Advertisement

ಲೆಜೆಂಡ್ಸ್‌ ಜತೆ ಸಚಿನ್‌ ಶತಕ ಸಂಭ್ರಮ

12:24 AM Mar 17, 2021 | Team Udayavani |

ರಾಯ್‌ಪುರ: ಭಾರತದ ಲೆಜೆಂಡ್ರಿ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡುಲ್ಕರ್‌ ಅವರ 100ನೇ ಅಂತಾರಾಷ್ಟ್ರೀಯ ಶತಕಕ್ಕೆ ಮಂಗಳವಾರ 9 ವರ್ಷ ತುಂಬಿದ ಸಂಭ್ರಮ. ಈ ಖುಷಿಯನ್ನು ಅವರು “ಇಂಡಿಯಾ ಲೆಜೆಂಡ್ಸ್‌’ ತಂಡದ ಸದಸ್ಯರೊಂದಿಗೆ ಸೇರಿಕೊಂಡು ಆಚರಿಸಿದರು.

Advertisement

ಸಚಿನ್‌ ತೆಂಡುಲ್ಕರ್‌ ಕೇಕ್‌ ಕತ್ತರಿಸುತ್ತಿದ್ದ ವೀಡಿಯೋ ಒಂದನ್ನು ಮಾಜಿ ಕ್ರಿಕೆಟಿಗ ಪ್ರಗ್ಯಾನ್‌ ಓಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿನ್‌ ಅವರೊಂದಿಗೆ ಯುವರಾಜ್‌ ಸಿಂಗ್‌ ಮೊದಲಾದ ಮಾಜಿ ಆಟಗಾರರಿದ್ದರು.

ಬಾಂಗ್ಲಾದೇಶ ವಿರುದ್ಧ ಮೀರ್‌ಪುರ್‌ನಲ್ಲಿ ನಡೆದ 2012ರ ಏಶ್ಯ ಕಪ್‌ ಪಂದ್ಯದಲ್ಲಿ ತೆಂಡುಲ್ಕರ್‌ 114 ರನ್‌ ಬಾರಿಸುವ ಮೂಲಕ 100ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದ್ದರು. ಇದು ಅವರ 49ನೇ ಏಕದಿನ ಸೆಂಚುರಿ ಆಗಿತ್ತು. ಉಳಿದಂತೆ ಟೆಸ್ಟ್‌ನಲ್ಲಿ 51 ಶತಕ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next