Advertisement

ಸುಬ್ಬಲಕ್ಷ್ಮಿ ಮೊಮ್ಮಕ್ಕಳ ಗಾಯನಕ್ಕೆ ತಲೆ ದೂಗಿದ ಪ್ರಧಾನಿ 

11:35 AM Sep 20, 2017 | Team Udayavani |

ಹೊಸದಿಲ್ಲಿ: ಸಂಗೀತ ಸಾಮ್ರಾಜ್ಞೆ, ಭಾರತ ರತ್ನ ಎಂ.ಎಸ್‌.ಸುಬ್ಬಲಕ್ಷ್ಮಿ ಅವರ ಮೊಮ್ಮಕ್ಕಳಾದ ಎಸ್‌ ಐಶ್ವರ್ಯ ಮತ್ತು ಎಸ್‌ ಸೌಂದರ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರೆದುರು ದ್ವಂದ ಪ್ರಸ್ತುತಿಯಲ್ಲಿ ದೇವರ ನಾಮ ಹಾಡಿ ಶಹಬ್ಬಾಸ್‌ಗಿರಿ ಪಡೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ನೀವೂ ವೀಕ್ಷಿಸಿ.

Advertisement

ಪ್ರಧಾನಿ ಕಚೇರಿಗೆ ತಂದೆ ವಿ.ಶ್ರೀನಿವಾಸನ್‌ ಮತ್ತು ತಾಯಿ ಗೀತಾ ಶ್ರೀನಿವಾಸನ್‌ ಅವರೊಂದಿಗೆ ಭೇಟಿ ನೀಡಿದ ಸಹೋದರಿಯರು, ಸುಬ್ಬಲಕ್ಷಿ ಅವರು 1966 ರಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರಸ್ತುತ ಪಡಿಸಿದ್ದ ‘ಮೈತ್ರೀಮ್ ಭಜತಾ’ ಕೃತಿಯನ್ನು  ಕರ್ನಾಟಕ ಸಂಗೀತ ಶೈಲಿಯಲ್ಲಿ ಹಾಡಿ ಮೆಚ್ಚುಗೆಗೆ ಭಾಜನರಾದರು. ಸಹೋದರಿಯರು ಹಾಡುತ್ತಿರುವ ವೇಳೆ ಪ್ರಧಾನಿ ಮೋದಿ ತಾಳ ಹಾಕುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next