Advertisement

ಸಾರ್ಲೋರ್‌ಲಕ್ಸ್‌ ಓಪನ್‌ ಲಕ್ಷ್ಯ, ಮಿಥುನ್‌, ರಾಹುಲ್‌ ಮುನ್ನಡೆ

08:30 AM Nov 02, 2019 | Team Udayavani |

ಸಾರ್‌ಬ್ರುಕೆನ್‌ (ಜರ್ಮನಿ): ಇಲ್ಲಿ ನಡೆಯುತ್ತಿರುವ “ಸಾರ್ಲೋರ್‌ಲಕ್ಸ್‌ ಓಪನ್‌ ಸೂಪರ್‌ ಟೂರ್‌ 100′ ಬ್ಯಾಡ್ಮಿಂಟನ್‌ ಪಂದ್ಯಾ ವಳಿಯಲ್ಲಿ ಭಾರತದ ಮೂವರು ಪ್ರಿ-ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಉದಯೋನ್ಮುಖ ಶಟ್ಲರ್‌ ಲಕ್ಷ್ಯ ಸೇನ್‌, ಮಿಥುನ್‌ ಮಂಜುನಾಥ್‌ ಮತ್ತು ರಾಹುಲ್‌ ಭಾರದ್ವಜ್‌ ಪುರುಷರ ಸಿಂಗಲ್ಸ್‌ ವಿಭಾಗದಿಂದ ಮುನ್ನಡೆ ಸಾಧಿಸಿದ್ದಾರೆ.

Advertisement

ಕೆಲವು ದಿನಗಳ ಹಿಂದಷ್ಟೇ ನೆದರ್ಲೆಂಡ್ಸ್‌ನಲ್ಲಿ ಮೊದಲ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಪ್ರಶಸ್ತಿ ಜಯಿಸಿದ್ದ ಲಕ್ಷ್ಯ ಸೇನ್‌ ಫಿನ್ಲಂಡಿನ ಈಟು ಹೀನೊ ವಿರುದ್ಧ ಹೋರಾಟ ನಡೆಸಿ 21-18, 18-21, 22-20 ಅಂತರದಿಂದ ಗೆದ್ದು ಬಂದರು. 18ರ ಹರೆಯದ ಉತ್ತರಾಖಂಡ್‌ ಶಟ್ಲರ್‌ಗೆ ಮೊದಲ ಸುತ್ತಿನ ಬೈ ಲಭಿಸಿತ್ತು. ಮುಂದಿನ ಸುತ್ತಿನ ಎದುರಾಳಿ ಜರ್ಮನಿಯ ಲಾರ್ಸ್‌ ಶೇಂಜÉರ್‌.

ದಿನದ ಇನ್ನೊಂದು ಪಂದ್ಯದಲ್ಲಿ ಮಿಥುನ್‌ ಮಂಜುನಾಥ್‌ ಮಲೇಶ್ಯದ ಚೊಂಗ್‌ ಯೀ ಹಾನ್‌ ವಿರುದ್ಧ 21-15, 21-14 ಅಂತರದ ಮೇಲುಗೈ ಸಾಧಿಸಿದರು. ಇಂಗ್ಲೆಂಡಿನ 5ನೇ ಶ್ರೇಯಾಂಕದ ಟಾಬಿ ಪೆಂಟಿ ವಿರುದ್ಧ ಮಿಥುನ್‌ ಮುಂದಿನ ಸುತ್ತಿನ ಪಂದ್ಯವನ್ನು ಆಡಲಿದ್ದಾರೆ.

ರಾಹುಲ್‌ ಭಾರದ್ವಜ್‌ ಜರ್ಮನಿ ಯ ಕೈ ಶಫ‌ರ್‌ ಅವರನ್ನು 21-13, 21-15 ಅಂತರದಿಂದ ಸುಲಭದಲ್ಲಿ ಮಣಿಸಿದರು. ಇವರ ಮುಂದಿನ ಎದುರಾಳಿ ಅಯರ್‌ಲ್ಯಾಂಡಿನ ನಾಟ್‌ ಎನ್‌ಗುಯೆನ್‌.

ವನಿತಾ ಜೋಡಿಗೆ ಬೈ
ಇವರೆಲ್ಲರಿಗಿಂತ ಮೊದಲು ಭಾರತದ ಕಿರಣ್‌ ಜಾರ್ಜ್‌ ಪ್ರಿ ಕ್ವಾ. ಫೈನಲ್‌ ಪ್ರವೇಶಿಸಿದ್ದರು. ವನಿತಾ ಡಬಲ್ಸ್‌ ಜೋಡಿಯಾದ ಪೂಜಾ ದಾಂಡು-ಸಂಜನಾ ಸಂತೋಷ್‌ ಅವರಿಗೆ ಮೊದಲ ಸುತ್ತಿನ ಬೈ ಲಭಿಸಿದ್ದು, ಡೆನ್ಮಾರ್ಕ್‌ನ ಜೂಲಿ ಫಿನ್ನೆ ಯಿಪ್ಸೆನ್‌-ಮೈ ಸುರೊ ವಿರುದ್ಧ ಆಡಲಿದ್ದಾರೆ.

Advertisement

ಪುರುಷರ ಡಬಲ್ಸ್‌ನಲ್ಲಿ ವೈಭವ್‌-ಪ್ರಕಾಶ್‌ ರಾಜ್‌ ಸ್ಕಾಟ್ಲೆಂಡಿನ ಅಲೆಕ್ಸಾಂಡರ್‌ ಡನ್‌-ಆ್ಯಡಂ ಹಾಲ್‌ ವಿರುದ್ಧ ಸೆಣಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next