Advertisement
ಈ ಪ್ರಸ್ತಾವನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದು, ಶೀಘ್ರ ಅನುಷ್ಠಾನವಾಗುವ ನಿರೀಕ್ಷೆಯಿದೆ. ಸದ್ಯ ಹವಾಮಾನ ಮಾಹಿ ತಿಗಾಗಿ ಕಾರ್ಯಾಚರಿಸುತ್ತಿರುವ “ಇನ್‌ಸ್ಟ್ರೆಮೆಂಟ್ ಲ್ಯಾಂಡಿಂಗ್ ಸಿಸ್ಟಂ’ (ಐಎಲ್‌ಎಸ್) ಕಟ್ಟಡದಲ್ಲಿಯೇ ನೂತನ ರಾಡಾರ್ ಸ್ಥಾಪನೆಗೆ ಯೋಜಿಸಲಾಗಿದೆ. ಹೆಚ್ಚುವರಿಯಾಗಿ ಕೆಲವು ಪಿಲ್ಲರ್‌ಗಳಷ್ಟೇ ಬೇಕಿರುವುದರಿಂದ ಸ್ಥಾಪನೆ ವೆಚ್ಚವೂ ಕಡಿಮೆಯಾಗಲಿದೆ.
ಮಂಗಳೂರು ನಿಲ್ದಾಣದಲ್ಲಿ 20 ಕೋ.ರೂ ವೆಚ್ಚದಲ್ಲಿ “ಟಾಪ್ ಫ್ಲೋರ್ ವೆದರ್ ರಾಡಾರ್’ ಸ್ಥಾಪಿಸಲು ಕೇಂದ್ರ ಸರಕಾರ ಮೊದಲಿಗೆ ನಿರ್ಧರಿಸಿತ್ತು. ಶಕ್ತಿನಗರದಲ್ಲಿ ಜಾಗ ಗುರುತಿಸಿ 5 ಮಹಡಿ ಕಟ್ಟಡ ನಿರ್ಮಾಣಕ್ಕೂ ಉದ್ದೇಶಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡದ್ದರಿಂದ ಎಸ್. ಬ್ಯಾಂಡ್ ಮಾದರಿಯ ರಾಡಾರ್ ಆರಂಭಿಸಲು ಚಿಂತನೆ ನಡೆಸಿದ್ದು, ಒಪ್ಪಿಗೆ ಲಭಿಸಿದೆ.
Related Articles
ಈ ರಾಡಾರ್ ವಾತಾವರಣಕ್ಕೆ ಸಂಕೇತಗಳನ್ನು ರವಾನಿಸುತ್ತದೆ. ಪ್ರತಿಫಲನಗೊಂಡು ಹಿಂದಿರುಗಿದ ಈ ಸಂಕೇತಗಳನ್ನು ವಿಶ್ಲೇಷಿಸಿ ಹವಾಮಾನ ಮುನ್ಸೂಚನೆ ನೀಡಲಾಗುತ್ತದೆ. ಇದರಿಂದ ಮೋಡಗಳ ಸ್ಥಿತಿಗತಿ, ಗಾತ್ರ, ಸಾಂದ್ರತೆ, ತೇವಾಂಶ ಇತ್ಯಾದಿ ನಿಖರವಾಗಿ ತಿಳಿಯುತ್ತದೆ. ಇದರ ಮೂಲಕ ಸ್ಯಾಟಲೈಟ್ ಚಿತ್ರಗಳು, ಭಾತರದ ಯಾವುದೇ ಮೂಲೆಯ ಹವಾಮಾನ ಕೂಡ ತಿಳಿಯಲು ಸಾಧ್ಯ. ಸುಮಾರು 300 ಕಿ.ಮೀ. ವ್ಯಾಪ್ತಿಯಲ್ಲಿ ಹವಾ ಮಾನ ಸಂಬಂಧಿ ಯಾವುದೇ ಅಪಾಯಕಾರಿ ವಿದ್ಯಮಾನಗಳಿದ್ದರೂ ಅದು ಮುನ್ಸೂಚನೆ ನೀಡಬಲ್ಲುದು. ಇದರಿಂದ ಜಿಲ್ಲಾಡಳಿತಕ್ಕೆ ಮುನ್ನೆಚ್ಚರಿಕೆ ಕೈಗೊಳ್ಳಲು ಸಾಧ್ಯ.
Advertisement
ಶೀಘ್ರ ಕಾರ್ಯಾರಂಭಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ-ನಿರ್ಗಮನ ಸಂದರ್ಭ ಹವಾಮಾನದ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಅತ್ಯಂತ ಸುಧಾರಿತ ಎಸ್. ಬ್ಯಾಂಡ್ ರಾಡಾರ್ ಸ್ಥಾಪಿಸಲು ಕೇಂದ್ರ ಹವಾಮಾನ ಇಲಾಖೆ ನಿರ್ಧರಿಸಿದೆ. ಶೀಘ್ರದಲ್ಲಿ ಈ ಕುರಿತಂತೆ ಕಾರ್ಯ ಆರಂಭವಾಗಲಿದೆ.
- ಯದುಕಲೇಶ್ ಎಸ್., ಹವಾಮಾನ ತಜ್ಞರು, ಮಂಗಳೂರು ಅಂ. ವಿಮಾನ ನಿಲ್ದಾಣ - ದಿನೇಶ್ ಇರಾ