ಮುಂಬೈ: ಸದಾ ಒಂದಲ್ಲ ಒಂದು ಹೇಳಿಕೆಗಳನ್ನು ನೀಡುತ್ತಿರುವ ಪಾಕಿಸ್ಥಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಇದೀಗ ಮತ್ತೊಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಬ್ಯಾಟರ್ ಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಐಸಿಸಿಯ ಇತ್ತೀಚಿನ ನಿಯಮಗಳ ವಿರುದ್ಧ ಅಖ್ತರ್ ಕಿಡಿಕಾರಿದ್ದಾರೆ.
ಟೀಂ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಜೊತೆ ವಿಡಿಯೋ ಚಾಟ್ ನಲ್ಲಿ ಮಾತನಾಡಿದ ಅಖ್ತರ್ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಆಡುತ್ತಿದ್ದರೆ ಅವರು ಒಂದು ಲಕ್ಷ ರನ್ ಗಳಿಸುತ್ತಿದ್ದರು ಎಂದು ಅಖ್ತರ್ ಹೇಳಿದ್ದಾರೆ.
“ಈಗ ಎರಡು ಹೊಸ ಚೆಂಡುಗಳನ್ನು ನೀಡಲಾಗುತ್ತಿದೆ. ನಿಯಮಗಳನ್ನು ಕಠಿಣ ಮಾಡಲಾಗುತ್ತದೆ. ಈಗಿನ ನಿಯಮಗಳು ಬ್ಯಾಟರ್ ಗಳಿಗೆ ಹೆಚ್ಚಿನ ಅವಕಾಶ ನೀಡುತ್ತದೆ. ಈಗ ಬ್ಯಾಟರ್ ಗೆ ಮೂರು ರಿವೀವ್ ಗೆ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಸಚಿನ್ ತೆಂಡೂಲ್ಕರ್ ಆಡುವ ಸಮಯದಲ್ಲಿ ಮೂರು ರಿವೀವ್ ಅವಕಾಶವಿದ್ದರೆ ಅವರು ಒಂದು ಲಕ್ಷ ರನ್ ಗಳಿಸುತ್ತಿದ್ದರು” ಎಂದು ಅಖ್ತರ್ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಅಂಡರ್ 19 ವಿಶ್ವಕಪ್: ಪಾಕ್ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ
“ಸಚಿನ್ ಆರಂಭದಲ್ಲಿ ವಾಸಿಮ್ ಅಕ್ರಮ್, ವಾಖರ್ ಯೂನಸ್, ಶೇನ್ ವಾರ್ನೆ, ಬ್ರೆಟ್ ಲೀ, ಶೋಯೆಬ್ ಅಖ್ತರ್, ಮತ್ತು ನಂತರದ ಪೀಳಿಗೆಯ ಬೌಲರ್ ಗಳನ್ನು ಅವರು ಎದುರಿಸಿದರು. ಹೀಗಾಗಿ ಸಚಿನ್ ಒಬ್ಬ ಕಠಿಣ ಬ್ಯಾಟ್ಸಮನ್ ಎಂದು ನಾನು ಕರೆಯುತ್ತೇನೆ” ಎಂದಿದ್ದಾರೆ.