ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಅಮೇರಿಕಾದ ಉದ್ಯಮಿ ಜಾರ್ಜ್ ಸಾರಸ್ ವಿರುದ್ಧ ಕಿಡಿಕಾರಿದ್ದಾರೆ.
ʻಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಆದರೆ ಭಾರತದ ಪ್ರಧಾನಮಂತ್ರಿ ಅಲ್ಲʼ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಸಾರಸ್ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು.
ಆಸ್ಟ್ರೇಲಿಯ ಸಚಿವ ಕ್ರಿಸ್ ಬ್ರೌನ್ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್ ʻಸಾರಸ್ ಒಬ್ಬ ಮುದಿ, ಶ್ರೀಮಂತ, ಅಪಾಯಕಾರಿ ವ್ಯಕ್ತಿʼ ಎಂದು ಹೇಳಿದ್ಧಾರೆ.
ʻಮುದಿ, ಶ್ರೀಮಂತ, ಅಪಾಯಕಾರಿ ವ್ಯಕ್ತಿಯೊಬ್ಬ ಅಮೇರಿಕದ ನ್ಯೂಯಾರ್ಕ್‌ನಲ್ಲಿ ಕುಳಿತುಕೊಂಡು ತನ್ನ ದೃಷ್ಠಿಯಂತೆಯೇ ಪ್ರಪಂಚವಿರಬೇಕು ಎಂದು ಬಯಸುತ್ತಿದ್ದಾರೆ. ಅಂತಹವರು ಕಥೆಗಳನ್ನು ರೂಪಿಸುವುದಕ್ಕಷ್ಟೇ ತಮ್ಮ ಹಣ ವ್ಯಯಿಸಬೇಕುʼ ಎಂದು ಜೈಶಂಕರ್ ಹೇಳಿದ್ದಾರೆ.
ಸಾರಸ್ ಹೇಳಿದ ʻದೋಷಪೂರಿತ ಪ್ರಜಾಪ್ರಭುತ್ವʼ ಮತ್ತು ʻತೆರೆದ ಸಮಾಜʼದ ಪರಿಕಲ್ಪನೆ ಬಗ್ಗೆಯೂ ಜೈಶಂಕರ್ ವ್ಯಂಗ್ಯವಾಡಿದ್ಧಾರೆ.
ʻಅವರಂತಹಾ ವ್ಯಕ್ತಿಗಳು ಚುನಾವಣೆಯಲ್ಲಿ ತಾವು ನೆಚ್ಚಿದ್ದ ಸ್ಪರ್ಧಿಯ ಗೆಲುವನ್ನು ಕಾಣಬಯಸುತ್ತಾರೆ. ಅವರ ಗೆಲುವು ಸಾಧ್ಯವಾಗದೇ ಇದ್ದಾಗ ಇಡೀ ಪ್ರಜಾಪ್ರಭುತ್ವವನ್ನೇ ದೋಷಪೂರಿತ ಎನ್ನುತ್ತಾರೆʼ ಎಂದು ಜಾರ್ಜ್ ಸಾರಸ್ ವಿರುದ್ಧ ಎಸ್. ಜೈಶಂಕರ್ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ:
ಉದ್ಯಮಿ ಜಾರ್ಜ್ ಸೊರೊಸ್ ವಿರುದ್ಧ ಕಿಡಿ