Advertisement
ಮಂಗಲ ಪ್ರವಚನ ನೀಡಿದ ಕಾರ್ಕಳದ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಭಾರತವು ಧರ್ಮ, ಸಂಸ್ಕೃತಿಯ ನೆಲೆವೀಡಾಗಿದ್ದು, ಭಗವಂತನ ಸಂದೇಶ ಮೂರ್ತಿರೂಪದಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾಪನೆಗೊಂಡಿದೆ. ಭಗವಾನ್ ಬಾಹುಬಲಿ ಮೂರ್ತಿಯ ಆರಾಧನೆಯಿಂದ ತ್ಯಾಗ, ಅಹಿಂಸೆ, ಸಂಯಮ, ಇಂದ್ರಿಯ ನಿಗ್ರಹ ಗುಣಗಳು ಉದ್ದೀಪನಗೊಂಡು ಶಾಂತಿ, ಸಾಮರಸ್ಯ ಮೂಡಿಬರುತ್ತವೆ ಎಂದರು.
ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ, ಡಿ. ಹರ್ಷಂದ್ರ ಕುಮಾರ್, ಸುಪ್ರಿಯಾ ಹರ್ಷಂದ್ರ ಕುಮಾರ್, ಡಾ| ಬಿ. ಯಶೋವರ್ಮ, ಸೋನಿಯಾ ವರ್ಮ ಮತ್ತು ಕುಟುಂಬಸ್ಥರು ಪಾದಾಭಿಷೇಕ ನಡೆಸಿದರು. ಶಿಶಿರ ಇಂದ್ರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಉಪಸ್ಥಿತರಿದ್ದರು. ಮಂಗಳದ್ರವ್ಯ ಪುಷ್ಪಾರ್ಚನೆ
ಬೆಳಗ್ಗೆ 9 ಗಂಟೆಗೆ ಹೆಗ್ಗಡೆಯವರ ಬೀಡಿನಿಂದ ಅಗ್ರೋದಕ ಮೆರವಣಿಗೆ ಬಾಹುಬಲಿ ಬೆಟ್ಟಕ್ಕೆ ಸಾಗಿತು. ಪಂಚ ನಮಸ್ಕಾರ ಮಂತ್ರ ಪಠಣ, ಜಿನ ಭಜನೆ ಮತ್ತು ಭಕ್ತಿಗೀತೆಗಳ ಗಾಯನ ನಡುವೆ ಭಗವಾನ್ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು. ಕ್ಷೀರಾಭಿಷೇಕ, ಸೀಯಾಳಾಭಿ
ಷೇಕ, ಅಕ್ಕಿಹಿಟ್ಟು, ಗಂಧ, ಚಂದನ ಬಳಿಕ ಚತುಷ್ಕೋಣ ಕಲಶಾಭಿಷೇಕ ನಡೆದು ಪುಷ್ಪವೃಷ್ಟಿಯೊಂದಿಗೆ ಪೂರ್ಣಕುಂಭ ಅಭಿಷೇಕ ನಡೆದು ಮಹಾಮಂಗಳಾರತಿಯೊಂದಿಗೆ ಪೂರ್ಣಗೊಂಡಿತು.
Related Articles
Advertisement