Advertisement
ಬಂಧಿತ 11ನೇ ತರಗತಿ ವಿದ್ಯಾರ್ಥಿಯು “ಶಾಲೆಗ ರಜೆ ಘೋಷಿಸಲ್ಪಟ್ಟರೆ ಶಾಲಾ ಪರೀಕ್ಷೆಗಳು ಮುಂದೆ ಹೋಗುವುದೆಂಬ ಲೆಕ್ಕಾಚಾರದಲ್ಲಿ ಬಾಲಕನನ್ನು ಕತ್ತು ಸೀಳಿ ಕೊಂದಿರಬಹುದು’ ಎಂಬ ಶಂಕೆ ಸಿಬಿಐಗೆ ಇರುವಂತಿದೆ ಎಂದು ವರದಿಗಳು ಹೇಳಿವೆ.
Related Articles
Advertisement
ಕಳೆದ ಸೆ.8ರಂದು ರಯಾನ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಲ್ಪಟ್ಟ ಸ್ಥಿತಿಯಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿತ್ತು. ಪೊಲೀಸರು ಶಾಲಾ ಬಸ್ ನಿರ್ವಾಹಕ ಅಶೋಕ್ ಕುಮಾರ್ ಎಂಬಾತನನ್ನು ಈ ಕೊಲೆ ಕೇಸಿಗೆ ಸಂಬಂಧಿಸಿ ಬಂಧಿಸಿತ್ತು.
ಪೊಲೀಸ್ ಕಸ್ಟಡಿಯಲ್ಲಿ ಕುಮಾರ್ ತನ್ನ “ಅಪರಾಧ”ವನ್ನು ಒಪ್ಪಿಕೊಂಡಿದ್ದ. ಆದರೆ ಆತನ ಕುಟುಂಬದವರು ಮತ್ತು ಸ್ನೇಹಿತರು, ಅಮಾಯಕ ಕುಮಾರ್‌ನನ್ನು ಈ ಕೇಸಿನಲ್ಲಿ ಸಿಕ್ಕಿಸಲಾಗಿದೆ ಎಂದು ಹೇಳಿದ್ದರು.
ರಯಾನ್ ಶಾಲಾ ವಿದ್ಯಾರ್ಥಿಯ ಈ ಅಮಾನುಷ ಕೊಲೆ ಪ್ರಕರಣವು ದೇಶಾದ್ಯಂತ ಆಕ್ರೋಶ ಹುಟ್ಟಿಸಿತ್ತು. ಪರಿಣಾಮವಾಗಿ ಸಿಬಿಎಸ್‌ಸಿ ಗೆ ಹೊಸ “ಶಾಲಾ ಸುರಕ್ಷಾ ಮಾರ್ಗದರ್ಶಿ ಸೂತ್ರಗಳನ್ನು’ ಪರಿಚಯಿಸುವುದು ಅನಿವಾರ್ಯವಾಯಿತು. ಸಿಬಿಎಸ್‌ಸಿ ಮಂಡಳಿಯು ಆಗ “ಶಾಲಾ ಕ್ಯಾಂಪಸ್ ಒಳಗೆ ಮಕ್ಕಳ ಸುರಕ್ಷೆ ಹಾಗೂ ಭದ್ರತೆಯು ಸಂಪೂರ್ಣವಾಗಿ ಶಾಲಾಡಳಿತದ ಹೊಣೆಗಾರಿಕೆಯಾಗಿರುತ್ತದೆ’ ಎಂದು ಕಟ್ಟಪ್ಪಣೆ ಮಾಡಿತ್ತು.