Advertisement
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬೆx ನೇತೃತ್ವದ ಪೀಠ “ಇದೊಂದು ಅತ್ಯಂತ ಭಾವನಾತ್ಮಕ ವಿಚಾರ. ಹೀಗಾಗಿ ತಕ್ಷಣದಲ್ಲಿಯೇ ಆದೇಶ ನೀಡಲು ಸಾಧ್ಯವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ವಿಚಾರ ಈಗ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ವಿಸ್ತೃತ ಪೀಠ ಇನ್ನಷ್ಟೇ ರಚನೆಯಾಗಬೇಕಿದೆ. ಅಲ್ಲಿ ತನಕ ಮಹಿಳೆಯರ ಪ್ರವೇಶ ನಿಟ್ಟಿನಲ್ಲಿ ಯಾವುದೇ ಆದೇಶ ನೀಡಲು ಸಾಧ್ಯವಾಗದು’ ಎಂದು ಸ್ಪಷ್ಟಪಡಿಸಿತು. ಈ ಪೀಠದಲ್ಲಿ ನ್ಯಾಯಮೂರ್ತಿ ಬಿ ಆರ್ ಗವಾಯ್ ಹಾಗೂ ನ್ಯಾ. ಸೂರ್ಯಕಾಂತ್ ಇದ್ದಾರೆ.ಯಾವುದನ್ನಾದರೂ ಖಚಿತಪಡಿಸಿ ಎಂದು ವಕೀಲೆ ಇಂದಿರಾ ಜೈಸಿಂಗ್ ಆಗ್ರಹಕ್ಕೂ ಮಣಿಯದ ನ್ಯಾಯಪೀಠ, ” ಈ ದೇಶದಲ್ಲಿ ಕೆಲವೊಂದು ಆಚರಣೆಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದು ಭಾವನಾತ್ಮಕವಾಗಿದೆ. ಅದರಲ್ಲಿ ಇದೂ ಒಂದು. ದೇಶದಲ್ಲಿ ಹಿಂಸೆಗೆ ನಾವು ಅವಕಾಶ ಕೊಡುವುದಿಲ್ಲ ಎಂದು ಹೇಳಿತು. ಹೀಗಾಗಿ, ಯಾವುದೇ ಆದೇಶ ನೀಡಲು ಸಾಧ್ಯವಾಗದು ಎಂದು ಎಂದು ಹೇಳಿತು.