ಮುಂಬಯಿ: ಕೇರಳದಲ್ಲಿ 2008 ರಲ್ಲಿ ಸ್ಥಾಪನೆಯಾದ ಶಬರಿಮಲೆ ಶ್ರೀ ಅಯ್ಯಪ್ಪ ಸೇವಾ ಸಮಾಜಂ ಇದರ ಮಹಾರಾಷ್ಟ್ರ ಘಟಕದ ವಾರ್ಷಿಕ ಮಹಾಸಭೆಯು ನ. 19ರಂದು ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಜರಗಿತು.
ಈ ಸಂಸ್ಥೆಯು ಕೇವಲ ಅನ್ನದಾನ ಮಾತ್ರವಲ್ಲದೆ ದೇಶದ ಹೆಚ್ಚಿನೆಡೆ ಇದರ ಸುಮಾರು 150 ಅಯ್ಯಪ್ಪ ಸೇವಾ ಕೇಂದ್ರದ ಮೂಲಕ ಶಬರಿಮಲೆಗೆ ಪ್ರಯಾಣಿಸುವ ಅಯ್ಯಪ್ಪ ಭಕ್ತರಿಗೆ ಅಗತ್ಯವಿರುವ ಇತರ ಸೇವಾ ಕಾರ್ಯಗಳಲ್ಲಿ ನಿರತವಾಗಿದೆ. ತುಮಕೂರಿನ ಕನ್ನಡಿಗ ಟಿ. ಬಿ. ಶೇಖರ ಇವರು ಇದರ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿದ್ದು, ಎನ್. ರಾಜನ್ ಅವರು ಇದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದರ ಕರ್ನಾಟಕ ರಾಜ್ಯದ ಗೌರವ ಅಧ್ಯಕ್ಷರಾಗಿ ಚಿತ್ರನಟ ಶಿವರಾಂ, ಅಧ್ಯಕ್ಷರಾಗಿ ಶಿವಮೊಗ್ಗದ ಹಿರಿಯ ಗುರುಸ್ವಾಮಿ ರೋಜ ಶನ್ಮುಗಮ…, ಮಹಾರಾಷ್ಟ್ರದ ಗೌರವ ಅಧ್ಯಕ್ಷರಾಗಿ ಖ್ಯಾತ ಚಿತ್ರನಟ ವಿವೇಕ್ ಒಬೆರೊಯ…, ಅಧ್ಯಕ್ಷರಾಗಿ ಆರ್. ಮುರುಗನ್, ಮುಂಬಯಿ ಯುನಿಟ್ ಅಧ್ಯಕ್ಷರಾಗಿ ಪ್ರಕಾಶ್ ಪೈ, ಗೌರವ ಅಧ್ಯಕ್ಷರಾಗಿ ಮುಂಬಯಿಯ ಮಾಜಿ ಮುನ್ಸಿಪಾಲ್ ಕಮಿಷನರ್ ಕೆ. ನಳಿನಾಕ್ಷನ್ ಐಎಎಸ್ ಅವರು ಆಯ್ಕೆಯಾಗಿದ್ದಾರೆ.
ಗುರುಸ್ವಾಮಿಗಳಾದ ಬಿ. ತಿರುಕೈವೇಲು ಮತ್ತು ಇನಾಮುತ್ತು ಇವರಿಂದ ಅಯ್ಯಪ್ಪ ಪೂಜೆಯೊಂದಿಗೆ ಸಭೆಯು ಪ್ರಾರಂಭಗೊಂಡಿತು. ರಾಷ್ಟ್ರೀಯ ಉಪಾಧ್ಯಕ್ಷರಾದ ಸುಮತಿ ವೇಣುಗೋಪಾಲ್, ಅನದಾನಂತ ಸ್ವಾಮಿ ಮತ್ತು ರಮಾನಂದ ಸ್ವಾಮೀಜಿ ಅವರು ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು.
ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಕನ್ನಡಿಗ ಟಿ. ಬಿ. ಭಾಸ್ಕರ್ ಈ ಸಂಧರ್ಭ ಮಾತನಾಡಿದರು. ರಾಷ್ಟ್ರೀಯ ಕಾರ್ಯದರ್ಶಿ ಎನ್. ರಾಜನ್ ಅವರು ಸಂಸ್ಥೆಯ ಕಾರ್ಯಕ್ರಮಗಳ ವಿವರ ನೀಡಿದರು. ವಿಪಿನ್ ಕುಮಾರ್ ಸಂಘಟನೆಯ ಮುಂದಿನ ಕಾರ್ಯಕ್ರಮಗಳ ವಿವರಗಳನ್ನು ಸಭೆಗೆ ವಿವರಿಸಿದರು. ರಾಜ್ಯದ ಉಪಾಧ್ಯಕ್ಷ ಎಸ್. ವರಗುನ ಪಾಂಡಿಯನ್ ಮಾತನಾಡಿದರು.
ಕರಾಟೆ ಆರ್. ಮುರುಗನ್ ಅಧ್ಯಕ್ಷೀಯ ಭಾಷಣಗೈದರು. ಮುಂಬಯಿ ಯುನಿಟ್ ಅಧ್ಯಕ್ಷ ಪ್ರಕಾಶ್ ಪೈ. ವಂದಿಸಿದರು. ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರಕಾಶ್ ಪೈ (9324300002), ಸುರೇಶ್ ಬಾಬು (9594077528), ವರಗುಣ ಪಾಂಡಿಯನ್ (9892786704, 9757282669) ಇವರನ್ನು ಸಂಪರ್ಕಿಸಬಹುದು ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.