Advertisement
ಬ್ಯಾಟಿಂಗಿಗೆ ಉತ್ತಮ ನೆರವು ನೀಡುತ್ತಿದ್ದ ಟ್ರ್ಯಾಕ್ ನಲ್ಲಿ ಭಾರತ 6 ವಿಕೆಟಿಗೆ 287 ರನ್ ಗಳಿಸಿದರೆ, ಇದನ್ನು ನಿರಾಯಾಸವಾಗಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 48.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 288 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
Related Articles
Advertisement
ರಾಹುಲ್, ಪಂತ್ ಫಿಫ್ಟಿಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಈ ಬಾರಿ ನಾಯಕ ಕೆ.ಎಲ್. ರಾಹುಲ್ ಅವರೇ ಮುಂಚೂಣಿಯಲ್ಲಿ ನಿಂತು ಆಧರಿಸಿ ದರು. ರಿಷಭ್ ಪಂತ್ ಜೀವನಶ್ರೇಷ್ಠ ಬ್ಯಾಟಿಂಗ್‌ನೊಂದಿಗೆ ಮಿಂಚಿದರು. ಕೊನೆಯಲ್ಲಿ ಮತ್ತೆ ಶಾದೂìಲ್ ಠಾಕೂರ್ ಆಕ್ರಮಣಕಾರಿ ಆಟದ ಮೂಲಕ ಮೊತ್ತವನ್ನು ಏರಿಸಿದರು. ಅವರಿಗೆ ಆರ್. ಅಶ್ವಿನ್ ಉತ್ತಮ ಬೆಂಬಲ ವಿತ್ತರು. ಆದರೂ ಮುನ್ನೂರರ ಗುರಿ ಮರೀಚಿಕೆಯೇ ಆಗಿ ಉಳಿಯಿತು. ವಿರಾಟ್ ಕೊಹ್ಲಿಯ ಡಕ್, ಶ್ರೇಯಸ್ ಅಯ್ಯರ್ ಅವರ ವೈಫಲ್ಯದಿಂದ ಭಾರತದ ಮಧ್ಯಮ ಕ್ರಮಾಂಕದ ಚಿಂತೆ ಮುಂದುವರಿಯಿತು. ವೆಂಕಟೇಶ್ ಅಯ್ಯರ್ ಕೂಡ ಸಿಡಿದು ನಿಲ್ಲಲು ವಿಫಲರಾದರು. ಶತಕದ ಜತೆಯಾಟ
ರಾಹುಲ್-ಧವನ್ 11.4 ಓವರ್‌ಗಳಿಂದ 63 ರನ್ ಪೇರಿಸಿ ಉತ್ತಮ ಬುನಾದಿಯನ್ನೇನೋ ನಿರ್ಮಿಸಿದರು. ಆದರೆ ಧವನ್ (29) ಮತ್ತು ಕೊಹ್ಲಿ ಒಂದೇ ರನ್ ಅಂತರದಲ್ಲಿ ಪೆವಿಲಿಯನ್ ಸೇರಿಕೊಳ್ಳುವುದರೊಂದಿಗೆ ತಂಡ ಒತ್ತಡಕ್ಕೆ ಸಿಲುಕಿತು. ಈ ಹಂತದಲ್ಲಿ ರಾಹುಲ್-ಪಂತ್ ಆತಿಥೇಯರ ಬೌಲಿಂಗ್ ಆಕ್ರಮಣಕ್ಕೆ ದಿಟ್ಟ ರೀತಿಯಲ್ಲಿ ಉತ್ತರವಿತ್ತರು. ಇಬ್ಬರೂ ಅರ್ಧ ಶತಕದ ಕೊಡುಗೆ ಸಲ್ಲಿಸಿದರು. 3ನೇ ವಿಕೆಟಿಗೆ 115 ರನ್ ಪೇರಿಸಿ ದೊಡ್ಡ ಮೊತ್ತದ ಸಾಧ್ಯತೆಯನ್ನು ತೆರೆದಿರಿಸಿದರು. 32ನೇ ಓವರ್‌ನಲ್ಲಿ ಮಗಾಲ ಈ ಜೋಡಿಯನ್ನು ಬೇರ್ಪಡಿಸಿದರು. 79 ಎಸೆತಗಳಿಂದ 55 ರನ್ (4 ಬೌಂಡರಿ) ಮಾಡಿದ ರಾಹುಲ್ ವಾಪಸಾದರು. ನಾಲ್ಕೇ ರನ್ ಅಂತರದಲ್ಲಿ ಪಂತ್ ಕೂಡ ನಿರ್ಗಮಿಸಿದರು. ಅವರಿಂದ ಎಲ್ಲರೂ ಶತಕದ ನಿರೀಕ್ಷೆ ಮಾಡಿದ್ದರು. ಆದರೆ ಪಂತ್ ಆಟ 85 ರನ್ನಿಗೆ ಮುಗಿಯಿತು. 71 ಎಸೆತಗಳ ಪರಾಕ್ರಮದ ವೇಳೆ ಪಂತ್ 10 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಈ 2 ವಿಕೆಟ್‌ಗಳ ಶೀಘ್ರ ಪತನದಿಂದ ಭಾರತದ ರನ್‌ಗತಿ ಕುಂಟಿತಗೊಂಡಿತು. ಕೊನೆಯಲ್ಲಿ ಠಾಕೂರ್-ಅಶ್ವಿನ್ 38 ಎಸೆತಗಳಿಂದ 48 ರನ್ ಬಾರಿಸಿದ್ದರಿಂದ ಸ್ಕೋರ್ ಪ್ರಗತಿ ಕಂಡಿತು. ಕಳೆದ ಪಂದ್ಯದಲ್ಲಿ ಅಜೇಯ ಅರ್ಧ ಶತಕ ಬಾರಿಸಿದ್ದ ಠಾಕೂರ್ ಇಲ್ಲಿಯೂ ಅದೇ ಲಯದಲ್ಲಿ ಸಾಗಿ 40 ರನ್ ಹೊಡೆದು ಔಟಾಗದೆ ಉಳಿದರು (38 ಎಸೆತ, 3 ಬೌಂಡರಿ, 1 ಸಿಕ್ಸರ್). ಅಶ್ವಿನ್ ಗಳಿಕೆ ಅಜೇಯ 25 ರನ್ (24 ಎಸೆತ, 1 ಬೌಂಡರಿ, 1 ಸಿಕ್ಸರ್). 3ನೇ ಪಂದ್ಯ ರವಿವಾರ ಕೇಪ್‌ಟೌನ್‌ನಲ್ಲಿ ನಡೆಯಲಿದೆ. ಸ್ಕೋರ್ ಪಟ್ಟಿ
ಭಾರತ
ಕೆ.ಎಲ್. ರಾಹುಲ್ ಸಿ ಡುಸೆನ್ ಬಿ ಮಗಾಲ 55
ಶಿಖರ್ ಧವನ್ ಸಿ ಮಗಾಲ ಬಿ ಮಾರ್ಕ್‌ರಮ್ 29
ವಿರಾಟ್ ಕೊಹ್ಲಿ ಸಿ ಬವುಮ ಬಿ ಮಹಾರಾಜ್ 0
ರಿಷಭ್ ಪಂತ್ ಸಿ ಮಾರ್ಕ್‌ರಮ್ ಬಿ ಶಮಿÕ 85
ಶ್ರೇಯಸ್ ಅಯ್ಯರ್ ಎಲ್‌ಬಿಡಬ್ಲ್ಯು ಶಮಿÕ 11
ವೆಂಕಟೇಶ್ ಅಯ್ಯರ್ ಸ್ಟಂಪ್ಡ್ ಡಿ ಕಾಕ್ ಬಿ ಫೆಲುಕ್ವಾಯೊ 22
ಶಾರ್ದೂಲ್ ಠಾಕೂರ್ ಔಟಾಗದೆ 40
ಆರ್. ಅಶ್ವಿನ್ ಔಟಾಗದೆ 25
ಇತರ 20
ಒಟ್ಟು (6 ವಿಕೆಟಿಗೆ) 287
ವಿಕೆಟ್ ಪತನ: 1-63, 2-64, 3-179, 4-183, 5-207, 6-239.
ಬೌಲಿಂಗ್:
ಲುಂಗಿ ಎನ್‌ಗಿಡಿ 8-0-35-0
ಸಿಸಾಂಡ ಮಗಾಲ 8-0-64-1
ಐಡನ್ ಮಾರ್ಕ್‌ರಮ್ 8-0-34-1
ಕೇಶವ್ ಮಹಾರಾಜ್ 9-0-52-1
ಆ್ಯಂಡಿಲ್ ಫೆಲುಕ್ವಾಯೊ 8-0-44-1
ತಬ್ರೇಜ್ ಶಮ್ಸಿ 9-0-57-2
ದಕ್ಷಿಣ ಆಫ್ರಿಕಾ
ಜಾನೆಮನ್ ಮಲಾನ್ ಬಿ ಬುಮ್ರಾ 91
ಕ್ವಿಂಟನ್ ಡಿ ಕಾಕ್ ಎಲ್‌ಬಿಡಬ್ಲ್ಯು ಠಾಕೂರ್ 78
ಟೆಂಬ ಬವುಮ ಸಿ ಮತ್ತು ಬಿ ಚಹಲ್ 35
ಐಡನ್ ಮಾರ್ಕ್‌ರಮ್ ಔಟಾಗದೆ 37
ರಸ್ಸಿ ಡುಸೆನ್ ಔಟಾಗದೆ 37 ಇತರ 10
ಒಟ್ಟು (48.1 ಓವರ್‌ಗಳಲ್ಲಿ 3 ವಿಕೆಟಿಗೆ) 288
ವಿಕೆಟ್ ಪತನ: 1-132, 2-212, 3-214.
ಬೌಲಿಂಗ್:
ಜಸ್‌ಪ್ರೀತ್ ಬುಮ್ರಾ 10-0-37-1
ಭುವನೇಶ್ವರ್ ಕುಮಾರ್ 8-0-67-0
ಆರ್. ಅಶ್ವಿನ್ 10 -1-68-0
ಯಜುವೇಂದ್ರ ಚಹಲ್ 10-0-47-1
ಶಾರ್ದೂಲ್ ಠಾಕೂರ್ 5-0-35-1
ವೆಂಕಟೇಶ್ ಅಯ್ಯರ್ 5-0-28-0
ಶ್ರೇಯಸ್ ಅಯ್ಯರ್ 0.1-0-1-0 ಎಕ್ಸ್‌ಟ್ರಾ ಇನ್ನಿಂಗ್ಸ್
-ವಿರಾಟ್ ಕೊಹ್ಲಿ 14ನೇ ಸಲ ಏಕದಿನದಲ್ಲಿ ಸೊನ್ನೆಗೆ ಔಟಾದರು. ಭಾರತೀಯರ ಈ ಯಾದಿಯಲ್ಲಿ ಅವರಿಗೆ ಜಂಟಿ 6ನೇ ಸ್ಥಾನ. ರೈನಾ, ಸೆಹವಾಗ್ ಕೂಡ 14 ಸೊನ್ನೆ ಸುತ್ತಿದ್ದಾರೆ. 20 ಸಲ ಖಾತೆ ತೆರೆಯದ ಸಚಿನ್ ತೆಂಡುಲ್ಕರ್ ಅಗ್ರಸ್ಥಾನಲ್ಲಿದ್ದಾರೆ.
-ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ದಾಖಲಿ ಸದೆ 64 ಇನ್ನಿಂಗ್ಸ್‌ಗಳು ಉರುಳಿ ದವು. ಆದರೆ ಈ ಅವಧಿಯಲ್ಲಿ ಅವರು 7 ಸಲ ಸೊನ್ನೆ ಸುತ್ತಿದರು.
-ಕೊಹ್ಲಿ ಅವರನ್ನು ಮೊದಲ ಸಲ ಸ್ಪಿನ್ನರ್ ಒಬ್ಬರು ಸೊನ್ನೆಗೆ ಔಟ್ ಮಾಡಿದರು. ಈ ಹೆಗ್ಗಳಿಕೆ ಕೇಶವ್ ಮಹಾರಾಜ್ ಅವರದಾಯಿತು.
-ರಿಷಭ್ ಪಂತ್ ದಕ್ಷಿಣ ಆಫ್ರಿಕಾದಲ್ಲಿ ಆಡಲಾದ ಏಕದಿನ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ಕೀಪರ್ ಎನಿಸಿದರು (85). 2001ರ ಡರ್ಬನ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್ 77 ರನ್ ಹೊಡೆದ ದಾಖಲೆ ಪತನಗೊಂಡಿತು.
-ಪಂತ್ ಏಕದಿನದಲ್ಲಿ ಸರ್ವಾಧಿಕ ವೈಯಕ್ತಿಕ ರನ್ ಹೊಡೆದರು (85). ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ 78 ರನ್ ಹೊಡೆದದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.
-ಪಂತ್ 4ನೇ, ರಾಹುಲ್ 10ನೇ ಅರ್ಧ ಶತಕ ದಾಖಲಿಸಿದರು.
-ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿ ಸಲಿಲ್ಲ. ದ. ಆಫ್ರಿಕಾ ಮಾರ್ಕೊ ಜಾನ್ಸೆನ್ ಬದಲು ಸಿಸಾಂಡ ಮಗಾಲ ಅವರನ್ನು ಆಡಿಸಿತು.