Advertisement

ಸಿಸ್ಟರ್ ಆಫ್‌ ಚ್ಯಾರಿಟಿಯ ಧರ್ಮಭಗಿನಿ ಸಿ|ಬಾರ್ತಲೋಮಿಯಾ ಜನ್ಮಶತಾಬ್ದ

01:50 AM Jul 09, 2017 | Harsha Rao |

ಮಂಗಳೂರು: ಸಿಸ್ಟರ್ ಆಫ್‌ ಚ್ಯಾರಿಟಿಯ ಧರ್ಮಭಗಿನಿ ದಿ| ಸಿ| ಬಾರ್ತಲೋಮಿಯಾ ಅವರ ಜನ್ಮ ಶತಾಬ್ದವನ್ನು ನಗರದ ಕುಲಶೇಖರ ಸಮೀಪದ ಸರಿಪಲ್ಲ ಕಮ್ಯೂನಿಟಿ ಸೆಂಟರ್‌ನಲ್ಲಿ ಆಚರಿಸಲಾಯಿತು.

Advertisement

ಸರಿಪಲ್ಲ ಎ.ಬಿ.ನಗರದ “ಸಿಸ್ಟರ್‌ ಬಾರ್ತಲೋಮಿಯಾ ಜನ್ಮಶತಾಬ್ದಿ ಸಮಿತಿ’ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಜಪ್ಪು ಇನೆ#ಂಟ್‌  ಮೇರಿ ಕಾನ್ವೆಂಟ್‌ನ ಮುಖ್ಯಸ್ಥರಾದ ಸಿ| ಸಿಲ್ವಿಯಾ ಫೆರ್ನಾಂಡಿಸ್‌ ಅಧ್ಯಕ್ಷತೆ ವಹಿಸಿದ್ದರು. 
ಕುಲಶೇಖರ ಹೋಲಿ ಕ್ರಾಸ್‌ ಚರ್ಚ್‌ನ ಧರ್ಮಗುರು ಫಾ| ವಿಕ್ಟರ್‌ ಮಚಾದೊ ಮುಖ್ಯ ಅತಿಥಿಯಾಗಿದ್ದರು. ಸಿ | ಬಾರ್ತಲೋಮಿಯಾ ಅವರು “ಪರರ ಸೇವೆಯೇ ಪರಮಾತ್ಮನ ಸೇವೆ’ಯನ್ನು ಧ್ಯೇಯವಾಗಿಸಿ ಕೊಂಡು ಬದುಕಿ ಆರ್ಥಿಕವಾಗಿ ಹಿಂದುಳಿದ ಒಂದು ಸಾವಿರಕ್ಕೂ ಮಿಕ್ಕಿ ಕುಟುಂಬಗಳಿಗೆ ಉಚಿತವಾಗಿ ಮನೆಗಳನ್ನು ಕಟ್ಟಿಸಿಕೊಟ್ಟು ಮಾಡಿರುವ ಸಾಧನೆ ಇತರರಿಗೆ ಮಾದರಿಯಾಗಿದೆ. ಸರಿಪಲ್ಲವನ್ನು ಬದಲಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.  

ಗೌರವ ಅತಿಥಿಯಾಗಿದ್ದ ಸಿ| ಇವಾಂಜಿಲಿನ್‌ ಮಿನೇಜಸ್‌ ಅವರು ತನಗೆ ಸಿ| ಬಾರ್ತಲೋಮಿಯಾ ಅವರ ಜತೆ ಕೆಲಸ ಮಾಡಲು ಅವಕಾಶ ಲಭಿಸಿದ್ದನ್ನು ಸ್ಮರಿಸಿದರು. ದೇವರ ಮೇಲೆ ಅಪಾರ ಭಕ್ತಿ ಮತ್ತು ನಂಬಿಕೆ, ಬಡವರ ಬಗ್ಗೆ ಪ್ರೀತಿ ಅವರಲ್ಲಿತ್ತು ಎಂದು ಹೇಳಿದರು. 

ಇನ್ನೋರ್ವ ಗೌರವ ಅತಿಥಿ ವಿಕ್ಟರ್‌ ವಾಸ್‌ ಮಾತನಾಡಿ ಸಿ| ಬಾರ್ತ ಲೋಮಿಯಾ ಅವರು ಹಲ ವಾರು ಮಂದಿ ಜನರ ಜೀವನ ಪರಿವರ್ತ ನೆಗೆ ಕಾರಣರಾಗಿದ್ದಾರೆ ಎಂದರು. 

Advertisement

ಸಮಿತಿ ಅಧ್ಯಕ್ಷ ಲುವಿಸ್‌ ರೊಸಾರಿಯೊ, ಇ. ಫೆರ್ನಾಂಡಿಸ್‌ ಉಪಸಿœತರಿದ್ದರು. ಮಹೇಶ್‌ ಚೌಟ ಸ್ವಾಗತಿಸಿದರು. ಐರಿನ್‌ ಡಿ’ಕುನ್ಹಾ ಅವರು ಸಿ| ಬಾರ್ತಲೋಮಿಯಾ ಅವರ ಜೀವನವನ್ನು ಪರಿಚಯಿಸಿದರು. ಸುನಿಲ್‌ ಜಯರಾಂ ವಂದಿಸಿದರು. ಗಂಗಾಧರ ಅವರು ಕಾರ್ಯಕ್ರಮು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next