Advertisement

ಕಾಫಿಯೂ ಕುಡಿಸದ ನೀವು ಗೆಲ್ಲುವುದು ಹೇಗೆ? ಸ್ಪೀಕರ್ ಕಾಗೇರಿಗೆ ಸಹಕಾರಿ ಸಚಿವರ ಹಾಸ್ಯ ಪ್ರಶ್ನೆ

04:36 PM Apr 05, 2022 | Team Udayavani |

ಶಿರಸಿ : ಒಂದು ಕಪ್ ಕಾಫಿಯನ್ನೂ ಮತದಾರರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕುಡಿಸುವದಿಲ್ಲ ಎಂಬ ಮಾಹಿತಿ ಕೇಳಿದ್ದೇನೆ. ಆದರೆ, ಪ್ರತೀ ಬಾರಿ ಅವರು ಹೇಗೆ ಗೆಲ್ತಾರೆ? ಇಂಥದೊಂದು ಪ್ರಶ್ನೆ ಹುಟ್ಟಿದ್ದು ರಾಜ್ಯ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ ಅವರಿಗೆ. ಸ್ವತಃ ಕಾಗೇರಿ ಅವರ ಎದುರೇ ಈ ಪ್ರಶ್ನೆ ಕೇಳಿ, ನಮಗೂ ಈ ಗುಟ್ಟು ಹೇಳಿಕೊಡಿ ಎಂದು ವಿನಂತಿಸಿಕೊಂಡ ಪ್ರಸಂಗವೂ ನಡೆಯಿತು.

Advertisement

ಶಿರಸಿ ತಾಲೂಕಿನ ಹನ್ಮಂತಿಯಲ್ಲಿ ಮಂಗಳವಾರ ರಾಜ್ಯದಲ್ಲೇ ಪ್ರಥಮ ಬಾರಿಗೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಕೆಎಂಎಫ್ ಹಾಗೂ ಧಾರವಾಡ ಹಾಲು‌ ಒಕ್ಕೂಟದ ಶಿರಸಿ ಡೇರಿ ಹಾಗೂ ಹಾಲು ಪ್ಯಾಕಿಂಗ್ ಘಟಕ ಉದ್ಘಾಟನೆ‌ ಸಮಾರಂಭದಲ್ಲಿ ವಿಧಾನ ಸಭೆಯ‌ ಕಲಾಪ ಪ್ರಸ್ತಾಪಿಸಿ, ಚುನಾವಣೆ ಸುಧಾರಣಾ ಕ್ರಮದ ಕುರಿತು ಪಾಠ ಮಾಡಿದ್ದಾರೆ. ಚುನಾಚಣೆ ಗೆಲ್ತಾರೆ ಎಂಬುದು ಗೊತ್ತು. ಆದರೆ, ಅವರು ಕಾಫಿ ಕೂಡ ಕುಡಿಸದೇ ಗೆಲ್ಲುತ್ತಾರೆ ಹೇಗೆ ಎಂದು ಕೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

ಹಿಂದೆ ಇದ್ದ ಸ್ಪೀಕರ್ ಸತ್ಯ ಹರಿಶ್ಚಂದ್ರ ಎಂದು ಹೇಳ್ತಿದ್ದರು. ಕಾಗೇರಿ ಅವರು ಮಾತ್ರ ಒಂದೇ ಒಂದು ಸ್ವಂತ ವಿಷಯ ಮಾತಾಡದೇ ರಾಜ್ಯದ ಹಿತ ಬಯಸಿ ಮಾತನಾಡಿ, ಆ ಹುದ್ದೆಯ ಘನತೆ ಹೆಚ್ಚಿಸಿದ್ದಾರೆ. ಸ್ಪೀಕರ್ ಕಚೇರಿಯಿಂದ ಫೊನ್ ಬಂದರೆ ಸಹಕಾರಿ ಆದೇಶದಲ್ಲಿ ಏನೋ ಎಡವಟ್ಟಾಗಿದೆ ಎಂದೇ ಅರ್ಥ. ಅವರು‌ ಮೊದಲು ಆ ಸಮಸ್ಯೆ‌ ನಿವಾರಿಸಲು ತಮ್ಮ ಒತ್ತಡಗಳ ನಡುವೆ ಸೂಚಿಸುತ್ತಾರೆ ಎಂದು ಬಣ್ಣಿಸಿದರು.

ಇದನ್ನೂ ಓದಿ : ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದ ಮರ : ಮಹಿಳೆ ಸಾವು, ಐವರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

ಎಲ್ಲರಿಗೂ ಮಾತಿನಲ್ಲಿ ಚಾಟಿ ಬೀಸಿ, ಕಂಕಳಲ್ಲಿ ದೊಣ್ಣೆ ಹಿಡಿದು ವಿಧಾನ ಸಭೆ ನಡೆಸುತ್ತಾರೆ ಎಂದೂ ಸೋಮಶೇಖರ ಶ್ಲಾಘಿಸಿದರು.

Advertisement

ಇದಕ್ಕೆ ಸ್ಪಂದಿಸಿ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಕಾಗೇರಿ, ಮತದರಾರರ ಪ್ರೀತಿಯಿಂದ ಮಾತ್ರ ಇದು ಸಾಧ್ಯ ಆಗಿದೆ ಎಂದು ನೆರೆದಿದ್ದ ಪ್ರೇಕ್ಷಕರಿಗೆ ಕೈ ಮುಗಿದರು.

ವೇದಿಕೆಯಲ್ಲಿದ್ದ ಸಚಿವ ಶಿವರಾಮ ಹೆಬ್ಬಾರ್ ಅವರ‌ ಕಡೆಗೆ ತಿರುಗಿ, ಹೆಬ್ಬಾರರು ಈಚೆಗೆ ದೂರ ಆಗಿದ್ದಾರೆ. ಅವರು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರಿಂದ ಇತ್ತ ಸಂಪರ್ಕ ಕಡಿಮೆ ಆಗಿದೆ‌. ಹೆಬ್ಬಾರ್ ಅವರ ಉಸ್ತುವಾರಿ ಕ್ಷೇತ್ರ ಸಿಎಂ‌ ಕ್ಷೇತ್ರ ಆಗಿದ್ದರಿಂದ ಅಲ್ಲಿ ಕೊಟ್ಟ ಅನುದಾನಗಳಂತೇ ಇತ್ತವೂ ಹರಿಸಬೇಕು ಎಂದೂ ಕಾಗೇರಿ ಹೇಳಿದಾಗ ಜನ ಚಪ್ಪಾಳೆ ಹೊಡೆದರು. ಎಲ್ಲರೂ ಜೊತೆಯಾಗಿ ಅಭಿವೃದ್ದಿ ಕಾರ್ಯ ನಡೆಸೋಣ ಎಂದೂ ಸ್ಪೀಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next