Advertisement
ಆಗ 27; ಈಗ 52ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಎಸ್. ಅಂಗಾರ ಬಳಿಕ ಬಿಜೆಪಿ ಕಾರ್ಯಕರ್ತರಾಗಿ ಪಕ್ಷದ ಸಂಘಟನೆ ಯಲ್ಲಿ ತೊಡಗಿದರು. ನಿತ್ಯ ಜೀವನ ನಿರ್ವಹಣೆಗೆ ಸ್ವತಃ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಅವರಿಗೆ 1989 ರಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಆಗ ಅವರಿಗೆ 27 ವರ್ಷ. ಈಗ ವಯಸ್ಸು 52. ಮೊದಲ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಕುಶಲ ವಿರುದ್ಧ ಪರಾಜಿತ ರಾದರು. ಬಳಿಕ 1994ರಿಂದ ಜಯಶಾಲಿ ಯಾಗಿದ್ದಾರೆ. ಐದು ಬಾರಿಯೂ ಗೆಲುವಿನ ಅಂತರ ಏರಿಳಿತ ಕಂಡಿದೆ. 2004ರಲ್ಲಿನ ಗೆಲುವು ಅತಿ ಹೆಚ್ಚು ಅಂತರದ್ದು. 2013 ರಲ್ಲಿ ಕೂದಲೆಳೆಯ ಅಂತರದಿಂದ ಗೆಲುವು ಸಾಧಿಸಿದ್ದರು.
ಮೂರು ಚುನಾವಣೆಗಳಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ ರುವ ಡಾ| ರಘು ಅವರೇ ಈ ಬಾರಿಯೂ ಸ್ಪರ್ಧಿಸುವುದು ಬಹು ತೇಕ ಖಚಿತ ವಾಗಿದೆ. ಅಭ್ಯರ್ಥಿ ಘೋಷಣೆಯಷ್ಟೇ ಬಾಕಿ ಉಳಿದಿದ್ದು, ಎ. 19ರಂದು ಅವರು ನಾಮಪತ್ರ ಸಲ್ಲಿಸುವ ಕುರಿತು ಬ್ಲಾಕ್ ಕಾಂಗ್ರೆಸ್ ಮುಖಂಡರು ಮಾಹಿತಿ ನೀಡಿದ್ದಾರೆ. ಹೀಗಾಗಿ ಎಸ್. ಅಂಗಾರ ಮತ್ತು ಡಾ| ರಘು ಪರಸ್ಪರ ಮುಖಾಮುಖೀ ಆಗುತ್ತಿರುವುದು ಇದು ನಾಲ್ಕನೇ ಬಾರಿ. ಇವರಿಬ್ಬರೂ 2014ರಲ್ಲಿ ಪ್ರಥಮ ಬಾರಿಗೆ ಮುಖಾಮುಖೀ ಯಾಗಿದ್ದರು. ಆಗ ಅಂಗಾರ ಅವರು 19,085 ಮತ ಗಳಿಂದ ಗೆದ್ದಿದ್ದರು. ಬಳಿಕ 2008ರಲ್ಲಿ ಅಂತರ 4,322ಕ್ಕೆ ಕುಸಿದಿತ್ತು. ಕಳೆದ ಬಾರಿ 1,373 ಮತಗಳ ಅಂತರದಿಂದ ಅಂಗಾರ ಗೆಲುವು ಸಾಧಿಸಿದ್ದರು.