ಹುಬ್ಬಳ್ಳಿ : ಇತ್ತೀಚೆಗಷ್ಟೇ ಕೊರೊನಾ ಗೆದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿರುವ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರು, ಗುರುವಾರ(ಮೇ. 13) ತಮ್ಮ ಜಮೀನಿನಲ್ಲಿ ಟ್ರ್ಯಾಕ್ಟರ್ ನಡೆಸುವ ಮೂಲಕ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಸಭಾಪತಿ ಹೊರಟ್ಟಿ ಅವರು, ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ : ಮೇ.14 ರಂದು ದೇಶದ 9.5 ಕೋಟಿ ಫಲಾನುಭವಿಗಳಿಗೆ ಪಿಎಂ ಕಿಸಾನ್ ಯೋಜನೆಯ 8ನೇ ಕಂತು ವಿತರಣೆ
ಸುಮಾರು ಒಂದು ವಾ ರಕ್ಕೂ ಹೆಚ್ಚುಕಾಲ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಹೊರಟ್ಟಿ, ಮನೆಯಲ್ಲಿ ಕೆಲ ದಿನ ವಿಶ್ರಾಂತಿ ಪಡೆದು ಇದೀಗ ಎಂದಿನಂತೆ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ. ಯುವಕರೇ ನಾಚುವಂತೆ ತಮ್ಮ ಹೊಲದಲ್ಲಿ ಟ್ರ್ಯಾಕ್ಟರ್ ನಡೆಸುವ ಮೂಲಕ ಗಮನ ಸೆಳೆದು ಮಾದರಿ ಆಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹೊರಟ್ಟಿ, ಕೋವಿಡ್ ಸೋಂಕಿಗೆ ಹೆದರುವ ಬದಲು ಅದನ್ನೇ ಎದುರಿಸುವ ರೀತಿಯಲ್ಲಿ ಧೈರ್ಯವನ್ನು ಹೊಂದಿರಬೇಕು. ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಐಐಎಸ್ ಸಿಯಿಂದ ಕಡಿಮೆ ವೆಚ್ಚದ, ದಕ್ಷತೆಯ ಆಕ್ಸಿಜನ್ ಕಾನ್ಸಂಟ್ರೇಟರ್: ಸುಧಾಕರ್ ಜೊತೆ ಚರ್ಚೆ