Advertisement
ಸಕಲೇಶಪುರ: ಪಟ್ಟಣದ ಜನರ ಕನಸಿನ ಕೂಸಾದ ದೊಡ್ಡಕೆರೆ ನಿತ್ಯ ನೂರಾರು ಜನರನ್ನು ತನ್ನತ್ತ ಸೆಳೆಯುತ್ತಿದೆ. ಆದರೆ ಈ ಸುಂದರ ಕೆರೆ ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.
Related Articles
Advertisement
ಕೆರೆಯ ಸುತ್ತ ಗಿಡಗೆಂಟೆ: ಕೆರೆ ಆವರಣದ ಸುತ್ತಲು ಗಿಡಗುಂಟೆಗಳು ಕಾಡಿನಂತೆ ಬೆಳೆದಿದ್ದು,ಇದನ್ನು ತೆಗೆ ಯಲು ಯಾರು ಮುಂದಾಗಿಲ್ಲ. ಈ ಹಿಂದೆ ರೋಟರಿ ಸಂಸ್ಥೆಯವರು ಒಮ್ಮೆ ಇಲ್ಲಿರುವ ಗಿಡ ಗುಂಟೆಗಳನ್ನು ತೆಗೆಸಿದ್ದು ನಂತರ ಇದರ ಉಸ್ತುವಾರಿಯನ್ನು ಯಾರೂ ವಹಿಸಿಕೊಂಡಿಲ್ಲ. ಇಲ್ಲಿರುವ ಹೈಮಾಸ್ಟ್ ದೀಪ ಹಾಳಾಗಿರುವ ಕಾರಣ ಕತ್ತಲಾದ ನಂತರ ವಾಕಿಂಗ್ ಮಾಡುವುದು ಅಸಾಧ್ಯವಾಗಿದೆ.
ಕೂರಲು ಬೆಂಚ್‌ಗಳಿಲ್ಲ: ಕೆರೆಯ ವಾಕಿಂಗ್ ಪಾತ್ ಸುತ್ತಲೂ ಬೆಂಚ್‌ಗಳನ್ನು ಅಳವಡಿಸಬೇಕಾಗಿದ್ದು ಬೆಂಚ್‌ಗಳು ಇಲ್ಲದೆ ವಿಶ್ರಾಂತಿ ಪಡೆಯಲು ಕೆರೆ ಸಮೀಪದ ಕಟ್ಟೆಯಲ್ಲಿ ಕೂರಬೇಕಾಗಿದೆ.
ಮಕ್ಕಳ ಆಟಿಕೆಗಳಿಲ್ಲ: ಮಕ್ಕಳ ಮನೋರಂಜನೆಗಾಗಿ ಮಿನಿ ಪಾರ್ಕ್ ಮಾಡಲು ಜಾಗ ಬಿಡಲಾಗಿದೆ. ಆದರೆ ಈ ಜಾಗದಲ್ಲಿ ಮಕ್ಕಳ ಆಟದ ವಸ್ತುಗಳನ್ನು ಸಹ ಹಾಕಿರುವುದಿಲ್ಲ. ಕೂಡಲೇ ಇಲ್ಲಿ ಮಕ್ಕಳಿಗಾಗಿ ಮಿನಿ ಪಾರ್ಕ್ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.
ಬೋಟಿಂಗ್ ವ್ಯವಸ್ಥೆ ಮಾಡಿ: ಹೊರ ಊರು ಗಳಿಂದಲೂ ಸಹ ಇಲ್ಲಿನ ಜನ ಇಲ್ಲಿಗೆ ಬರುತ್ತಿದ್ದು ಬೋಟಿಂಗ್ ವ್ಯವಸ್ಥೆ ಮಾಡಿದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಲ್ಲಿ ಅನುಮಾನವಿಲ್ಲ. ಬೋಟಿಂಗ್ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಲ್ಲಿ ತಾಲೂಕಿನ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹ ಸಹಾಯವಾಗುವುದು. ಈ ಹಿಂದೆ ನೀರಾವರಿ ಇಲಾಖೆ ವಶದಲ್ಲಿದ್ದ ಕೆರೆಯನ್ನು ಪುರಸಭೆಯ ಸುರ್ಪದಿಗೆ ನೀಡಲಾಗಿದೆ. ಕೆರೆ ಇನ್ನಾದರೂ ಅಭಿವೃದ್ಧಿ ಯಾಗುವುದೇ ಎಂದು ಕಾದು ನೋಡಬೇಕಾಗಿದೆ.