Advertisement
ವಿವಿಧ ದೇವಸ್ಥಾನಗಳಲ್ಲಿ ಸ್ವಾಗತದ ಬಳಿಕ ಶೋಭಾಯಾತ್ರೆ ಡಿ.25ರಂದು ಮಧ್ಯಾಹ್ನ 1.30ಕ್ಕೆ ಪಂಪಾಕ್ಕೆ ತಲುಪಲಿದೆ. ಬಳಿಕ ಅಲ್ಲಿನ ಗಣಪತಿ ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ಇರಿಸಲಾಗುವುದು. ಅಪರಾಹ್ನ 3 ಗಂಟೆಗೆ ತಂಗಅಂಗಿಯನ್ನು ಪ್ರತ್ಯೇಕ ಪೆಟ್ಟಿಗೆಯಲ್ಲಿರಿಸಿ ಗುರುಸ್ವಾಮಿಗಳು ಹೊತ್ತುಕೊಂಡು ಸನ್ನಿಧಾನಕ್ಕೆ ತೆರಳುವರು. ಸಂಜೆ 5.30ಕ್ಕೆ ಶರಂಕುತ್ತಿಗೆ ತಲುಪಲಿದೆ. ಅಲ್ಲಿಂದ ದೇವಸ್ವಂ ಮಂಡಳಿ ಅಧಿಕಾರಿಗಳು ಪಡೆದುಕೊಂಡು ಧ್ವಜಸ್ತಂಭದ ವರೆಗೆ ಕೊಂಡೊಯ್ಯುವರು. ಅಲ್ಲಿಂದ ತಂತ್ರಿವರ್ಯರು, ಅರ್ಚಕರು ಸನ್ನಿಧಾನಕ್ಕೆ ಕೊಂಡೊಯ್ದು 6.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ತೊಡಿಸಿ ಮಹಾ ದೀಪಾರಾಧನೆ ನಡೆಸುವರು. ಡಿ.26ರಂದು ಮಧ್ಯಾಹ್ನ ಮಂಡಲ ಪೂಜೆ ನಡೆಯಲಿದೆ. ಮಂಡಲ ಕಾಲದ ತೀರ್ಥಾಟನೆ ಮುಗಿದು ಅಂದು ರಾತ್ರಿ 11ಕ್ಕೆ ಬಾಗಿಲು ಮುಚ್ಚಲಾಗುವುದು. ಬಳಿಕ ಮಕರ ಜ್ಯೋತಿ ಉತ್ಸವಕ್ಕಾಗಿ ಡಿ.30ರಂದು ಸಂಜೆ 5ಕ್ಕೆ ಬಾಗಿಲು ತೆರೆಯಲಾಗುವುದು. ಮಕರ ಜ್ಯೋತಿ ಉತ್ಸವ ಜನವರಿ 14 ರಂದು ನಡೆಯಲಿದೆ.
Advertisement
Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ
12:15 AM Dec 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.