Advertisement
ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಅಧ್ಯಕ್ಷ ಸ್ಥಾನಕ್ಕೆ ಸೋಮನಾಥಪುರ ಕ್ಷೇತ್ರದ ಜೆಡಿಎಸ್ ಸದಸ್ಯ ಬಸವನಹಳ್ಳಿ ವೆಂಕಟೇಶ್ ಹಾಗೂ ಕಲಿಯೂರು ಕ್ಷೇತ್ರದ ಕಾಂಗ್ರೆಸ್ ಸದಸ್ಯ ಎಂ.ಕೆ. ಶಂಕರ ನಾಯಕ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಸಲೆ ಕ್ಷೇತ್ರದ ಜೆಡಿಎಸ್ ಸದಸ್ಯ ಮಹದೇವಯ್ಯ ಹಾಗೂ ತಲಕಾಡು ಕ್ಷೇತ್ರದ ಕೈ ಸದಸ್ಯೆ ಕೆ.ಎಸ್.ಗೌರಮ್ಮ ನಾಮಪತ್ರ ಸಲ್ಲಿಸಿದರು.
Related Articles
Advertisement
ಹೊಂಬಾಳಯ್ಯ, ಎನ್.ಆರ್.ರಾಜೇಶ್, ಕೃಷ್ಣೇಗೌಡ, ಪುರಸಭಾ ಮಾಜಿ ಉಪಾಧ್ಯಕ್ಷ ಪಾರ್ಥಸಾರತಿ, ಮಾಜಿ ಸದಸ್ಯ ಡಾ.ಬಿ.ಕೆ.ಜಾನಪ್ರಕಾಶ್, ತಾ.ಪಂ ಸದಸ್ಯ ಬಿ.ಸಾಜಿದ್ ಅಹಮ್ಮದ್, ಮಾಜಿ ಅಧ್ಯಕ್ಷ ಅತ್ತಹಳ್ಳಿ ಕುಮಾರಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಡಿ.ಶಿವು, ಮುಖಂಡರಾದ ಮೇಗಡಹಳ್ಳಿ ಶಿವಕುಮಾರ್, ನಾಗಾರ್ಜುನ, ಸರ್ದಾರ್ ಪಾಷ, ರಾಧಾಕೃಷ್ಣ, ವೈ.ಕೆ.ನವೀನ, ಮಹೇಶ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
ಕಾಂಗ್ರೆಸ್ಸಿಗರೇ ಕೈ ಕೊಟ್ಟರು!ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಐವರು ಕೃಷಿಕರ ಕ್ಷೇತ್ರದ ಸದಸ್ಯ, ಮೂವರು ನಾಮ ನಿರ್ದೇಶಿತರು ಹಾಗೂ ಟಿಎಪಿಸಿಎಂಸ್‌ನ ಪ್ರತಿನಿಧಿಯಿದ್ದರೂ ಕಾಂಗ್ರೆಸ್‌ಗೆ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಕೃಷಿಕರ ಕ್ಷೇತ್ರದ ಕಾಂಗ್ರೆಸ್ ಸದಸ್ಯರಿಬ್ಬರೂ ಕೈ ಕೊಟ್ಟದ್ದರಿಂದ ಅಧಿಕಾರ ಕೈ ತಪ್ಪಿ, ಜೆಡಿಎಸ್ ಪಾಲಾಗಿದೆ. ಜೆಡಿಎಸ್‌ನ ಐವರು ಕೃಷಿಕರ ಕ್ಷೇತ್ರದ ಸದಸ್ಯರು ಸೇರಿದಂತೆ ಓರ್ವ ಬಿಜೆಪಿ ಸದಸ್ಯೆ, ವರ್ತಕರ ಕ್ಷೇತ್ರದ ಸದಸ್ಯ ಮತ್ತು ಟಿಎಪಿಸಿಎಂಎಸ್ ಪ್ರತಿನಿಧಿ ಹಾಗೂ ಇಬ್ಬರು ಕೈ ಸದಸ್ಯರ ಬೆಂಬಲವನ್ನು ಪಡೆಯಲು ತಂತ್ರಗಾರಿಕೆ ರೂಪಿಸಿ ಸಿಎಂ ಸಿದ್ದರಾಮಯ್ಯ ಮತ್ತು ಪ್ರಭಾವಿ ಸಚಿವರಾಗಿರುವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಸೆಡ್ಡು ಹೊಡೆದು ಅಧಿಕಾರ ಹಿಡಿಯುವಲ್ಲಿ ಜೆಡಿಎಸ್ ಸಫಲವಾಗಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಬ್ಬರನ್ನೂ ಮಾಜಿ ಶಾಸಕ ಡಾ. ಎನ್.ಎಲ್. ಭಾರತೀಶಂಕರ್ ಅಭಿನಂದಿಸಿದ್ದು ವಿಶೇಷವಾಗಿತ್ತು.