ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲಿರುವ ನಾಗಬನವೊಂದರ ಮೇಲೆ ಬೃಹತ್ ಅಶ್ವಥ ಮರವೊಂದು ಉರುಳಿ ಬಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟ ಉಂಟಾಗಿದೆ.
ಪೊಲಿಪು ಕೇಸಪ್ಪು ಕುಟುಂಬಸ್ಥರ ನಾಗಬನದಲ್ಲಿದ್ದ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ನಾಗಬನ ಸಂಪೂರ್ಣ ಹಾನಿಗೊಳಗಾಗಿದ್ದು, ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ನಾಗ ದೇವರ ಕಟ್ಟೆ ಮತ್ತು ಕಲ್ಲುಗಳಿಗೂ ಹಾನಿಯುಂಟಾಗಿದೆ.
ಇದನ್ನೂ ಓದಿ:‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು
ಮರ ಉರುಳಿ ಬಿದ್ದು ವಿದ್ಯುತ್ ಕಂಬಗಳಿಗೂ ಹಾನಿಯಿಂಟಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಪೂರೈಕೆಯಲ್ಲೂ ವೃತ್ಯಯ ಉಂಟಾಗಿದೆ.
ಮೆಸ್ಕಾಂ ಸಿಬಂದಿಗಳು ಬೆಳಗ್ಗಿನಿಂದಲೂ ಮರ ತೆರವುಗೊಳಿಸುವ ಕೆಲಸದಲ್ಲಿ ನಿರತರಾಗಿದ್ದು, ಸ್ಥಳೀಯರೂ ಕೂಡಾ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ: ಸರಕಾರಿ ಶಾಲೆಗಳಿಗೆ ಬಣ್ಣ , ಚಿತ್ತಾರ : ಕ್ಯಾಂಪಸ್ ಟು ಕಮ್ಯೂನಿಟಿ ಬಳಗದ ಯುವಕರ ಸಾಧನೆ