Advertisement

‘ಧಾರ್ಮಿಕ ಕ್ಷೇತ್ರದಿಂದ ಸಂಸ್ಕಾರ, ಸಂಸ್ಕೃತಿ ಅನಾವರಣ’

02:54 PM May 02, 2018 | |

ಪಡುಪಣಂಬೂರು: ಧಾರ್ಮಿಕ ಕ್ಷೇತ್ರಗಳು ಸಂಸ್ಕಾರ, ಸಂಸ್ಕೃತಿಯನ್ನು ಅನಾವರಣಗೊಳಿಸುವ ಕೇಂದ್ರಗಳಾಗಿವೆ. ಇಲ್ಲಿ ಧಾರ್ಮಿಕ ಜಾಗೃತಿಯೊಂದಿಗೆ ಸಮಾಜದ ಎಲ್ಲ ವರ್ಗದವರನ್ನು ಕೂಡಿಸಿಕೊಂಡು ಕ್ಷೇತ್ರವನ್ನು ಬೆಳಗಿಸುವಲ್ಲಿ ಪ್ರಯತ್ನ ನಡೆಸಬೇಕು. ಕಾಲ ಕಾಲಕ್ಕೆ ವಿಧಿ ವಿಧಾನಗಳನ್ನು ನಡೆಸಲು ಸಹಕಾರಿಯಾಗುತ್ತದೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ನುಡಿದರು.

Advertisement

ಪಡುಪಣಂಬೂರು ಹೊಗೆಗುಡ್ಡೆ ಶ್ರೀ ಗೌರೀಶಂಕರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ
ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮೂಲ್ಕಿ ಸೀಮೆಯ ಅರಸರು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆಯನ್ನು ವಹಿಸಿದ್ದರು. ದೆಪ್ಪುಣಿಗುತ್ತು ಗುತ್ತಿನಾರ್‌ ಜಯರಾಂ ಶೆಟ್ಟಿ ಉದ್ಘಾಟಿಸಿದರು.

ಸಮ್ಮಾನ
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೊಲ್ನಾಡು ಉತ್ರುಂಜೆ ಭುಜಂಗ ಎಂ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವಕ್ಕೆ ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ, ಮುಂಬಯಿ ಬಂಟರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಎ. ಸದಾಶಿವ ಶೆಟ್ಟಿ, ಮುಂಬಯಿ ಬಂಟರ ಸಂಘದ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಬಪ್ಪನಾಡು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕಿಲ್ಪಾಡಿ
ಬಂಡಸಾಲೆ ಶೇಖರ್‌ ಶೆಟ್ಟಿ, ಕಟೀಲು ಬ್ರಹ್ಮಶ್ರೀ ಗಣಪತಿ ತಂತ್ರಿ, ದೇಗುಲದ ಆಡಳಿತ ಮೊಕ್ತೇಸರ ಎಚ್‌. ಗಣಪತಿ
ಭಟ್‌, ಕೋಶಾಧಿಕಾರಿ ಎಚ್‌. ಶ್ರೀಕಾಂತ್‌ ಭಟ್‌, ಕಲ್ಲಾಪು ದೇಗುಲದ ರತ್ನಾಕರ ಶೆಟ್ಟಿಗಾರ್‌ ಯಾನೆ ಕಾಂತಣ್ಣ ಗುರಿಕಾರ, ಉದ್ಯಮಿ ಬಡಿಲಗುತ್ತು ಮಹೇಶ್‌ ಹೆಗ್ಡೆ ಹಳೆಯಂಗಡಿ, ಉದ್ಯಮಿ ಭಾಸ್ಕರ ಸಾಲ್ಯಾನ್‌, ಕೊಲ್ನಾಡುಗುತ್ತು ಸುಜಿತ್‌ ಆಳ್ವ ಮತ್ತಿತರರು ಉಪಸ್ಥಿತರಿದ್ದರು. 

ಬ್ರಹ್ಮಕಲಶೋತ್ಸವ ಸಮಿತಿಯಪ್ರ. ಕಾರ್ಯದರ್ಶಿ ಕೊಲ್ನಾಡುಗುತ್ತು ರಾಮಚಂದ್ರ ನಾಯಕ್‌ ಸ್ವಾಗತಿಸಿದರು,
ಉಪಾಧ್ಯಕ್ಷ ವಿಧ್ಯಾಧರ ಶೆಟ್ಟಿ ಕೊಲ್ನಾಡುಗುತ್ತು, ಕದ್ರಿ ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ವಿಜಯಕುಮಾರ್‌ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ರತಿ ಎಕ್ಕಾರು, ಸಹ ಕಾರ್ಯದರ್ಶಿ ಚಂದ್ರಶೇಖರ ಜಿ. ಪರಿಚಯಿಸಿದರು, ನವೀನ್‌ ಶೆಟ್ಟಿ ಎಡ್ಮೆಮಾರ್‌ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next