Advertisement

ಸಂಕಷ್ಟದಲ್ಲಿರುವ 4000 ಜನರಿಗೆ ಹಣಕಾಸಿನ ನೆರವು ನೀಡಿದ ಸಚಿನ್ ತೆಂಡೂಲ್ಕರ್

08:30 AM May 10, 2020 | keerthan |

ಮುಂಬೈ: ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಲಾಕ್ ಡೌನ್ ನಿಂದ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಬೃಹತ್ ಮುಂಬೈ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋವಿಡ್-19 ಲಾಕ್ ಡೌನ್ ನಿಂದ ಸಂಕಷ್ಟ ಅನುಭವಿಸುತ್ತಿರುವ ಮಕ್ಕಳು ಹಿರಿಯರಿಗೆ ಕ್ರಿಕೆಟ್ ದೇವರು ಸಹಾಯ ಮಾಡಿದ್ದಾರೆ.

Advertisement

ಸಚಿನ್ ತೆಂಡೂಲ್ಕರ್ ಅವರು ಮುಂಬೈನ ಹೈ5 ಫೌಂಡೇಶನ್ ಎಂಬ ಸೇವಾ ಸಂಸ್ಥೆಯೊಂದಕ್ಕೆ ಧನ ಸಹಾಯ ಮಾಡಿದ್ದಾರೆ . ಆದರೆ ಸಚಿನ್ ಎಷ್ಟು ಹಣ ನೀಡಿದ್ದಾರೆ ಎಂದು ತಿಳಿದಿಲ್ಲ. ಈ ಹಣದಿಂದ ಆ ಸಂಸ್ಥೆ ಸಂಕಷ್ಟಲ್ಲಿರುವವರಿಗೆ ಸಹಾಯ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಸ್ಥೆ, ಸಚಿನ್ ತೆಂಡೂಲ್ಕರ್ ಅವರಿಗೆ ಧನ್ಯವಾದಗಳು. ನೀವು ನೀಡಿದ ಸಹಾಯದಿಂದ ನಗರ ಪಾಲಿಕೆ ಶಾಲೆಯ ಮಕ್ಕಳು ಸೇರಿದಂತೆ 4000 ಕ್ಕೂ ಹೆಚ್ಚಿನ ಜನರಿಗೆ ಸಹಾಯವಾಗಿದೆ ಎಂದಿದ್ದಾರೆ.

ಇದಕ್ಕೆ ಉತ್ತರಿಸಿರುವ ಸಚಿನ್, ದಿನಗೂಲಿ ನೌಕರರ ಕುಟುಂಬಗಳಿಗೆ ಸಹಾಯ ಮಾಡುತ್ತಿರುವ ನಿಮ್ಮ ಆಶಯ ಮತ್ತು ಸಂಸ್ಥೆಗೆ ಒಳ್ಳೆಯದಾಗಲಿ ಎಂದಿದ್ದಾರೆ,

ಕಳೆದ ತಿಂಗಳು ಸಚಿನ್ ತೆಂಡೂಲ್ಕರ್ ಅಪ್ನಾಲಯಾ ಎಂಬ ಸಂಸ್ಥೆಯ ಮುಖಾಂತರ ಐದು ಸಾವಿರಕ್ಕೂ ಹೆಚ್ಚಿನ ಜನರಿಗೆ ಸಹಾಯ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next