Advertisement

ಅಪ್ಪ-ಮಕ್ಕಳನ್ನು ಸೋಲಿಸಿ: ಭವಾನಿ ವಿಡಿಯೋ ವೈರಲ್‌

06:50 AM Apr 20, 2018 | Team Udayavani |

ಮೈಸೂರು: ಜೆಡಿಎಸ್‌ ಅಭ್ಯರ್ಥಿಯನ್ನು ಸೋಲಿಸಲು ದೊಡ್ಡಗೌಡರ ಮನೆಯಲ್ಲೇ ನಡೆದಿದೆಯೇ ತಂತ್ರ? ಇಂತಹದೊಂದು ವಿಡಿಯೋ ಇದೀಗ ವೈರಲ್‌ ಆಗಿದೆ. ಕೆ.ಆರ್‌.ನಗರ ತಾಲೂಕು ಸಾಲಿಗ್ರಾಮ ಭಾಗದ ಕೆಲ ಒಕ್ಕಲಿಗ ಮುಖಂಡರು ಇತ್ತೀಚೆಗೆ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರನ್ನು ಹೊಳೆನರಸೀಪುರದಲ್ಲಿ ಭೇಟಿ ಮಾಡಿದ್ದರು.
 
ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌ ಮತ್ತು ಅವರ ಪುತ್ರನ ದೌರ್ಜನ್ಯ ಮಿತಿ ಮೀರಿದೆ ಎಂದು ದೂರು ನೀಡಿದ್ದರು. ಆ
ಸಂದರ್ಭದಲ್ಲಿ ಭವಾನಿ ರೇವಣ್ಣ ಅವರು, “ಬರೀ ಇನ್ನು ಅವನು ಅಭ್ಯರ್ಥಿ, ಈಗಲೇ ಅವರು ಅಪ್ಪ-ಮಕ್ಕಳು ಸೇರಿಕೊಂಡು ಎಷ್ಟು ದೌರ್ಜನ್ಯ ನಡೆಸ್ತಾವ,ಇನ್ನೇನಾದ್ರೂ ಅವನು ಗೆದ್ದು ಮಂತ್ರಿ ಆಗುಟ್ರೆ, ಎಷ್ಟು ಸಾವಿರ ಜನರನ್ನು ತುಳಿಯಬಹುದು ಅವನು, ತಿಳ್ಕೊಳ್ಳಿ. ನಾನು ಅಂಜಿಕೊಂಡು ಮಾಡೋದಾಗಿದ್ರೆ, ನನ್ನ ಹೆಸರು ಎಲ್ಲೂ ತರಬೇಡಿ ಅಂತಿದ್ದೇ. ಓಪನ್‌ ಆಗೇ, ಧೈರ್ಯವಾಗೇ ಹೇಳ್ತಿದ್ದೇನೆ. ಇಡೀ ತಾಲೂಕು ಕಾಪಾಡೋ ಶಕ್ತಿ ನನ್ನದು. ನನ್ನ ಮೇಲೆ ಜವಾಬ್ದಾರಿ ಇದೆ. ನನ್ನ ಹೆಸರೇಳಿ ಬಿಟ್ಟೇ ಮಾಡಿ, ತಲೆ ಕೆಡಿಸಿಕೊಳ್ಳಬೇಡಿ’ ಎಂದು ಹೇಳಿರುವ ವಿಡಿಯೋ ವೈರಲ್‌ ಆಗಿದೆ.

Advertisement

ಅವರು ಹಂಗೆಲ್ಲ ಮಾತಾಡೋಲ್ಲ ಅಂದುಕೊಂಡಿದ್ದೇನೆ. ವಿರೋಧ ಪಕ್ಷದ ಕೈವಾಡ ಇರಬಹುದು.
– ಸಾ.ರಾ.ಮಹೇಶ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next