Advertisement
5 ದಿನಗಳ ಪೂಜೆಯ ಬಳಿಕ ಸೋಮವಾರ ರಾತ್ರಿ 10 ಗಂಟೆಗೆ ದೇಗುಲ ಬಾಗಿಲು ಹಾಕಿದೆ. ನವೆಂಬರ್ 14ರಂದು ಮತ್ತೆ ಬಾಗಿಲು ತೆರೆಯಲಾಗುತ್ತದೆ. ಬೆಳಗ್ಗೆ ನಡೆದಿದ್ದ ಬೆಳವಣಿಗೆಯಲ್ಲಿ ಪಂಪಾ ತೀರಕ್ಕೆ ತೆರಳುವ ವೆಟ್ಟುಪ್ಪಾರ ಎಂಬಲ್ಲಿ ಅಯ್ಯಪ್ಪ ದೇಗುಲಕ್ಕೆ ತೆರಳಲು ಉದ್ದೇಶಿಸಿದ್ದ ಕೇರಳದ ಮಹಿಳೆಯನ್ನು ಭಕ್ತರು ತಡೆದಿದ್ದಾರೆ. ಮತ್ತೂಂದು ಬೆಳವಣಿಗೆಯಲ್ಲಿ ಕೊಟ್ಟಾಯಂನ ದಲಿತ ಹೋರಾಟಗಾರ್ತಿ ಬಿಂದು ಎಂಬುವರು ಸುಪ್ರೀಂಕೋರ್ಟ್ ಆದೇಶದ ಪ್ರತಿ ಜತೆಗೆ ದೇಗುಲ ಪ್ರವೇಶಕ್ಕೆ ತೆರಳುತ್ತಿದ್ದೇನೆ. ರಕ್ಷಣೆ ನೀಡಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿ ದ್ದರು. ಅವರು ಬಸ್‌ನಲ್ಲಿ ಪ್ರಯಾಣ ಆರಂಭಿಸಬೇಕು ಎನ್ನುವಷ್ಟರಲ್ಲಿ ಬಿಜೆಪಿ ಕಾರ್ಯಕರ್ತರು ತಡೆದರು. ಬಳಿಕ ಪೊಲೀಸ್ ರಕ್ಷಣೆಯಲ್ಲಿ ಅವರನ್ನು ಮುಂಡಕಾಯಂ ಠಾಣೆಗೆ ಕರೆದೊಯ್ಯ ಲಾಯಿತು. ಅಲ್ಲಿಯೂ ಬಿಜೆಪಿ ಕಾರ್ಯಕರ್ತರು ಮತ್ತು ಭಕ್ತರು ಪ್ರತಿಭಟನೆ ನಡೆಸಿದರು. ಕೊಟ್ಟಾಯಂನಲ್ಲಿರುವ ಬಿಂದು ಅವರ ಮನೆ ಎದುರೂ ನೂರಾರು ಮಂದಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿಗೆ ತೆರಳಿದ ಪೊಲೀಸರು ಬಂದೋಬಸ್ತ್ ಮಾಡಿದರು. ಅದಕ್ಕೆ ಪೂರಕವಾಗಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು. ಭಾನುವಾರ ಒಂದೇ ದಿನ ಆರು ಮಂದಿ ಮಹಿಳೆಯರು ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಸೆ.28ರಂದು ಎಲ್ಲಾ ವಯೋಮಿತಿಯ ಮಹಿಳೆಯರು ದೇಗುಲ ಪ್ರವೇಶ ಮಾಡ ಬಹುದು ಎಂದು ತೀರ್ಪು ನೀಡಿದ ಬಳಿಕ ಅ.17ರಂದು ದೇಗುಲ ಬಾಗಿಲು ತೆರೆದಿತ್ತು.
Related Articles
Advertisement
ಇಂದು ತೀರ್ಮಾನ: ಸೆ.28ರಂದು ದೇಗುಲ ಪ್ರವೇಶಕ್ಕೆ ಸಂಬಂಧಿಸಿ ನೀಡಲಾಗಿ ರುವ ತೀರ್ಪಿನ ಮರು ಪರಿಶೀಲನೆ ಕೋರಿ ಸಲ್ಲಿಸಲಾಗಿರುವ 19 ಅರ್ಜಿಗಳ ಬಗ್ಗೆ ಮಂಗಳ ವಾರ ಪರಿಶೀಲನೆ ನಡೆಸಿ ತೀರ್ಮಾನಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ “19 ಮೇಲ್ಮನವಿ ಅರ್ಜಿಗಳಿರುವುದು ನಮ್ಮ ಗಮನಕ್ಕೆ ಬಂದಿದೆ. ಅವುಗಳ ಬಗ್ಗೆ ಮಂಗಳವಾರ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದೆ.
ಎರ್ನಾಕುಳಂನಲ್ಲಿರುವ ಬೋಟ್‌ಜೆಟ್ಟಿ ಶಾಖೆಗೆ ವರ್ಗಾವಣೆ ಬೇಕೆಂದು ಐದು ವರ್ಷಗಳ ಹಿಂದೆಯೇ ಪ್ರಯತ್ನ ಮಾಡಿದ್ದೆ. ಇದೀಗ ಸ್ವಾಮಿ ಅಯ್ಯಪ್ಪನ ದಯೆಯಿಂದ ಅದು ಆಗಿದೆ.ರೆಹಾನಾ ಫಾತಿಮಾ, ಬಿಎಸ್‌ಎನ್‌ಎಲ್ ಉದ್ಯೋಗಿ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮಂಗಳವಾರ ತೀರ್ಮಾನಿಸಲಾಗುತ್ತದೆ.
ಎ.ಪದ್ಮಕುಮಾರ್, ಟಿಡಿಬಿ ಅಧ್ಯಕ್ಷ ಒಂದೆಡೆ ದೊಡ್ಡ ಭೂತವಿದೆ, ಮತ್ತೂಂದೆಡೆ ಸಮುದ್ರವಿದೆ. ಇಂಥ ಸ್ಥಿತಿಯಲ್ಲಿ ಕೇರಳ ಸರಕಾರ ಇದೆ. ಸುಪ್ರೀಂಕೋರ್ಟ್ ಆದೇಶ ಪಾಲನೆಗೆ ಮುಂದಾಗುತ್ತಿದ್ದರೂ, ಬಿಜೆಪಿ ತಂಟೆ ಮಾಡಿ ಪರಿಸ್ಥಿತಿ ಹದಗೆಡಿಸಲು ಮುಂದಾಗುತ್ತಿದೆ. ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಅವರು ಈ ಕೆಲಸ ಮಾಡುತ್ತಿದ್ದಾರೆ.
ಕಡಕಂಪಳ್ಳಿ ಸುರೇಂದ್ರನ್ ಕೇರಳ ಮುಜರಾಯಿ ಸಚಿವ