Advertisement

ಸಚಿನ್‌ ತೆಂಡುಲ್ಕರ್‌…ಆದರೆ ಅವರಲ್ಲ

11:35 PM Dec 14, 2021 | Team Udayavani |

ಮಂಗಳೂರು: 1999; ಹೊಸದಿಲ್ಲಿಯ ಫಿರೊಜ್‌ಷಾ ಕೋಟ್ಲಾ ಮೈದಾನದ‌ಲ್ಲಿ ಭಾರತ-ಪಾಕಿಸ್ಥಾನ ಹೈ ವೋಲ್ಟೇಜ್ ಪಂದ್ಯ. ಸುನೀಲ್‌ ಗವಾಸ್ಕರ್‌ ವೀಕ್ಷಕ ವಿವರಣೆ ನೀಡುತ್ತಿದ್ದರು. ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಯುವಕನೋರ್ವನ ಮೇಲೆ ಶೂಟಿಂಗ್‌ ಕ್ಯಾಮೆರಾ ಅಚಾನಕ್‌ ಆಗಿ ಬಿತ್ತು. ಆರೇ ಸಚಿನ್‌ ತೆಂಡೂಲ್ಕರ್‌ ಮೈದಾನದ‌ಲ್ಲಿ ಫಿಲ್ಡಿಂಗ್‌ ಮಾಡುತ್ತಿದ್ದಾರೆ. ಮತ್ತೆ ಗ್ಯಾಲರಿಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಉದ್ಘಾರ ಕೆಲವೇ ಕ್ಷಣದಲ್ಲಿ ಸುನೀಲ್‌ ಗವಾಸ್ಕರ್‌ ಅವರಿಂದ ಹೊರಬಿತ್ತು. ಆ ಯುವಕನನ್ನು ಗವಾಸ್ಕರ್‌ ಅವರು ವೀಕ್ಷಕ ವಿವರಣೆ ಕೊಠಡಿಗೆ ಕರೆಯಿಸಿಕೊಂಡರು. ಕ್ಯಾಮೆರಾಗಳು ತೋರಿಸತೊಡಗಿದವು. ಕ್ರಿಕೆಟ್‌ದೇವರು ಎಂದು ಕ್ರಿಕೆಟ್‌ ಆರಾಧಿಸಲ್ಪಡುವ ಸಚಿನ್‌ ತೆಂಡೋಲ್ಕರ್‌ ಅವರನ್ನು ಹೋಲುವ ಬಲ್ವೀರ್ ಚಂದ್‌ ಹೊರ ಜಗತ್ತಿಗೆ ತೆರೆದುಕೊಂಡರು.

Advertisement

ಥೇಟ್‌ ಸಚಿನ್‌ ತೆಂಡುಲ್ಕರ್‌ ಅವರಂತೆ ಕಾಣುವ , ಜಾಹೀರಾತುಗಳ ಶೂಟಿಂಗ್‌ ಪೂರ್ವದಲ್ಲಿ ಅವರ ಡ್ನೂಪ್‌ ಆಗಿ ನಟಿಸುತ್ತಿರುವ ಬಲ್ವೀರ್ ಅವರು ಮೂಲತಃ ಪಂಜಾಬ್‌ನ ನವ್‌ಶಹರ್‌ ಜಿಲ್ಲೆಯ ಶಹೀದ್‌ ಭಗತ್‌ಸಿಂಗ್‌ ನಗರದ ನಿವಾಸಿ. ಸಚಿನ್‌ ಅವರನ್ನೇ ಹೋಲುತ್ತಿದ್ದ ಬಲ್ವಿàರ್‌ ಚಂದ್‌ ಅವರು ಎಲ್ಲಿ ಹೋದರೂ ಜನ ಅವರನ್ನು ನೋಡಿ ಸಚಿನ್‌ ತೆಂಡುಲ್ಕರ್‌ ಎಂದು ಕನ್‌ಫ್ಯೂಸ್‌ ಆಗುತ್ತಿದ್ದರು. ಮಂಗಳೂರಿನಲ್ಲಿ ಖಾಸಗಿ ಸಮಾರಂಭವೊಂದಕ್ಕೆ ಸೋಮವಾರ ಆಗಮಿಸಿದ ಸಂದರ್ಭದಲ್ಲಿ ಉದಯವಾಣಿ ಕಚೇರಿಗೆ ಆಗಮಿಸಿದ ಬಲ್ವೀರ್ ಅವರು ಸಚಿನ್‌ ತದ್ರೂಪದ ತನ್ನ ಕಥೆಯನ್ನು ಬಿಚ್ಚಿಟ್ಟರು.

ಬಲ್ವೀರ್ ಚಂದ್‌ ಊರಿನಲ್ಲಿ ಎಲ್ಲರೂ ಸಚಿನ್‌ ಎಂದೇ ಕರೆಯುತ್ತಿದ್ದರು. ಫಿರೋಜ್‌ಷಾ ಮೈದಾನಿನ ಪಂದ್ಯದ ಬಳಿಕ ಸಚಿನ್‌ ತದ್ರೂಪ ಅವರಿಗೆ ಹೊಸ ಅವಕಾಶವನ್ನು ತೆರೆದಿಟ್ಟಿತು. ಅದೇ ವರ್ಷ ಇಂಗ್ಲೆಂಡಿನಲ್ಲಿ ನಡೆದ ವಿಶ್ವಕಪ್‌ ಪಂದ್ಯಕ್ಕೆ ಜಾಹೀರಾತು ಸಂಸ್ಥೆಯೊಂದು ಕಳುಹಿಸಿಕೊಟ್ಟಿತು. ಪಂದ್ಯದ ಬಳಿಕ ಊರಿಗೆ ಬಂದ ಆಸ್ಪತ್ರೆಯ ಉದ್ಯೋಗಕ್ಕೆ ರಾಜೀನಾಮೆ ನೀಡಿ ಅವಕಾಶಗಳ ನಿರೀಕ್ಷೆಯಲ್ಲಿ ಮುಂಬಯಿಗೆ ಬಂದರು. ಆರಂಭದಲ್ಲಿ ಕಷ್ಟಪಟ್ಟರೂ ನಂತರ ಜಾಹೀರಾತು, ಚಲನಚಿತ್ರ, ಸೀರಿಯಲ್‌ಗ‌ಳಲ್ಲಿ ಅವಕಾಶ ಪಡೆದುಕೊಂಡರು.
“ಮುಂಬಯಿಯಲ್ಲಿ ವಿವಿಧ ಜಾಹೀರಾತು ಸಂಸ್ಥೆಗಳಿಗೆ ಸಚಿನ್‌ ತೆಂಡೂಲ್ಕರ್‌ ಅವರು ಶೂಟಿಂಗ್‌ ಮೊದಲು ನನ್ನನ್ನು ಡ್ನೂಪ್‌ ಆಗಿ ಬಳಸಿ ಶೂಟಿಂಗ್‌ ಮಾಡಿ ಅದರಲ್ಲಿ ಅಗತ್ಯ ಬದಲಾವಣೆಗಳೊಂದಿಗೆ ಬಳಿಕ ಅವರ ಶೂಟಿಂಗ್‌ ಮಾಡುತ್ತಿದ್ದರು. ಒಟ್ಟು 38 ಬಾರಿ ಈ ರೀತಿಯಾಗಿ ನಟಿಸಿದ್ದೇನೆ. ಎರಡು ಸಿನೇಮಾಗಳಲ್ಲಿ ನಟಿಸಿದ್ದೇನೆ. ಸೀರಿಯಲ್‌ಗ‌ಳಲ್ಲಿ ನಟಿಸಿದ್ದೇನೆ’ ಎಂದು ಅವರು ವಿವರಿಸುತ್ತಾರೆ.

ಇದನ್ನೂ ಓದಿ:ಪೊಲೀಸ್‌ ಹುದ್ದೆಗೆ ಕರಾವಳಿಯಿಂದ ಕಡಿಮೆ ಅರ್ಜಿ

ಸಚಿನ್‌ ಭಾವಚಿತ್ರ ತೆಗೆದರು..
“ಸಚಿನ್‌ ಅವರನ್ನು ನಾನು ಹೋಲುತ್ತಿರುವುದು ಪ್ರಚಾರಕ್ಕೆ ಬರುತ್ತಿರುವಂತೆ ಸಚಿನ್‌ ಅವರನ್ನು ಭೇಟಿ ಮಾಡುವ ಅವಕಾಶ ಲಭಿಸಿತು. ಸಚಿನ್‌ ಅವರು ನನ್ನ ಕೈಕುಲುಕಿ ಆತ್ಮೀಯವಾಗಿ ಬರಮಾಡಿಕೊಂಡರು. ನನ್ನ ಐದು ಭಾವಚಿತ್ರವನ್ನು ಕ್ಲಿಕ್ಕಿಸಿಕೊಂಡು ಇದನ್ನು ಅವರ ಮನೆಮಂದಿಗೆ ತೋರಿಸುವುದಾಗಿ ಹೇಳಿದರು. ಕ್ರಿಕೆಟ್‌ ಜಗತ್ತಿನಲ್ಲಿ ದೊರೆಯಂತೆ ಮೆರೆಯುತ್ತಿದ್ದ, ಕೋಟ್ಯಾಂತರ ಮಂದಿಯ ಕಣ್ಮಣಿಯಾಗಿದ್ದ ಸಚಿನ್‌ ತೆಂಡೂಲ್ಕರ್‌ ಅವರ ಭಾವಚಿತ್ರವನ್ನು ತೆಗೆಯಬೇಕೆಂದು ಹೋದ ನನ್ನ ಭಾವಚಿತ್ರವನ್ನು ಅವರೇ ತೆಗೆದ ಕ್ಷಣ ನನ್ನನ್ನು ರೋಮಾಂಚನಗೊಳಿಸಿತು’ ಎಂದು ಸಂಭ್ರಮಿಸುತ್ತಾರೆ ಬಲ್ವೀರ್ .

Advertisement
Advertisement

Udayavani is now on Telegram. Click here to join our channel and stay updated with the latest news.

Next