Advertisement
ಈ ದುರ್ಘಟನೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಘೋಟ್ನೇಕರ ಅವರು ಪ್ರಾರಂಭಿಕ ಹಂತದಲ್ಲಿ ವೈಯಕ್ತಿಕವಾಗಿ ಹತ್ತು ಸಾವಿರ ರೂಪಾಯಿ ಸಹಾಯಧನವನ್ನು ನೀಡಿದರು. ಇನ್ನೂ ಹೆಚ್ಚಿನ ರೀತಿಯಲ್ಲಿ ಆರ್ಥಿಕ ಸಹಾಯ ಮಾಡುವುದಾಗಿ ಹೇಳಿದ ಎಸ್.ಎಲ್.ಘೋಟ್ನೇಕರ ಅವರು ಬಾಡಿಗೆ ಮನೆಯಲ್ಲಿರುವ ಈ ಕುಟುಂಬಕ್ಕೆ ನಗರ ಸಭೆಯಡಿ ಆಶ್ರಯ ಮನೆಯನ್ನು ಮಂಜೂರು ಮಾಡಿ, ಆಶ್ರಯ ಮನೆಗೆ ಮೃತ ಬಾಲಕನ ಕುಟುಂಬದವರು ತುಂಬಬೇಕಾದ ವಂತಿಗೆ ಹಣವನ್ನು ತಾನು ಪಾವತಿಸುವುದಾಗಿ ಭರವಸೆ ನೀಡಿದರು. ಉಳಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ ಘೋಟ್ನೇಕರ ಅವರು ಈ ಕುಟುಂಬಕ್ಕೆ ವಿಶೇಷ ರೀತಿಯಲ್ಲಿ ಪರಿಹಾರ ಧನವನ್ನು ನೀಡುವ ನಿಟ್ಟಿನಲ್ಲಿ ಸಹಕರಿಸುವಂತೆ ಕೋರಿದರು. ಅರಣ್ಯ ಸಚಿವರು ಹಾಗೂ ಉಸ್ತುವಾರಿ ಸಚಿವರಲ್ಲಿ ಈ ಘಟನೆಯ ಬಗ್ಗೆ ಮಾತನಾಡಿ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಈ ಕುಟುಂಬದ ಹೆಸರನ್ನು ಆಶ್ರಯ ಮನೆ ಯಾದಿಯಲ್ಲಿ ಸೇರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಅರಣ್ಯ ಇಲಾಖೆಯ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ನಿಂಗಾಣಿ, ವಲಯಾರಣ್ಯಾಧಿಕಾರಿ ವಿನಯ್ ಭಟ್, ಹಳಿಯಾಳ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಚೌವ್ಹಾಣ್, ದಾಂಡೇಲಪ್ಪ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪೂಜಾರಿ, ಯುವ ನ್ಯಾಯವಾದಿ ವಿಶ್ವನಾಥ ಜಾಧವ್, ಮುಖಂಡರುಗಳಾದ ಗಣೇಶ ಖಾನಪುರಿ, ಸಂದೀಪ್ ಭಂಡಾರಿ, ಗೌರೀಶ ನಾಯ್ಕ, ಸಚ್ಚಿನ್ ವ್ಹಾಜ್ ಮೊದಲಾದವರು ಉಪಸ್ಥಿತರಿದ್ದರು.