Advertisement

ನನ್ನ ಮೇಲೆ ಸುಳ್ಳು ಆರೋಪ ಮಾಡಿದ ರೋಹಿಣಿ ಸಿಂಧೂರಿಗೆ ಮನಸಾಕ್ಷಿ ಇಲ್ಲವೆ: ಸಾರಾ ಮಹೇಶ್ ಕಿಡಿ 

08:59 PM Jun 14, 2021 | Team Udayavani |

 

Advertisement

ಕಮ್ ಬ್ಯಾಕ್ ಎನ್ನುವ ಮುನ್ನ ನನ್ನ ಮೇಲಿನ ಆರೋಪದ ವರದಿ ನೋಡಿ ನಿರ್ಧರಿಸಿ ಎಂದ ಮಾಜಿ ಶಾಸಕ ಸಾ.ರಾ.ಮಹೇಶ್

ಮೈಸೂರು: ತಮ್ಮ ಕರ್ತವ್ಯಲೋಪವನ್ನು ಮುಚ್ಚಿಟ್ಟುಕೊಳ್ಳುವ ಉದ್ದೇಶದಿಂದ ನನ್ನ ಮೇಲೆ ಒತ್ತುವರಿ ಆರೋಪ ಮಾಡಿದ   ಅವರಿಗೆ ಮನಸಾಕ್ಷಿ ಇದೆಯೇ ಎಂದು ಶಾಸಕ ಸಾ.ರಾ.ಮಹೇಶ್ ಎಂದು ಕಿಡಿಕಾರಿದರು.

ಸೋಮವಾರ (ಜೂನ್ 14) ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 28 ದಿನಕ್ಕೆ ದಲಿತ ಅಧಿಕಾರಿಯೊಬ್ಬರನ್ನು ತಮ್ಮ ಪ್ರಭಾವ ಬಳಿಸಿ ವರ್ಗಾಯಿಸಿಕೊಂಡಿದ್ದ ಬಗ್ಗೆ ವಿರೋಧಿಸಿದ್ದೇನು. ಅವರ ಕರ್ತವ್ಯಲೋಪ, ಸಾರ್ವಜನಿಕ ಹಣ ದುರುಪಯೋಗ ಹಾಗೂ ಕಾನೂನು ದುರುಪಯೋಗದ ಬಗ್ಗೆ ಹೇಳಿದ್ದೇನು. ಕೋವಿಡ್ ಸಂದರ್ಭದಲ್ಲಿ ಸಾವಿನ ಲೆಕ್ಕವನ್ನೂ ಮುಚ್ಚಿಡುತ್ತಿದ್ದಾರೆಂದು ಹೇಳಿದ್ದರಿಂದ ನನ್ನನ್ನೂ ಗುರಿಯಾಗಿಸಿಕೊಂಡು ಅಪಾದನೆ ಮಾಡಿದ್ದರೂ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು ಹೇಳಿದರು.

2018ರ ಸರ್ಕಾರಿ ನಿಯಮದ ಪ್ರಕಾರ ಕೆರೆ ಪ್ರದೇಶದಿಂದ 30ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ನಿವೇಶನ ನಿರ್ಮಿಸಬಾರದು ಎಂಬ ನಿಯಮವಿದೆ. ಸುಪ್ರೀಂ ಕೋರ್ಟ್ ಆದೇಶದಲ್ಲಿಯೂ ಇದೇ ಇದೆ. ಜಿಲ್ಲಾಧಿಕಾರಿ ರೋಹಿಣಿಯವರು ನನ್ನ ಮೇಲೆ ಅಪಾದನೆ ಮಾಡುವ ದೃಷ್ಟಿಯಿಂದ ತಾವು ವರ್ಗಾವಣೆಗೊಳ್ಳುವ ಹಿಂದಿನ ಎರಡು ದಿನ ನೇರವಾಗಿ ಲಿಂಗಾಬುದಿ ಕೆರೆ ಸಮೀಪದಲ್ಲಿ 70 ಮೀಟರ್ ದೂರದಲ್ಲಿರುವ ನಮ್ಮ ಜಾಗದ ಪ್ಲಾನ್ ಅನ್ನು ಕಾನೂನು ಬಾಹಿರವಾಗಿ ರದ್ದು ಮಾಡಿದ್ದಾರೆ. ಸದರಿ ಆದೇಶ ಹೊರಡಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ತಮ್ಮ ಕರ್ತವ್ಯ ಲೋಪದ ಆರೋಪ ಮುಚ್ಚಿಟ್ಟುಕೊಳ್ಳಲು ಮುಂದಾಗಿದ್ದಾರೆ. ಆದರೆ, ಈ ರೀತಿ ಆದೇಶಿಸುವುದಕ್ಕೂ ಮುನ್ನ ಠಪಾಲು ಆದೇಶ ಹಾಗೂ ಅಪಾರ ಜಿಲ್ಲಾಧಿಕಾರಿಗಳ ಮೂಲಕ ಆದೇಶ ಬರಬೇಕಿದ್ದು, ಅದಾವುದು ಇಲ್ಲದೆ ನೇರವಾಗಿ ಆದೇಶ ಹೊರಡಿಸಿದ್ದು, ಈ ಬಗ್ಗೆ ಮುಂದೆಯೂ ತನಿಖೆ ನಡೆಸುವಂತೆ ಕೋರಲಾಗುವುದು ಎಂದು ತಿಳಿಸಿದರು.

Advertisement

ಇನ್ನೂ ಸಾರಾ ಕನ್ವೆಷನ್ ಹಾಲ್ ರಾಜಕಾಲುವೆ ಮೇಲೆ ನಿರ್ಮಿಸಿದ್ದಾರೆಂದು ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ವರದಿ ನೀಡಿರುವ ಪ್ರಾದೇಶಿಕ ಆಯುಕ್ತರು ನಮ್ಮ ಜಾಗ 74, 72, 73 ಮೀಟರ್ ದೂರ ಇರುವುದಾಗಿ ವರದಿ ನೀಡಿದ್ದಾರೆ. ಆ ಮೂಲಕ ನಮ್ಮ ಕಲ್ಯಾಣಮಂಟಪ ನಿರ್ಮಾಣ ಅಕ್ರಮವಲ್ಲ ಎಂಬುದು ಸಾರ್ವಜನಿಕರಿಗೆ ತಿಳಿಯುವಂತಾಗಿದೆ. ಅಲ್ಲದೆ, ನನ್ನ ಕನ್ವೆಷನ್‌ಹಾಲ್ ಇರುವ ಸರ್ವೆ ನಂಬರ್ 113 ಆದರೆ, ರೋಹಿಣಿ ಸಿಂಧೂರಿಯವರು ಸರ್ವೇ ನಂಬರ್ 98 ಅನ್ನು ನನ್ನ ಪತ್ನಿ ಹೆಸರನ್ನು ಹೇಳುತ್ತಿದ್ದಾರೆ. ಅವರು ಮೊದಲು ನನಗೆ ಸಂಬಂಧಿಸಿ ಜಾಗ ಇರುವುದು ಯಾವ ಸರ್ವೇಯಲ್ಲಿ ಎಂಬುದನ್ನು ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು.

ತಾವೊಬ್ಬ ಸರ್ಕಾರಿ ನೌಕರಿ ಎಂಬುದನ್ನು ಮರೆತು ಸಂವೇದನಾಶೀಲತೆ ಇಲ್ಲದ ವ್ಯಕ್ತಿ ತಮ್ಮನ್ನು ಕರ್ತವ್ಯ ಲೋಪದಿಂದ ವರ್ಗಾಯಿಸಿಲ್ಲ ಎಂದು ರಾಜ್ಯದ ಜನರ ಎದುರು ಬಿಂಬಿಸಿಕೊಳ್ಳಲು ಸರ್ಕಾರಿ ಆಡಳಿತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ರಾಜ್ಯದ ಇದನ್ನು ಗಮನಿಸಬೇಕು. ನಾನು ಅಂದೇ ಹೇಳಿದ್ದೇ ನನಗೆ ಸಂಬಂಧಿಸಿದ ಜಾಗ ರಾಜ ಕಾಲುವೆ ಮೇಲೆ ನಿರ್ಮಾಣವಾಗಿದ್ದರೆ ನಾನು ರಾಜ್ಯಪಾಲರಿಗೆ ಅದನ್ನು ಬರೆದು ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದೆನು. ಅಂತೆಯೇ ನೀವೂ ಐಎಎಸ್ ಹುದ್ದೆ ತ್ಯಜಿಸುವಿರ ಎಂದು ಪ್ರಶ್ನಿಸಿದ್ದೆ. ಆದರೆ, ಈಗ ನಾನು ರಾಜೀನಾಮೆ ಕೇಳುವುದಿಲ್ಲ. ನಿಮಗೆ ಆತ್ಮಸಾಕ್ಷಿ, ಮನಸಾಕ್ಷಿ ಹಾಗೂ ನಿಮ್ಮಲ್ಲೂ ಹೆಣ್ಣಿನ ತಾಯಿ ಹೃದಯ ಇದ್ದರೆ ಮನಸಾಕ್ಷಿ ಕೇಳಿಕೊಳ್ಳಿ. ಇಂತಹ ಅಧಿಕಾರಿಯನ್ನು ನನ್ನ ಜೀವನದಲ್ಲೇ ನೋಡಿಲ್ಲ. ಪಟ್ಟಭದ್ರ ಹಿತಾಸಕ್ತಿಗಳ ಬೆಂಬಲ, ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡು ಸತ್ಯವನ್ನು ಸುಳ್ಳು ಮಾಡಲು ಹೊರಟ್ಟಿಿದ್ದಾಾರೆ ಎಂದರು.

ಅನೇಕರು ಕಮ್ ಬ್ಯಾಕ್ ಎನ್ನುತ್ತಿದ್ದಾರೆ. ಆ ತಾಯಿ ಬಂದರೆ ನನಗೇನೂ ಇಲ್ಲ. ಆದರೆ, ರಾಜ್ಯದ ಜನತೆ ನನ್ನ ಮೇಲೆ ಮಾಡಿರುವ ಆರೋಪದಲ್ಲಿನ ಈ ಸತ್ಯವನ್ನು ನೋಡಬೇಕಿದೆ. ಇದು ನೋಡಿದ ಬಳಿಕ ರಾಜ್ಯದ ಜನರೇ ತೀರ್ಮಾನ ಮಾಡಲಿ ಎಂದು ಹೇಳಿದರು.

ಸುದ್ದಿಗೋಷ್ಠಿಿಯಲ್ಲಿ ನಗರಪಾಲಿಕೆ ಸದಸ್ಯರಾದ ಎಸ್‌ಬಿಎಂ ಮಂಜು, ಕೆ.ವಿ.ಶ್ರೀಧರ್, ಪ್ರೇಮಾಶಂಕರೇಗೌಡ, ಅಶ್ವಿನಿ ಅನಂತು, ಜಿಪಂ ಮಾಜಿ ಸದಸ್ಯರಾದ ದ್ವಾಾರಕೀಶ್, ಮಾದೇಗೌಡ, ಜಾ.ದಳ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಕರ್ನಾಟಕ ರಾಜ್ಯ ವನ್ಯಜೀವಿ ಧಾಮ ಹಾಗೂ ರೆಸಾರ್ಟ್ ಮಾಜಿ ಅಧ್ಯಕ್ಷ ವಿವೇಕ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಜಾ.ದಳ ಮಾದ್ಯಮ ವಕ್ತಾಾರ ರವಿಚಂದ್ರೇಗೌಡ, ಜಾ.ದಳ ಮುಖಂಡ ರಾಮು ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next