅಧ್ಯಕ್ಷ ಉಪೇಂದ್ರ ಕುಮಾರ್‌, ಕೆಂಗೇರಿ ವಾರ್ಡ್‌ ಅಧ್ಯಕ್ಷ ನಾಗರಾಜ್‌,ನವೀನ್‌ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next