Advertisement

ಶ್ರೀಶಾಂತ್ ಪ್ರಕಾರ ಕೊಹ್ಲಿ, ರೋಹಿತ್ ಬಿಟ್ಟರೆ ಈತನೇ ಟೀಂ ಇಂಡಿಯಾ ಮುಂದಿನ ನಾಯಕ

10:58 AM May 02, 2020 | keerthan |

ಬೆಂಗಳೂರು: ಟೀಂ ಇಂಡಿಯಾದಲ್ಲಿ ವೇಗಿಯಾಗಿ ಮೆರೆದಾಡಿ ನಂತರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದ ಕೇರಳದ ಎಸ್ ಶ್ರೀಶಾಂತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತನ್ನ ಹಲೋ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಲೈವ್ ಬಂದಿರುವ ಶ್ರೀಶಾಂತ್ ಹಲವಾರು ವಿಚಾರಗಳನ್ನು ಮಾತನಾಡಿದ್ದಾರೆ.

Advertisement

ಫಿಕ್ಸಿಂಗ್ ಕಳಂಕದಿಂದ ದೂರವಾದ ನಂತರ ಕ್ರಿಕೆಟ್ ಗೆ ಮರಳುವ ಬಗ್ಗೆ ಅಭಿಲಾಶೆ ವ್ಯಕ್ತಪಡಿಸಿದ್ದ ಶ್ರೀಶಾಂತ್. ಈಗಲೂ ಅದರ ಬಗ್ಗೆ ಮಾತನಾಡಿದ್ದಾರೆ. ಕೇರಳ ಕ್ರಿಕೆಟ್ ತಂಡದ ತರಬೇತಿಯಲ್ಲಿ ಭಾಗಿಯಾಗಿದ್ದೇನೆ. ಮುಂದಿನ  ರಣಜಿಯಲ್ಲಿ ಕೇರಳ ತಂಡದ ಪರವಾಗಿ ಆಡುವ ವಿಶ್ವಾಸದಲ್ಲಿದ್ದೇನೆ ಎಂದರು.

ನಾನು ಮತ್ತೆ ವೃತ್ತಿಪರ ಕ್ರಿಕೆಟ್ ಗೆ ಮರಳುತ್ತೇನೆ. ಐಪಿಎಲ್ ನಲ್ಲಿ ಬೇಕಾದರೆ ಉಚಿತವಾಗಿ ಆಡಬಲ್ಲೆ. ಇನ್ನೂ ಐದು ವರ್ಷ ಕ್ರಿಕೆಟ್ ಆಡುತ್ತೇನೆ. ಮತ್ತೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು ವಿರಾಟ್, ರೋಹಿತ್, ರಾಹುಲ್ ಜೊತೆ ಆಡುತ್ತೇನೆ ಎಂದಿದ್ದಾರೆ.

ಕನ್ನಡಿಗ ಕೆ ಎಲ್ ರಾಹುಲ್ ಬಗ್ಗೆ ಮಾತನಾಡಿದ ಶ್ರೀಶಾಂತ್, ಆತನ ಕ್ರಿಕೆಟ್ ಆಸಕ್ತಿ ಮತ್ತು ಶಿಸ್ತು ನನಗೆ ಇಷ್ಟವಾಗಿದೆ. ವಿರಾ್ ಕೊಹ್ಲಿಯಂತೆ ರಾಹುಲ್ ಗೂ ಆಟದಲ್ಲಿ ಒಂದು ಶಿಸ್ತು ಇದೆ. ವೈಯಕ್ತಿಕ ದಾಖಲೆಗಿಂತ ತಂಡಕ್ಕಾಗಿ ಆಡುವ ಗುಣವಿದೆ. ಕೊಹ್ಲಿ, ರೋಹಿತ್ ನಂತರ ಟೀಂ ಇಂಡಿಯಾ ನಾಯಕನಾಗುವ ಗುಣ ರಾಹುಲ್ ಗೆ ಇದೆ ಎಂದು ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next