ನವದೆಹಲಿ: ಇರಾನ್ ನಲ್ಲಿ ನಡೆಯುತ್ತಿರುವ ಹಿಜಾಬ್ ಪ್ರತಿಭಟನೆ ದಿನಕಳೆದಂತೆ ಕಾವು ಪಡೆದುಕೊಳ್ಳುತ್ತಿದೆ. ನೂರಾರು ಮಂದಿ ರಸ್ತೆಗಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮೂಲಕ ಧಿಕ್ಕಾರ ಕೂಗುತ್ತಿದ್ದಾರೆ.
ಸಂಘ – ಸಂಸ್ಥೆಗಳ ಮಹಿಳಾ ಕಾರ್ಯಕರ್ತರು ಹಿಜಾಬ್ ಸುಟ್ಟು, ಕೂದಲು ಕತ್ತರಿಸಿ ಸರ್ಕಾರದ ನಿಯಮವನ್ನು ವಿರೋಧಿಸಿದ್ದರು. ಇತ್ತೀಚೆಗೆ ಇಬ್ಬರು ಮಹಿಳೆಯರು ಹಿಜಾಬ್ ಧರಿಸದೇ ರೆಸ್ಟೋರೆಂಟ್‌ನಲ್ಲಿ ಉಪಾಹಾರ ಸೇವಿಸುತ್ತಿರುವ ಕಾರಣದಿಂದ ಮಹಿಳೆಯನ್ನು ಬಂಧಿಸಿದ್ದರು. ಪ್ರತಿಭಟನೆ ವೇಳೆ ಸ್ಕಾರ್ಫ್ ಕಿತ್ತೆಸೆದ ಹದೀಸ್ ನದಾಫಿ ಎಂಬಾಕೆಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಇರಾನ್ ನ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಇರಾನಿ ನಟಿ ಎಲ್ನಾಜ್ ನೊರೌಜಿ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವರು ಅವರು, “ಪ್ರತಿಯೊಬ್ಬ ಮಹಿಳೆ, ಜಗತ್ತಿನ ಎಲ್ಲಿಂದಲಾದರೂ, ಅವಳು ಎಲ್ಲಿಂದ ಬಂದವಳಾಗಿದ್ದರೂ, ತನಗೆ ಬೇಕಾದುದ್ದನ್ನು ಮತ್ತು ಯಾವಾಗ ಅಥವಾ ಎಲ್ಲಿ ಬೇಕಾದರೂ ಧರಿಸಲು ಹಕ್ಕನ್ನು ಹೊಂದಿರಬೇಕು. ಯಾವುದೇ ಪುರುಷ ಅಥವಾ ಯಾವುದೇ ಮಹಿಳೆ ಅವಳ ಹಕ್ಕನ್ನು ಪ್ರಶ್ನಿಸುವಂತಿಲ್ಲ” ಎಂದು ಬರೆದಿದ್ದಾರೆ.
ಪ್ರತಿಯೊಬ್ಬರೂ ವಿಭಿನ್ನ ದೃಷ್ಟಿಕೋನಗಳು ಮತ್ತು ನಂಬಿಕೆಗಳನ್ನು ಹೊಂದಿದ್ದಾರೆ ಮತ್ತು ಅದನ್ನು ಗೌರವಿಸಬೇಕು. ಪ್ರಜಾಪ್ರಭುತ್ವ ಎಂದರೆ ನಿರ್ಧರಿಸುವ ಶಕ್ತಿ. ಪ್ರತಿಯೊಬ್ಬ ಮಹಿಳೆಗೂ ತನ್ನ ದೇಹದ ಮೇಲೆ ನಿರ್ಧರಿಸುವ ಅಧಿಕಾರ ಇರಬೇಕು. ನಾನು ನಗ್ನತೆಯನ್ನು ಪ್ರಚಾರ ಮಾಡುತ್ತಿಲ್ಲ, ನಾನು ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಚಾರ ಮಾಡುತ್ತಿದ್ದೇನೆ” ಎಂದು ಬರೆದಿದ್ದಾರೆ.
‘ಸೇಕ್ರೆಡ್ ಗೇಮ್ಸ್’ ಎನ್ನುವ ವೆಬ್ ಸರಣಿಯಲ್ಲಿ ಎಲ್ನಾಜ್ ನೊರೌಜಿ ಅಭಿನಯಿಸಿದ್ದಾರೆ.