Advertisement

ತೆಂಡುಲ್ಕರ್‌-ವಿರಾಟ್‌ ಕೊಹ್ಲಿ ಹೋಲಿಕೆ ಸರಿಯಲ್ಲ: ರಿಕಿ ಪಾಂಟಿಂಗ್‌

03:45 AM Feb 08, 2017 | |

ಹೊಸದಿಲ್ಲಿ: ಸಮಕಾಲೀನ ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಸರ್ವಶ್ರೇಷ್ಠ ಬ್ಯಾಟ್ಸ್‌ ಮನ್‌ ಎನಿಸಿದ್ದಾರೆ. ಎಬಿ ಡಿ ವಿಲಿಯರ್, ಜೋ ರೂಟ್‌, ಕೇನ್‌ ವಿಲಿಯಮ್ಸನ್‌, ಡೇವಿಡ್‌ ವಾರ್ನರ್‌ ಅವರಂತಹ ದಿಗ್ಗಜರನ್ನೆಲ್ಲ ಮೀರಿ ನಿಂತು ನಂ.1 ಬ್ಯಾಟ್ಸ್‌ಮನ್‌ ಕೂಡ ಆಗಿದ್ದಾರೆ. ಅವರನ್ನು ಈಗಲೇ ಸಚಿನ್‌ ತೆಂಡುಲ್ಕರ್‌ಗೆ ಹೋಲಿಸಲು ಆರಂಭವಾಗಿದೆ. 

Advertisement

ಈ ಬಗ್ಗೆ ವಿಶ್ವ ಕಂಡ ಮತ್ತೂಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್‌ ಪಾಂಟಿಂಗ್‌ ಪ್ರತಿಕ್ರಿಯಿಸಿ, ಕೊಹ್ಲಿಯನ್ನು ಇಷ್ಟು ಬೇಗ ಸಚಿನ್‌ಗೆ ಹೋಲಿಸುವುದು ಸರಿಯಲ್ಲ. ಅವರಿನ್ನೂ ತೆಂಡುಲ್ಕರ್‌ ಅವರ ಅರ್ಧ ಹಾದಿಯನ್ನೂ ಕ್ರಮಿಸಿಲ್ಲ ಎಂದಿದ್ದಾರೆ.

ವಿಶ್ವಶ್ರೇಷ್ಠ ಕ್ರಿಕೆಟಿಗರ ಲಕ್ಷಣ ಅವರ ದೀರ್ಘಾವಧಿಯ ಆಟದಲ್ಲಿ ರುತ್ತದೆ. ತೆಂಡುಲ್ಕರ್‌ 200 ಟೆಸ್ಟ್‌ ಪಂದ್ಯಗಳನ್ನು ಆಡಿಯೂ ಅದೇ ಬ್ಯಾಟಿಂಗ್‌ ಗುಣಮಟ್ಟವನ್ನು ಕಾಪಾಡಿಕೊಂಡಿದ್ದರು. ಇತರ ಶ್ರೇಷ್ಠ ಆಟಗಾರರಾದ ಕ್ಯಾಲಿಸ್‌, ಲಾರಾ ವಿಚಾರದಲ್ಲೂ ಇದೇ ಮಾತು ಅನ್ವಯವಾಗುತ್ತದೆ. ಸದ್ಯದ ಮಟ್ಟಿಗೆ ಕೊಹ್ಲಿ ತೆಂಡುಲ್ಕರ್‌ ಅವರ ಅರ್ಧ ಸಾಧನೆಯನ್ನೂ ಮಾಡಿಲ್ಲವಾದ್ದರಿಂದ ಹೋಲಿಕೆಯೇ ತಪ್ಪು ಎಂದು ಪಾಂಟಿಂಗ್‌ ಹೇಳಿದ್ದಾರೆ. 

ಇದೇ ವೇಳೆ ಸಮಕಾಲೀನ ಕ್ರಿಕೆಟ್‌ನಲ್ಲಿ ಕೊಹ್ಲಿಯೇ ಶ್ರೇಷ್ಠ ಬ್ಯಾಟ್ಸ್‌ ಮನ್‌ ಎನ್ನುವುದನ್ನು ರಿಕಿ ಒಪ್ಪಿ ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next