Advertisement
ಕೇರಳ, ಕರ್ನಾಟಕ,ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ಆಲಯಕ್ಕೆ ಭೇಟಿ ನೀಡುತ್ತಾರೆ. ಮಕರ ಸಂಕ್ರಾಂತಿಯ ಮಕರ ಜ್ಯೋತಿ ಸಮಯದಲ್ಲಂತೂ ಭಕ್ತರ ದಂಡೇ ಹರಿದು ಬರಲಿದೆ.
Related Articles
Advertisement
*ಬೆಳಿಗ್ಗೆ ಬೇಗ ಎದ್ದು ತಣ್ಣೀರಲ್ಲಿ ಸ್ನಾನ ಮಾಡಬೇಕು. ನಂತರ ಮಡಿ ಬಟ್ಟೆಯನ್ನುಟ್ಚು, ಮೈಗೆಲ್ಲಾ ವಿಭೂತಿ ಬಳಿದು ದೇವರರನ್ನು ಪೂಜಿಸಬೇಕು. ಇಷ್ಟೆಲ್ಲಾ ಸೂರ್ಯೋದಯಕ್ಕೆ ಮೊದಲು ಮುಗಿಯಬೇಕು.
*ಈ ಸಮಯದಲ್ಲಿ ಸಸ್ಯಾಹಾರವನ್ನಷ್ಟೇ ಸೇವಿಸಬೇಕು. ಮಾಂಸ, ಮದ್ಯ ಇತರ ದುಷ್ಚಟಗಳು ನಿಷಿದ್ದ. ಒಂದು ಹೊತ್ತು ಮಾತ್ರ ಊಟ ಮಾಡಿ ಉಳಿದ ಸಮಯ ಉಪವಾಸ ಆಚರಿಸಬೇಕು.
*ಕಪ್ಪು ಅಥವಾ ನೀಲಿ ವಸ್ತ್ರ ತೊಡಬೇಕು. ಕಾಲಿಗೆ ಚಪ್ಪಲಿ ತೊಡುವಂತಿಲ್ಲ. ಹಗಲು ಸಮಯದಲ್ಲಿ ನಿದ್ದೆ ಮಾಡುವಂತಿಲ್ಲ. ಮಾಡಿದರೆ ಸ್ನಾನ ಮಾಡದೇ ಏನನ್ನೂ ಸೇವಿಸುವಂತಿಲ್ಲ.
*ಈ ಸಮಯದಲ್ಲಿ ಯಾವುದೇ ಪ್ರಲೋಭೆಗೆ ಒಳಗಾಗುವಂತಿಲ್ಲ. ಮನಸ್ಸನ್ನು ಹತೋಟಿಯಲ್ಲಿಟ್ಟು ದೇವತ್ವದ ಕಡೆಗೆ ಮಾತ್ರ ಒಲವಿರಬೇಕು.
*ವ್ರತದ ಸಮಯದಲ್ಲಿ ಬ್ರಹ್ಮಚರ್ಯವನ್ನು ಕಠಿಣವಾಗಿ ಪಾಲಿಸಬೇಕು. ಶಿಬಿರದಲ್ಲೇ ಇದ್ದು ಸ್ವಾಮಿ ಧ್ಯಾನದಲ್ಲೇ ತೊಡಗಿರಬೇಕು.