Advertisement

ಮೊದಲ ಎಸೆತ ಎದುರಿಸಲು ಸಚಿನ್‌ ಹಿಂಜರಿಕೆ!

12:39 AM Jul 07, 2020 | Sriram |

ಹೊಸದಿಲ್ಲಿ: ಸಚಿನ್‌ ತೆಂಡುಲ್ಕರ್‌-ಸೌರವ್‌ ಗಂಗೂಲಿ ಭಾರತದ ಅಷ್ಟೇ ಅಲ್ಲ, ವಿಶ್ವ ಏಕದಿನ ಕ್ರಿಕೆಟಿನ ಯಶಸ್ವಿ ಆರಂಭಿಕ ಜೋಡಿ. ಇವರಿಬ್ಬರು ಜತೆಗೂಡಿ 176 ಸಲ ಇನ್ನಿಂಗ್ಸ್‌ ಆರಂಭಿಸಿದ್ದಾರೆ. 47.55ರ ಸರಾಸರಿಯಲ್ಲಿ 8,227 ರನ್‌ ಒಟ್ಟುಗೂಡಿಸಿದ್ದಾರೆ. 26 ಶತಕಗಳ ಜತೆಯಾಟ ಇದರಲ್ಲಿ ಸೇರಿದೆ.

Advertisement

ಆದರೆ, ಸಚಿನ್‌ ತೆಂಡುಲ್ಕರ್‌ ಯಾವತ್ತೂ ಪಂದ್ಯದ ಮೊದಲ ಎಸೆತ ವನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದರಂತೆ! ಮಾಯಾಂಕ್‌ ಅಗ ರ್ವಾಲ್‌ ನಡೆಸಿಕೊಟ್ಟ ಲೈವ್‌ ಶೋ ಒಂದರಲ್ಲಿ ಸೌರವ್‌ ಗಂಗೂಲಿ ಇದರ ಹಿಂದಿನ ಸ್ವಾರಸ್ಯವನ್ನು ಬಿಚ್ಚಿಟ್ಟಿದ್ದಾರೆ.

“ತೆಂಡುಲ್ಕರ್‌ ಯಾವತ್ತೂ ಏಕ ದಿನ ಪಂದ್ಯದ ಮೊದಲ ಎಸೆತ ಎದು ರಿಸಲು ಹಿಂಜರಿಯುತ್ತಿದ್ದರು. ಇದನ್ನು ಎದುರಿಸಲು ನನಗೇ ಸೂಚಿಸು ತ್ತಿದ್ದರು. ಅಪರೂಪಕ್ಕಾ ದರೂ ನೀವು ಮೊದಲ ಎಸೆತ ನಿಭಾಯಿಸಿ ಎಂದು ಅವರಲ್ಲಿ ಹೇಳುತ್ತಿದ್ದೆ…’ ಎಂದು ಗಂಗೂಲಿ ಇದರ ಹಿಂದಿನ ಸ್ವಾರಸ್ಯಕ್ಕೆ ಪೀಠಿಕೆ ಹಾಕಿದರು.

ಕಾರಣ… ಫಾರ್ಮ್!
“ಸಚಿನ್‌ ತೆಂಡುಲ್ಕರ್‌ ಮೊದಲ ಎಸೆತ ಎದುರಿಸದೇ ಇರಲು ಎರಡು ಕಾರಣಗಳಿದ್ದವು. ಎರಡೂ ಒಂದೇ ಕಾರಣ, ಅದು “ಫಾರ್ಮ್’ ಎನ್ನು ವುದೇ ಇಲ್ಲಿನ ಸ್ವಾರಸ್ಯ. ಸಚಿನ್‌ ಪ್ರಚಂಡ ಫಾರ್ಮ್ನಲ್ಲಿರುವಾಗ ನಾನ್‌ ಸ್ಟ್ರೈಕಿಂಗ್‌ ತುದಿಯಲ್ಲಿ ಇರಲು ಬಯಸುತ್ತಿದ್ದರು. ಈ ಫಾರ್ಮ್ ಹೀಗೆಯೇ ಮುಂದುವರಿಯಲಿ ಎಂಬುದು ಅವರ ಬಯಕೆ. ಹಾಗೆಯೇ ಫಾರ್ಮ್ ಕೈಕೊಟ್ಟ ಸಂದರ್ಭಗಳಲ್ಲೂ ಅವರು ನಾನ್‌ ಸ್ಟ್ರೈಕಿಂಗ್‌ ಎಂಡ್‌ನ‌ಲ್ಲೇ ಇರವುದಾಗಿ ಹೇಳುತ್ತಿದ್ದರು. ಇದರಿಂದ ತನ್ನ ಮೇಲಿನ ಒತ್ತಡ ನಿವಾರಣೆ ಆಗಲಿದೆ ಎಂಬುದು ಅವರ ನಂಬಿಕೆ…’ ಎಂದು ಗಂಗೂಲಿ ಹೇಳಿದರು.

“ಕೆಲವು ಸಲ ನಾನೇ ಅವರಿಗಿಂತ ಮುಂದೆ ಸಾಗಿ ನಾನ್‌ ಸ್ಟ್ರೈಕಿಂಗ್‌ ವಿಭಾಗದಲ್ಲಿ ನಿಂತದ್ದಿದೆ. ಇದು ಟಿವಿಯಲ್ಲಿ ಮೂಡಿಬರುವ ಕಾರಣ ಅವರಿಗೆ ಸ್ಟ್ರೈಕ್‌ ತೆಗೆದುಕೊಳ್ಳದೆ ಬೇರೆ ಮಾರ್ಗವೇ ಇರಲಿಲ್ಲ. ಆದರೆ ನಾನು ಹೀಗೆ ಮಾಡಿದ್ದು ಒಂದೆಡರು ಸಲ ಮಾತ್ರ’ ಎನ್ನುತ್ತ ದಾದಾ ನಕ್ಕರು!

Advertisement

 

Advertisement

Udayavani is now on Telegram. Click here to join our channel and stay updated with the latest news.

Next