ನವ ದೆಹಲಿ : ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಟ್ವೀಟ್ ನಲ್ಲಿ ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕೆ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪ್ರತಿಕ್ರಯಿಸಿದ ಬೆನ್ನಲ್ಲೇ, ರಾಜ್ಯಸಭೆಯ ಮಾಜಿ ಸದಸ್ಯ ಮತ್ತು ಆರ್ ಜೆ ಡಿ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ್ ತಿವಾರಿ ಸಚಿನ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಓದಿ : ‘ಸಲಾರ್’ ರಿಮೇಕ್ ಅಥವಾ ಸ್ವಮೇಕ್: ಸ್ಪಷ್ಟನೆ ನೀಡಿದ ಪ್ರಶಾಂತ್ ನೀಲ್
ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಿವಾರಿ, ರೈತರ ಪ್ರತಿಭಟನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಪ್ರತಿಧ್ವನಿಸಿದ್ದಕ್ಕಾಗಿ ಸಚಿನ್ ಅವರನ್ನು ಕೆಣಕಿದ್ದಾರೆ. ತೆಂಡೂಲ್ಕರ್ ಪ್ರತಿಷ್ಠಿತ ಭಾರತ ರತ್ನ ಗೌರವಕ್ಕೆ ಅರ್ಹರಲ್ಲ . ಅವರ ಬದಲಾಗಿ ಹಾಕಿ ದಂತಕಥೆ ಧ್ಯಾನ್ ಚಂದ್ ಅವರಿಗೆ ಭಾರತ ರತ್ನವನ್ನು ಕೊಡಬೇಕಿತ್ತು ಎಂದು ತಿವಾರಿ ಹೇಳಿದ್ದಾರೆ.
ರೈತರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಟ್ವಿಟ್ಟರ್ ನಲ್ಲಿ ಏನು ಬರೆಯಲಾಗುತ್ತಿದೆ ಎಂಬುದರ ಬಗ್ಗೆ ಅವರಿಗೆ ತಿಳಿದಿಲ್ಲ. ಇಬ್ಬರು ವಿದೇಶಿಯರು ರೈತರ ಪ್ರತಿಭಟನೆಯನ್ನು ಬೆಂಬಲಿಸಿದಾಗ, ಸಚಿನ್ ಅದರ ವಿರುದ್ಧ ಮಾತಾಡಿದರು. ಸಚಿನ್ ಹಲವಾರು ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಭಾರತ್ ರತ್ನ ಪಡೆಯಲು ಅರ್ಹರಲ್ಲ. ಧ್ಯಾನ್ ಚಂದ್ ರಂತಹ ಅನೇಕ ಅರ್ಹರು ಅದನ್ನು ಪಡೆಯಬೇಕಾಗಿತ್ತು ”ಎಂದು ತಿವಾರಿ ಪ್ರತಿಕ್ರಿಯಿಸಿದ್ದಾರೆ.
ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ದೇಶದ ಆಂತರಿಕ ವಿಷಯಗಳಲ್ಲಿ ಭಾಗವಹಿಸದಂತೆ ವಿದೇಶಿ ನಾಗರಿಕರಿಗೆ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ಹೇಳಿದ್ದರು.
ಏತನ್ಮಧ್ಯೆ, ತಿವಾರಿ ಅವರ ವಿವಾದಾತ್ಮಕ ಹೇಳಿಕೆ ಬಿಜೆಪಿ ಮತ್ತು ಜೆಡಿಯು ಬೆಂಬಲಿಗರಿಂದ ತೀವ್ರ ಚರ್ಚೆಗೆ ಒಳಗಾಗುತ್ತಿದೆ.
ಓದಿ : ಪತಿ ಬದುಕಿದ್ದಾಗಲೇ ಡೆತ್ ಸರ್ಟಿಫಿಕೆಟ್ ಮಾಡಿಸಿದ ಪತ್ನಿ! ಕಾರಣವೇನು ಗೊತ್ತಾ?