Advertisement
ಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಾಯತ್ರಿ ಸೇವಾ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ವೈಕುಂಠಪುರದಲ್ಲಿ ಆಯೋಜಿಸಿರುವ 17 ನೇ ವರ್ಷದ ಮಲೆನಾಡು ಉತ್ಸವವನ್ನು ವರಲಿನಲ್ಲಿ ಭತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಶತಾಯುಷಿ ನಾಟಿ ವೈದ್ಯ ಸಿಡ್ಲುಮನೆ ಸುಬ್ಬಣ್ಣ ಹೆಗ್ಗಡೆ ಮಾತನಾಡಿ, ಊರಿನ ಹಬ್ಬವಾಗಿ ಎಲ್ಲರೂ ಒಂದಾಗಿ ಬಾಳಲು ಇಂತಹ ಉತ್ಸವಗಳು ಮಾದರಿಯಾಗಿದ್ದು, ಸಂತಸ ತಂದಿದೆ ಎಂದರು. ಸಮಾರಂಭದಲ್ಲಿ ತಾಪಂ ಉಪಾಧ್ಯಕ್ಷೆ ಚಂದ್ರಾವತಿ, ಕೂತಗೋಡು ಗ್ರಾ.ಪಂ ಅಧ್ಯಕ್ಷೆ ನಯನ, ಸದಸ್ಯೆ ಚಂದ್ರಾವತಿ ಉಪಸ್ಥಿತರಿದ್ದರು.
ನಾಟಕ ಪ್ರದರ್ಶನ: ಮಲೆನಾಡು ಉತ್ಸವದ ಮೊದಲನೆ ದಿನದ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೂರು ಮುತ್ತು ಕಲಾ ತಂಡದವರಿಂದ ಮದುಮಗ ಎಂಬ ಹಾಸ್ಯ ನಾಟಕ ಗ್ರಾಮೀಣ ಪ್ರದೇಶದ ಜನರನ್ನು ನಗೆಗಡಲಲ್ಲಿ ತೇಲಿಸಿತು.
ಮಲೆನಾಡಿನ ಸುಪ್ರಸಿದ್ಧ ಸುಗಮ ಸಂಗೀತ ಕಲಾವಿದ ಅಡಗಂದೂರು ಕೃಷ್ಣಮೂತಿ ಇವರ ಸಂಯೋಜಿತ ಗೀತೆಗಳನ್ನು ಮಂಜುನಾಥ ಮತ್ತು ಸುಂಕದಮಕ್ಕಿ ಗೋಪಾಲಕೃಷ್ಣ ಪ್ರಸ್ತುತಪಡಿಸಿದರು.
ಹಿಮ್ಮೇಳದಲ್ಲಿ ಎಂ.ಕೆ ಶ್ರೀನಿ ಕೊಪ್ಪ, ರಮೆಶ್ ಉಪಾಧ್ಯಾಯ, ಗಾಡಿಕೆರೆ ಸತ್ಯನಾರಾಯಣ ಸಹಕರಿಸಿದರು. ಮಲೆನಾಡ ಉತ್ಸವವು ಪ್ರಗತಿಪರ ಕೃಷಿಕರಾದ ಪಶ್ಚಿಮವಾಹಿನಿ ರಾಮಯ್ಯ, ಗಣೇಶ್ ರಾವ್ ಮತ್ತು ವೇಬ್ರಂಶ್ರೀ ವೆಂಕಟರಮಣ ಭಟ್ ಅವರ ಪ್ರವೇಶದ್ವಾರಗಳನ್ನು ಒಳಗೊಂಡಿದೆ. ಮಲೆನಾಡ ಶೈಲಿಯ ಅಲಂಕಾರವನ್ನು ವೇದಿಕೆ ಮತ್ತು ಹೊರಾಂಗಣಕ್ಕೆ ಮಾಡಲಾಗಿತ್ತು.