ಹೊಸದಿಲ್ಲಿ: ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಜಾಧವ್‌ಪುರ ವಿಶ್ವವಿದ್ಯಾನಿಲಯ ನೀಡಲು ಬಯಸಿದ್ದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. “ಡಾಕ್ಟರೇಟ್ ಗೌರವಕ್ಕೆ ಸಚಿನ್ ತೆಂಡುಲ್ಕರ್ ಅವರ ಹೆಸರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರು ನೈತಿಕ ಕಾರಣಗಳಿಂದಾಗಿ ಈ ಗೌರವ ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ’ ಎಂದು ಪಶ್ಚಿಮ ಬಂಗಾಲದ ಜಾಧವ್‌ಪುರ ವಿಶ್ವವಿದ್ಯಾನಿಲಯದ ಕುಲಪತಿ ಸುರಂಜನ್ ದಾಸ್ ಹೇಳಿದ್ದಾರೆ.
“ನಾನು ಯಾವುದೇ ವಿಶ್ವ ವಿದ್ಯಾನಿಲಯದ ಗೌರವವನ್ನು ಸ್ವೀಕರಿಸುವುದಿಲ್ಲ. ಇಲ್ಲಿಯವರೆಗೆ ನಾನೇನೂ ಗಳಿಸಿಲ್ಲ. ಹೀಗಾಗಿ ಡಾಕ್ಟರೇಟ್ ಗೌರವವನ್ನು ಸ್ವೀಕರಿಸುವುದು ಸರಿಯಲ್ಲ ಎಂಬುದಾಗಿ ಸಚಿನ್ ಹೇಳಿದ್ದಾರೆ’ ಎಂದು ಸುರಂಜನ್ ದಾಸ್ ತಿಳಿಸಿದರು. ಸಚಿನ್ ನಿರಾಕರಣೆಯ ಬಳಿಕ ಈ ಗೌರವವನ್ನು ಬಾಕ್ಸರ್ ಮೇರಿ ಕೋಮ್ ಅವರಿಗೆ ನೀಡಲು ನಿರ್ಧರಿಸಲಾಗಿದೆ.
ಸಚಿನ್ ತೆಂಡುಲ್ಕರ್ ಇದಕ್ಕೂ ಮುನ್ನ ಆಕ್ಸ್‌ಫರ್ಡ್ ವಿಶ್ವ ವಿದ್ಯಾನಿಲಯ ಹಾಗೂ ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನೂ ತಿರಸ್ಕರಿಸಿದ್ದರು.ನಾನು ಯಾವುದೇ ವಿಶ್ವ ವಿದ್ಯಾನಿಲಯದ ಗೌರವವನ್ನು ಸ್ವೀಕರಿಸುವುದಿಲ್ಲ. ಇಲ್ಲಿಯವರೆಗೆ ನಾನೇನೂ ಗಳಿಸಿಲ್ಲ. ಹೀಗಾಗಿ ಡಾಕ್ಟರೇಟ್ ಗೌರವವನ್ನು ಸ್ವೀಕರಿಸುವುದು ಸರಿಯಲ್ಲ.
-ಸಚಿನ್ ತೆಂಡುಲ್ಕರ್