Advertisement

ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು: ಸಚಿವ ಸುರೇಶ್ ಕುಮಾರ್

01:21 PM Aug 14, 2020 | keerthan |

ಚಾಮರಾಜನಗರ: ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ನಡೆದಿರುವ ಘಟನೆಯಲ್ಲಿ ಎಸ್ ಡಿಪಿಐ ಸಂಘಟನೆ ಪಾತ್ರ ಇರುವುದು ಬೆಳಕಿಗೆ ಬಂದಿರುವುದರಿಂದ ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಶಿಕ್ಷಣ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.

Advertisement

ಡಿಜೆ ಹಳ್ಳಿಯಲ್ಲಿ ನಡೆದಿರುವುದು ದುರಂತ. ಇಂತಹ ದುರಂತಗಳು ಮತ್ತೆ ಮತ್ತೆ ನಡೆಯಬಾರದು ಎಂಬುದು ಜನರ ಒತ್ತಾಯ. ಯಾರು ದುರಂತಕ್ಕೆ ಮೂಲಪುರುಷರೋ, ಅವರನ್ನು ಹುಡುಕಬೇಕು. ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ಎಸ್ ಡಿಪಿಐ ಪಾತ್ರ ಇದೆ ಎಂಬ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಎಸ್ ಡಿಪಿಐಯನ್ನು ನಿಷೇಧಿಸಬೇಕು ಎಂಬ ಕೂಗೆದ್ದಿದೆ. ಇದು ಸರ್ವ ಸಮ್ಮತಿಯ ಬೇಡಿಕೆ ಎಂದರು.

ಜನರಿಗೆ ಶಾಂತಿ ಸೌಹಾರ್ದತೆ ಬೇಕು. ಸಮಾಜ ದ್ರೋಹಿ ಸಂಘಟನೆಗಳು ಸಮಾಜದಲ್ಲಿ ಶಾಂತಿ ಇರಬಾರದು ಎಂಬ ಧ್ಯೇಯ ಹೊಂದಿವೆ. ಹಾಗಾಗಿ ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂಬುದು ನನ್ನ ಬಲವಾದ ಅಭಿಪ್ರಾಯ ಪಟ್ಟಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಗಲಭೆ ಮಾಡಿದ್ದು ಯಾರೆಂದು ಸಿದ್ದರಾಮಯ್ಯಗೆ ಗೊತ್ತಿದೆ ಆದರೆ ಹೇಳಲು ಧಮ್ ಇಲ್ಲ: ಈಶ್ವರಪ್ಪ

Advertisement

ಇದಕ್ಕೂ ಮೊದಲು ಸಚಿವರು, ನಗರದ ವಿದ್ಯಾನಗರ ಬಡಾವಣೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲಯ ನಿರ್ಮಾಣ ಕ್ಕೆ ಭೂಮಿಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next