ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಕೆಣಕಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ” ಕಹಾ ಹೈ ಮೋದಿ ” ಎಂದು ವ್ಯಂಗ್ಯವಾಡಿದ್ದಾರೆ.
ಎಸ್ ಸಿಪಿ, ಟಿಎಸ್ ಪಿ ಕಾಯ್ದೆ ಕಡ್ಡಾಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,ಬಿಜೆಪಿ ಸರ್ಕಾರ ಎಸ್ ಸಿಪಿ ಟಿಎಸ್ ಪಿ ಕಾಯ್ದೆ ಪರ ಇದೆಯಾ ? ಎಂದು ಪ್ರಶ್ನಿಸಿದರು.
ಕಹಾ ಹೈ ಮೋದಿ ? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಮಾತನಾಡುತ್ತಾರೆ. ಆದರೆ ಅದು ಸಬ್ ಕಾ ಸಾತ್ ಸಬ್ ಕಾ ವಿನಾಶ್ ಎಂದು ಆರೋಪಿಸಿದರು.
ನಮ್ಮ ಸಮಾಜ ಅಸಮಾನತೆ, ಆರ್ಥಿಕ ಅಸಮಾನತೆ ಇಂದ ಕೂಡಿದೆ.ಆರ್ಥಿಕ ಸ್ವಾಲಂಭನೆ ಇಲ್ಲದೇ ಸಮಾನತೆ ಬರೋದಿಲ್ಲ.
850 ವರ್ಷಗಳ ಹಿಂದೆ ಬಸವಣ್ಣ ಜಾತಿ ವ್ಯವಸ್ಥೆ ಬಗ್ಗೆ ವಚನ ಹೇಳಿದ್ರು.ಇಂದು ಬಸವಾದಿ ಶರಣರು ವಚನ ಹೇಳಿದ್ದೆ ಹೇಳಿದ್ದು, ಜಾತಿ ಹೋಗಿದ್ಯಾ ?ವಚನ ಹೇಳಿದ ಡ್ ಗೆ ಕರೆದುಬಳಿಕ ಸೈ ನೀ ಯಾವ ಜಾತಿ ಅಂತ ಕೇಳ್ತಾರೆ ?ಶಿಕ್ಷಣ ಪಡೆದವರೇ ಹೆಚ್ಚು ಜಾತಿ ಬೇದ ಮಾಡ್ತಾರೆ ಎಂದು ಹೇಳಿದರು.
ನಮ್ಮಲ್ಲಿ ಗುಲಾಮಗಿರಿ ಆಳವಾಗಿ ಬೇರೂರಿದೆ.ಮೇಲ್ಜಾತಿ ಬಡವನ ಕಂಡರೆ ಬುದ್ದಿ ಎನ್ನುತ್ತೇವೆ.ಅದೇ ಕೆಳಜಾತಿಯ ಶ್ರೀಮಂತ ವಿದ್ಯಾವಂತ ಸಿಕ್ಕರೆ ಏನ್ಲಾ ಚೆನ್ನಾಗಿ ಇದ್ಯಾ ಅಂತ ಕೇಳ್ತಾರೆ ಎಂದರು.