Advertisement

ಕೋವಿಡ್-19: 50 ಲಕ್ಷ ರೂ ನೆರವು ಘೋಷಿಸಿದ ಸಚಿನ್ ತೆಂಡೂಲ್ಕರ್

09:39 AM Mar 28, 2020 | keerthan |

ಮುಂಬೈ: ಕೋವಿಡ್-19 ವೈರಸ್ ಕಾರಣದಿಂದ ದೇಶವೇ 21 ದಿನಗಳ ಲಾಕ್ ಡೌನ್ ನಲ್ಲಿದೆ. ಕೋಟ್ಯಾಂತರ ರೂ ನಷ್ಟವಾಗುತ್ತಿದೆ. ಸಾವಿರಾರು ಜನರು ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಇಂಥವರಿಗೆ ಸಹಾಯವಾಗಲು ಹಲವಷ್ಟು ಗಣ್ಯ ವ್ಯಕ್ತಿಗಳು ನೆರವು ನೀಡುತ್ತಿದ್ದಾರೆ. ಇವರ ಸಾಲಿಗೆ ಈಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರ್ಪಡೆಯಾಗಿದ್ದಾರೆ.

Advertisement

ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿ ಮತ್ತು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ನೆರವು ನೀಡಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟಿವ ಬಗ್ಗೆ ಸಂದೇಶಗಳನ್ನು ವಿಡಿಯೋ ಮೂಲಕ ಸಚಿನ್ ತೆಂಡೂಲ್ಕರ್ ಈಗ 50 ಲಕ್ಷ ನೆರವು ನೀಡಲಿದ್ದಾರೆಂದು ಹಲವು ಮಾಧ್ಯಮಗಳು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next