Advertisement

ಸಾರ್ಥಕ ಬದುಕಿಗೆ “ಸಾರ್ಥ’

12:52 AM Nov 09, 2020 | mahesh |

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

Advertisement

ಹಿರಿಯ ಸಾಹಿತಿ ಎಸ್‌. ಎಲ್ ಭೈರಪ್ಪನವರ ಅದ್ಭುತ ಕಾದಂಬರಿಗಳಲ್ಲಿ “ಸಾರ್ಥ’ವೂ ಸೇರಿದೆ. ಭರತಖಂಡದಲ್ಲಿ 8ನೇ ಶತಮಾನದಲ್ಲಿ ನಡೆಯಿತೆಂಬ ಕಲ್ಪನೆಯ ಕಥೆ ಈ ಕೃತಿಯ ದ್ದಾಗಿದೆ. ಆನೆ, ಕುದುರೆ, ಹೇಸರಗತ್ತೆ ಹಾಗೂ ನೂರಾರು ಗಾಡಿಗಳ ಮೇಲೆ ವಾಣಿಜ್ಯ ವಸ್ತು ಗಳನ್ನು ಹೇರಿಕೊಂಡು ವ್ಯಾಪಾರಕ್ಕಾಗಿ ದೂರ ದೂರುಗಳಿಗೆ ಸಂಚರಿಸುವುದನ್ನು ಆ ಕಾಲ ದಲ್ಲಿ ಸಾರ್ಥ ಎನ್ನುತ್ತಿದ್ದರು.

ವೈದಿಕ ಸಂಪ್ರದಾಯದಲ್ಲಿ ಹುಟ್ಟಿದ ನಾಗಭಟ್ಟನು ತನ್ನ ರಾಜ್ಯದ ಅರಸ ಅಮರುಕನ ಆಸೆಯಂತೆ ರಾಜ್ಯದ ವಾಣಿ ಜ್ಯಾಭಿವೃದ್ಧಿಗೆ “ಸಾರ್ಥ’ದ ಒಳಮರ್ಮ­ವನ್ನು ಅರಿ ಯಲು ನಿಯುಕ್ತನಾಗುತ್ತಾನೆ. ಮನೆ­ಯನ್ನು ಬಿಟ್ಟು ಸಾರ್ಥದ ಗುಂಪಿನೊಂದಿಗೆ ಸಾಗು­ತ್ತಾನೆ. ಆ ಸಂಚಾರವು ವಾಣಿಜ್ಯ ಲೋಕದ ಪರಿಚಯವನ್ನು ಮಾಡಿಕೊಡುತ್ತದೆ. ದಕ್ಷಿಣದಿಂದ ಮಥುರೆಗೆ ತಲುಪುವ ಸಾರ್ಥವು ನಾಗಭಟ್ಟನಿಗೆ ಮತ್ತೂಂದು ಜೀವನಾಡಿಯಾಗುತ್ತದೆ. ಬಗೆ­ಬಗೆಯ ಧಾರ್ಮಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕದ ಪ್ರಭಾವವು ಬೌದ್ಧಿಕ-ಲೌಕಿಕ ಜೀವನದ ವ್ಯತ್ಯಾಸ­ಗಳನ್ನು ಪರಿಚಯಿಸುತ್ತದೆ.

ಸಾರ್ಥದ ಸಂಬಂಧದೊಂದಿಗೆ ಕಾಶಿಗೆ ತಲುಪ ಬೇಕೆನ್ನುವ ಗುರಿ ಹೊಂದಿದ್ದ ನಾಗಭಟ್ಟನಿಗೆ ತನ್ನ ಊರಿನ ದೀಕ್ಷಿತರು ಅಚಾನಕ್ಕಾಗಿ ಸಿಕ್ಕಿದರು. ಅವರ ಭೇಟಿಯಿಂದ ಗಾಢರಹಸ್ಯವೊಂದು ತಿಳಿಯುತ್ತದೆ. ತನ್ನ ಹೆಂಡತಿಯನ್ನು ರಾಜ ಅಮರುಕನು ಒಲಿಸಿಕೊಳ್ಳುವುದಕ್ಕಾಗಿಯೇ ತನ್ನನ್ನು ಈ ಸಂಚಾರಕ್ಕೆ ನಿಯುಕ್ತಿಗೊಳಿಸಿದ್ದಾನೆ ಎಂಬುದನ್ನು ದೀಕ್ಷಿತರಿಂದ ತಿಳಿದು ನಾಗಭಟ್ಟ ಅಧೀರನಾಗುತ್ತಾನೆ.

ಮುಂದೆ ಮಥುರೆಯಲ್ಲಿ ಪ್ರೀತಿಯ ಅಪೂರ್ವ ಅನುಭವಕ್ಕೆ ಬೆಳಕು ಚೆಲ್ಲಲೆಂದೇ ನಾಟಕದ ಮೂಲಕ ಚಂದ್ರಿಕಾ ಪರಿಚಯವಾಗುತ್ತಾಳೆ. ಧಾರ್ಮಿಕ ಸಂಘರ್ಷಗಳನ್ನು ಮೀರಿ ಇವರಿ ಬ್ಬರ ಸಂಬಂಧ ಮುಗಿಲೆತ್ತರಕ್ಕೆ ಬೆಳೆಯುತ್ತದೆ. ಆದರೆ ಸಂಬಂಧಕ್ಕೊಂದು ಹೆಸರಿಲ್ಲದೆ ಬಂಧವು ಕುಸಿಯುತ್ತದೆ. ಮನಸ್ಸು ಶೂನ್ಯವಾದಾಗ ನಾಗ ಭಟ್ಟನ ಬುದ್ಧಿ ಧ್ಯಾನವನ್ನು ಅರಸುತ್ತದೆ. ಧ್ಯಾನ ತನ್ನ ಒಳ ಬಯಕೆಗೆ ಪೂರಕವಾಗದಾಗ ವಾಮಾ ಚಾರದ ಮೊರೆಹೋಗಿ ಅದರಲ್ಲೂ ಸೋಲು ತ್ತಾನೆ. ನಾಗಭಟ್ಟನ ಮನಸ್ಸು ಬುದ್ಧನತ್ತ ಸಾಗು ತ್ತದೆ. ಬುದ್ಧನ ಸಂಚಾಲಕನಾಗಿ ಕನಸುಗಳನ್ನು ಏಕಾಂಗಿಯಾಗಿ ಧ್ಯಾನದಲ್ಲಿ ಕಂಡು ಅದೃಶ್ಯ ಮಾಡುವ ಪಯಣದಲ್ಲಿ ಜಯ ಸಾಧಿಸಿದರೂ ಏಕಾಗ್ರತೆಯಲ್ಲಿ ಸೋತು ಶೂನ್ಯನಾಗುತ್ತಾನೆ.

Advertisement

ಮತ್ತೂಮ್ಮೆ ಬದುಕನ್ನು ಬದುಕಿನ ಅರ್ಥವನ್ನು ಧಾರ್ಮಿಕತೆ ಹಾಗೂ ವೈಚಾರಿಕತೆಯಲ್ಲಿ ಹುಡುಕಲು ಹೊರಟು, ಏನೂ ಇಲ್ಲದವನು ಕಳೆದು­ಕೊಳ್ಳುವುದೇನನ್ನು ಎಂದು ಪ್ರಶ್ನಿಸಿಕೊಳ್ಳುತ್ತಾನೆ. ದೃಢ ನಿರ್ಧಾರದಲ್ಲಿ ವಿಚಾರವಾದಿ­ಗಳ ವಿಚಾರ ವ್ಯಾಧಿಗಳ ಮಾತಿನ ಯುದ್ಧದ ಸೂಕ್ಷ್ಮತೆಗ­ಳಲ್ಲಿ ಅನುಸರಿಸುವ ದೇವ­ರನ್ನು ಚಿನ್ಮಯಿಯಾಗಿಯೇ ಗೌರವಿಸುವ ಪಂಕ್ತಿ ಒಂದೆಡೆಯಾ­ದರೆ, ಮೂರ್ತಿಯಾಗಿಯೇ ಪೂಜಿಸುವ ಕ್ರಮ ಇನ್ನೊಂದೆಡೆ ಎಂಬ ವ್ಯಕ್ತಿನಿಷ್ಠೆಯ ನಂಬಿಕೆಯ ವಾದವು ಪರಿಚಯವಾಗುತ್ತದೆ. ಬ್ರಹ್ಮಚರ್ಯ, ಗೃಹಸ್ಥ, ವೃದ್ಧಾಪ್ಯದ ಅರ್ಥಗಳ ಅರಸುವಿ ಕೆಯಲ್ಲಿ ತೇಲಿ, ಕುತೂಹಲ ಅಸೂಯೆ ಕೋಪ ತಾಪಗಳೆಲ್ಲ ಮಾನವಸಹಜ ಪ್ರವೃತ್ತಿಗಳು. ಅವು ಗಳನ್ನು ಹತ್ತಿಕ್ಕಿ ಕಾಣದ ಗುರಿಗೆ ನೆಗೆಯುವುದ ರಿಂದ ಏನೂ ದಕ್ಕುವುದಿಲ್ಲ ಎಂಬ ನಿರ್ಧಾರಕ್ಕೆ ಬರುವ ಹೊತ್ತಿಗೆ ದೇಶ ಉಳಿಸುವ ಕೆಲಸದಲ್ಲಿ ಬಂಧಿಯಾಗಿ, ಸತ್ಯ ಸುಳ್ಳುಗಳ ಸೊಗಸಿಗೆ ಸೋಲುವ ಪೆಟ್ಟುಬಿದ್ದರೂ ಸಹಿಸಿಕೊಂಡು ತನ್ನಂತೆಯೇ ನೋವುಂಡ ಚಂದ್ರಿಕಾಳ ಜತೆ ಪಯಣಿಸಿ, ಆಕೆಯ ಧ್ಯಾನ ಗುರುಗಳ ಸನ್ನೆ ಯಂತೆ ನಾಗಭಟ್ಟನನ್ನು ಕೈ ಹಿಡಿಯುವ ಅವಕಾಶ ದೊರೆಯುತ್ತದೆ.

ಸಾರ್ಥದ ಅನುಭವ ವ್ಯವಹಾರದ ವಸ್ತುನಿಷ್ಠೆ ಯನ್ನು ತಿಳಿಸಿದರೆ, ಬದುಕಿನ ಭಾವ-ಅಭಾವದ ಪೂರ್ಣ-ಅಪೂರ್ಣದ ಒಡನಾಟ, ಸಂದರ್ಭ, ಸಾಕ್ಷಿಗಳು ಮತ್ತೂಂದು ಜೀವನದ ಜೀವಸ್ವರಕ್ಕೆ ಸಾಕ್ಷಿಯಾಗುತ್ತದೆ.

-ಅಭಿಷೇಕ್‌ ಎಂ. ವಿ., ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next